ಸಿನಿವಾಣಿ

ಕಿರಣ್​ ಶಾಸ್ತ್ರಿ ಪ್ರಾರ್ಥನೆಗೆ ಹೂ ಕೊಡದ ಜಗದಂಬೆ; 'ಮಮ್ಮಿ ಗಿವ್ ದ ಒನ್ ಫ್ಲವರ್ ಪ್ಲೀಸ್'ಎಂದು ಮೂರ್ತಿ ಮುಂದೆ ಠಿಕಾಣಿ..BBK 13

  • ಬಿಗ್​ಬಾಸ್​ನಲ್ಲಿ ದೇವರ ಮುಂದೆ ಹೂವಿಗಾಗಿ ಕಿರಣ್ ಶಾಸ್ತ್ರಿ ವಿಶೇಷ ಪ್ರಾರ್ಥನೆ.

  • ಹೂ ಕೊಡವ್ವ, ಯಾಕೆ ಹಠ ಎಂದು ಚಾಮುಂಡಿ ಮುಂದೆ ಠಿಕಾಣಿ.

  • ಅಂಬೆ ಜಗದಂಬೆ, ಅಮ್ಮ ಹೂ ಕೊಡು ಎಂದು ಗೋಗೆರೆದ ಶಾಸ್ತ್ರಿ.

ಕಿರಣ್​ ಶಾಸ್ತ್ರಿ ಅವರು ಸಾಮಾನ್ಯವಾಗಿ ಬಿಗ್​ಬಾಸ್ ಮನೆಯಲ್ಲಿರುವ ದೇವಿ ಚಾಮುಂಡಿ ಮುಂದಿಟ್ಟು ಪ್ರಾರ್ಥಿಸಿ, ಹೂ ಬೇಡುತ್ತಾರೆ. ದೇವಿ ಯಾವ ಕಡೆ ಹೂ ಕೊಡುತ್ತದೆಯೋ ಅದನ್ನು ನೋಡಿ ಇಷ್ಟಾರ್ಥ ಫಲಿಸುತ್ತೆ ಎನ್ನುವುದು ಅವರ ನಂಬಿಕೆ. ಆದರೆ, ಈ ಬಾರಿ ಜಗ್ಗ, ಧನುಷ್, ಲಿಖಿತ್​​ ಎಲ್ಲರೂ ಕುಳಿತು ದೇವರನ್ನು ಒಲಿಸಿಕೊಳ್ಳಲು ಹರಸಾಹಸಪಡುತ್ತಿರುವ ಪ್ರೊಮೋ ರಿಲೀಸ್ ಆಗಿದೆ.

ಬಿಗ್​ಬಾಸ್ ಸೀಸನ್​ 13ರಲ್ಲಿ ಟಾಸ್ಕ್​ ಇದ್ದರೂ ಇಲ್ಲದೇ ಹೋದರೂ ಸಹ ಎಲ್ಲ ವಿಚಾರಕ್ಕೂ ಜಗಳ, ಕೋಪ-ತಾಪವಾಗೋದು ಸಾಮಾನ್ಯವಾಗಿ ಹೋಗಿದೆ. ಇದು ಪ್ರೇಕ್ಷಕರಲ್ಲಿ ಬೇಸರ ಉಂಟಾಗುವಂತೆ ಮಾಡಿದೆ. ಈಗೀಗ ತಾಂಡವ್​-ಗಗನ್​ ಹಾಗೂ ಸೌಂದರ್ಯ ಶೆಟ್ಟಿ, ಕಿರಣ್​ ಶಾಸ್ತ್ರಿಯ ಅವತಾರಗಳು ನಗು ತರುವಂತೆ ಮಾಡುತ್ತಿದೆ.

ಪ್ರೋಮೋದಲ್ಲಿ ಏನಿದೆ?

ಕಿರಣ್​ ಶಾಸ್ತ್ರಿ ದೇವಿ ಮುಂದೆ ನಿಂತು, ನಾನು ಆಡಿದ ಆಟ ಚೆನ್ನಾಗಿತ್ತು.ಮುಂದಿನ ದಿನಗಳಲ್ಲಿ ತಮಗೇ ರಕ್ಷಣೆ ನೀಡುವುದಾದರೆ ಹೂವನ್ನು ಕರುಣಿಸುವಂತೆ ಬೇಡಿಕೆ ಇಟ್ಟರು. ಶಾಸ್ತ್ರಿ ಎಷ್ಟೇ ಬೇಡಿಕೊಂಡರು ಹೂವು ಬೀಳಲಿಲ್ಲ . ಅವರ ಜೊತೆ ಲಿಖಿತ್​, ಜಗದೀಶ್​, ಧನುಷ್​ ಕುಳಿತು ಪ್ರಾರ್ಥಿಸಿದರೂ ಆದರೂ ಸಹ ಹೂ ಬೀಳಲಿಲ್ಲ.

ದೇವ್ರಿಗೆ ಬಕೆಟ್ ಹಿಡ್ದ ಶಾಸ್ತ್ರಿ

"ಬೆಳಗ್ಗೆ ನಿನಗೆ ಚೆನ್ನಾಗಿ ಕಾಣುತ್ತೆ ಅಲ್ಲೇ ಇಟ್ಕೋ ಅಂತ ನಾನು ಹೇಳಿದ್ನಲ್ಲ, ಅದಕ್ಕೆ ಏನಾದ್ರೂ ಅಲ್ಲೇ ಇಟ್ಕೊಂಡಿದತಾ ಎಂದಿದ್ದಾರೆ. ಪಾಪ ದೇವರಿಗೂ ಅದು ಪ್ರೆಷರ್ ಆಗಿಬಿಟ್ಟಿದೆ ಎಂದು ಕಿರಣ್ ಶಾಸ್ತ್ರಿ ತಮಾಷೆಯಾಗಿ ಹಾಗೂ ಭಾವುಕರಾಗಿ ಮಾತನಾಡಿದ್ದಾರೆ. ಮುಂದುವರಿದು, ಭುವನೇಶ್ವರಿ ತಾಯಿ, ಅಂಬೆ ಮಮ್ಮಿ, ಗಿವ್ ದ ಒನ್ ಫ್ಲವರ್ ಪ್ಲೀಸ್ ಎಂದು ಹಾಡುತ್ತಾ ಪ್ರಾರ್ಥಿಸಿದರೂ. ಮಲಗಿ ಠಿಕಾಣಿ ಹೂಡಿದರೂ ಸಹ ದೇವಿ ತನಗೆ ಹೂವು ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಟವಲ್​ನಿಂದ ಗಾಳಿ ಆಡಿಸಿ, ಹೂ ಬೀಳುವಂತೆ ಮಾಡಿರುವುದು ವಿಡಿಯೋದಲ್ಲಿ ಇದೆ.

ನಿನ್ನೆ ಕೊಟ್ಟಿದ್ದ ಹೂ ಇಂದು ಇಲ್ಲ

ಜಗದೀಶ್​ ತಾಯಿ ಆರಾಮಾಗಿ ಇದ್ದಾರೆ,. ಚೆನ್ನಾಗಿ ಗೇಮ್ ಆಡು ಅಂತ ಹಾರೈಸಿ ಹೂ ಕೊಡಮ್ಮ ಎಂದ ಕೂಡಲೇ ಚಾಮುಂಡಿ ತಲೆಯಲ್ಲಿದ್ದ ಚೆಂಡೂ ಹೂ ಬಲಭಾಗಕ್ಕೆ ಬಿದ್ದಿತ್ತು. ದೇವರು ಹೇಳಾಯ್ತು ಆರಾಮಾಗಿ ಆಟ ಆಡು ನಡಿ ಎಂದು ಕರೆದುಕೊಂಡು ಹೋದರು. ಆದರೆ, ನಿನ್ನೆಯ ಟ್ರಿಕ್​ ಇಂದು ಫಲಿಸದ ಕಾರಣ ಬೇಸರ ವ್ಯಕ್ತಪಡಿಸಿದ್ರು.

ಮಠ ಆಯ್ತು ಬಿಬಿಕೆ ಎಂದ ನೆಟ್ಟಿಗರು

ಕಿರಣ್​ ಶಾಸ್ತ್ರಿ ಜೊತೆ ಇತರ ಸ್ಪರ್ಧಿಗಳು ಸಹ ಚಾಮುಂಡಿ ಮುಂದೆ ಕುಳಿತು ಪೂಜೆ ಮಾಡಿ ಭಜನೆ ಮಾಡುತ್ತಿರುವ ಪ್ರೋಮೋ ಕಂಡ ವೀಕ್ಷಕರು ಬಿಗ್​ಬಾಸ್​ ಅನ್ನು ಮಠ ಮಾಡಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).