ಬಾಲಿವುಡ್ ಬೆಡಗಿ ಭೂಮಿ ಪೇಡ್ನೇಕರ್ ಸದ್ಯದಲ್ಲೇ ನಿರ್ವಪಕ ಸಂಜಯ್ ಲೀಲಾ ಭನ್ಸಾಲಿ ಅವರ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗಕ್ಕೆ ಹೊಸ ನಿರ್ದೇಶಕರೊಬ್ಬರ ಪದಾರ್ಪಣೆಯೂ ಆಗಲಿದೆ.
ಸದ್ಯ ‘ದುರ್ಗಾವತಿ’ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಭೂಮಿ, ಭನ್ಸಾಲಿ ಅವರ ನಿರ್ವಣದಲ್ಲಿ ಮೂಡಿಬರಲಿರುವ ನೂತನ ಚಿತ್ರಕ್ಕೂ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಹೊಸ ಪ್ರತಿಭೆಯೊಬ್ಬರು ಆಕ್ಷನ್-ಕಟ್ ಹೇಳಲಿದ್ದು, ಅವರ ಹೆಸರು ಇನ್ನಷ್ಟೇ ಬಹಿರಂಗ ಆಗಬೇಕಿದೆ.
ಇನ್ನೂ ಶೀರ್ಷಿಕೆ ಅಂತಿಮಗೊಳಿಸದ ಈ ಚಿತ್ರದಲ್ಲಿ ಭೂಮಿ ನಾಯಕಿ ಆಗಿ ಕಾಣಿಸಲಿದ್ದು, ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಉಳಿದ ವಿವರವನ್ನು ಭನ್ಸಾಲಿ ಸದ್ಯ ಗುಟ್ಟಾಗಿ ಇರಿಸಿದ್ದು, ಸದ್ಯದಲ್ಲೇ ಒಂದೊಂದೇ ಮಾಹಿತಿ ಬಹಿರಂಗಗೊಳಿಸಲಿದ್ದಾರೆ ಎನ್ನಲಾಗಿದೆ. -ಏಜೆನ್ಸೀಸ್