ಬಿಗ್ ಬಾಸ್ ಮನೆಯಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಆಸಿಯಾ -ಗಾನವಿ ಮಧ್ಯೆ ಮಾತಿನ ಜಟಾಪಟಿ.
ಧಮ್ಮು ತಾಕತ್ತಿದ್ರೆ ಬಿಚ್ಚಿಡು ಎಂದು ಗಾನವಿ ವಿರುದ್ಧ ಚೀರಾಡಿದ ಆಸಿಯಾ.
'ಆಸಿಯಾ ಫೈರ್ ಡೋಸ್ ವಾಪಸ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು.
Bigg Boss Kannada: ಬಿಗ್ ಬಾಸ್ ಮನೆಯಿಂದ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಕುಮಾರಿ ಹೊರನಡೆದ ಬೆನ್ನಲ್ಲೇ ನಾಮಿನೇಷನ್ ಕಾವು ಜೋರಾಗಿದೆ. ಗಾನವಿ, ಆಸಿಯಾ ಅವರನ್ನು ನಾಮಿನೇಟ್ ಮಾಡಿ ಕೊಟ್ಟ ಕಾರಣಗಳು ಧಮ್ಮು ತಾಕತ್ತಿನ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಕೊಟ್ಟ ಚಟುವಟಿಕೆ ಪ್ರಕಾರ, ಒಬ್ಬರ ಭಾವಚಿತ್ರಕ್ಕೆ ಕೊಡಲಿಯಿಂದ ಹೊಡೆದು ಸೂಕ್ತ ಕಾರಣ ಕೊಟ್ಟು ನಾಮಿನೇಟ್ ಮಾಡಬೇಕಿತ್ತು. ಅದರಂತೆ ಯಶಸ್, ಧನುಷ್, ಗಗನ್, ಶಾಸ್ತ್ರಿ, ತಾಂಡವ್, ಪ್ರಶಾಂತ್ ಸೇರಿದಂತೆ ಎಲ್ಲರೂ ನಾಮಿನೇಟ್ ಮಾಡಿದ್ದಾರೆ. ಇದರಲ್ಲಿ ಹೆಚ್ಚು ಜಿದ್ದಾಜಿದ್ದಿಗೆ ಕಾರಣವಾಗಿದ್ದು ಗಾನವಿ ಮತ್ತು ಆಸಿಯಾ ನಡುವಿನ ನಾಮಿನೇಷನ್ ಪ್ರಕ್ರಿಯೆ.
ಸದ್ಯ ರಿಲೀಸ್ ಆದ ಪ್ರೊಮೋ ಪ್ರಕಾರ,ಗಾರ್ಡನ್ ಏರಿಯಾದಲ್ಲಿ ಪ್ರತಿ ಸ್ಪರ್ಧಿಗಳ ಭಾವ ಚಿತ್ರ ಇಡಲಾಗಿತ್ತು,. ಮನೆಯಲ್ಲಿ ಯಾರು ಇರಲು ಅರ್ಹರಲ್ಲವೋ ಅವರ ಮುಖಕ್ಕೆ ಕೊಡಲಿಯಿಂದ ಹೊಡೆದು, ಸೂಕ್ತ ಕಾರಣವನ್ನು ನೀಡಬೇಕಾಗಿತ್ತು. ಯಶಸ್ ಧನುಷ್ರನ್ನು ನಾಮಿನೇಟ್ ಮಾಡಿದ್ರೆ, ಗಾನವಿ ಆಸಿಯಾರನ್ನು ನಾಮಿನೇಟ್ ಮಾಡಿದರು.
ನಾಮಿನೇಟ್ ನಂತರ ಕ್ಯಾಮೆರಾ ಮುಂದೆ ಗಾನವಿ ಹೇಳಿದ್ದು ಹೀಗೆ, 'ಈ ಮನೆಗೆ ಆಸಿಯಾ ಕಾಂಟ್ರಿಬ್ಯೂಷನ್ ಏನೂ ಇಲ್ಲ ಎನಿಸುತ್ತಿದೆ. ಆಸಿಯಾ ತಮ್ಮನ್ನು ಡಿಫೆಂಡ್ ಮಾಡಿಕೊಳ್ಳುತ್ತಾ..ನಾನು ಆಡಿದಷ್ಟು ಟಾಸ್ಕ್ನಲ್ಲಿ ನೀನು ಆಡಿಲ್ಲ ಗೆದ್ದೂ ಇಲ್ಲ ಎನ್ನುತ್ತಾರೆ. ಇದಕ್ಕೆ ಗಾನವಿ ಪ್ರತ್ಯುತ್ತರವಾಗಿ ಆಡಿಲ್ವಾ..ಗೊತ್ತಾಗುತ್ತೆ ಗಾನವಿ ಯಾರಂತ ಒಂದೊಂದು ಬಿಚ್ಚಿಡ್ತೀನಿ ನಿಮ್ದೆಲ್ಲಾ ಎನ್ನುತ್ತಾರೆ. ನಿಂಗೆ ಧಮ್ಮಿದ್ರೆ, ತಾಕತ್ತಿದ್ರೆ ಬಿಚ್ಚಿಡು ನೋಡೋಣ' ಎನ್ನುತ್ತಾರೆ ಆಸಿಯಾ.
ಕಳೆದ ಕೆಲವು ವಾರದಿಂದ ಆಸಿಯಾನನ್ನು ಗಾನವಿ ಮತ್ತು ಸೋನಿಕಾ ಗುರಿಯಾಗಿಸಿಕೊಂಡಿದ್ದಾರೆ. ಹಳೆಯ ವೈಮನಸ್ಸನ್ನು ಮುಂದಿಡುತ್ತಿದ್ದಾರೆ. ಶೆಟ್ಟಿ ಎಕ್ಸ್ಪ್ರೆಸ್ಗೆ ಹತ್ತಿ ನಾಮಿನೇಷನ್ ಮಾಡುವ ಪ್ರಕ್ರಿಯೆಯಲ್ಲಿ ಗಾನವಿ ಮತ್ತು ಸೋನಿಕಾ ಇಬ್ಬರು ಸಹ ಆಸಿಯಾರನ್ನು ನಾಮಿನೇಟ್ ಮಾಡಿದ್ದರು. ಈ ವಾರವೂ ಇಬ್ಬರು ಅವರನ್ನೇ ಟಾರ್ಗೆಟ್ ಮಾಡಿ ನಾಮಿನೇಟ್ ಮಾಡುತ್ತಿದ್ದಾರೆ. ಗಾನವಿ ಆಸಿಯಾರನ್ನು ನಾಮಿನೇಟ್ ಮಾಡುವಾಗ ಕೊಡುವ ಕಾರಣಗಳು ಸೂಕ್ತವೇ ಎನಿಸೋದಿಲ್ಲ. ಅರ್ಥವಿಲ್ಲದ ಕಾರಣ ಕೊಡ್ತಾರೆ ಎಂದು ವೀಕ್ಷಕರು ಲೇವಡಿ ಮಾಡಿದ್ದಾರೆ.
ಕಳೆದ ವಾರ ಗಾನವಿ ಗೌಡ ಅವರನ್ನು ಕಷ್ಟದ ಸಂದರ್ಭದಲ್ಲಿ ಆಸಿಯಾ ಸೇವ್ ಮಾಡಿದ್ದರು. ನಾನು ನಿನ್ನನ್ನು ಸೇವ್ ಮಾಡ್ತೇನೆ ಎಂದು ಬಿಕ್ಕಿಬಿಕ್ಕಿ ಆಸಿಯಾ ಬಳಿ ಅತ್ತಿದ್ದರು. ಆದರೆ, ಈ ವಾರ ಗಾನವಿಗೆ ಬಂದ ಅಧಿಕಾರ ಬಳಸಿ ಆಸಿಯಾ ಅವರನ್ನೇ ನೇರವಾಗಿ ನಾಮಿನೇಟ್ ಮಾಡಲಾಗಿದೆ. ತಾನು ಕಷ್ಟದಲ್ಲಿ ಸಹಾಯ ಮಾಡಿದ್ದನ್ನು ಮರೆತು ಗಾನವಿ ಬೆನ್ನಿಗೆ ಇರಿದಿದ್ದಾರೆ ಎಂದು ಆಸಿಯಾ ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಸಂಡೇ ವಿತ್ ಬಾದ್ಷಾದಲ್ಲಿ ವಿಟಿ ಸಹ ತೋರಿಸಲಾಗಿತ್ತು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮುಂಜಾನೆ ರಿಲೀಸ್ ಆದ ನಾಮಿನೇಟ್ ಪ್ರಕ್ರಿಯೆ ಪ್ರೊಮೋಗಳನ್ನು ಹಲವರು ಹಂಚಿಕೊಂಡು ಆಸಿಯಾ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಆಸಿಯಾ ವರ್ಸಸ್ ಸೌಂದರ್ಯಾ ಆಗುತ್ತೆ ಎಂದುಕೊಂಡರೆ ಇಲ್ಲಿ ಆಸಿಯಾ ವರ್ಸಸ್ ಗಾನವಿ ಆಗ್ತಿದ್ಯಲ್ಲ ಗುರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆಸಿಯಾ ಫೈರ್ ಡೋಸ್ ಮತ್ತೆ ಬಂದಿದೆ
'ಆಸಿಯಾ ಸರಿಯಾಗಿ ಕೊಡು, ಗಟರ್ ಗಣವಿ 'ನಿನ್ನಲ್ಲಿ ದಮ್ ಇದ್ರೆ, ತಾಕತ್ ಇದ್ರೆ' ಬಿಚ್ಚಿಡಮ್ಮ ಅದೇನೊ ಅಂತ. ಈ ಮಹಿಳೆ ವೈಯಕ್ತಿಕವಾಗಿ ಹೋದಾಗಲೆಲ್ಲಾ ಬೆಲ್ಟ್ ಟ್ರೀಟ್ಮೆಂಟ್‌ಗೆ ಅರ್ಹಳಾಗಿದ್ದಾಳೆ, ಅವಳ ಆಸೆಯನ್ನು ಬಿಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ, (ಏಜೆನ್ಸೀಸ್).