ಹೈದರಾಬಾದ್: ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕಳೆದ ಎರಡು ವರ್ಷಗಳಿಂದ ಇದೇ ಚಿತ್ರದ ಗುಂಗಿನಲ್ಲಿದ್ದ ಚಿರಂಜೀವಿ, ಇದೀಗ ಅದರಿಂದ ಹೊರಬಂದು ಇನ್ನೆರಡು ಚಿತ್ರಗಳಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಪೈಕಿ ಅವರು 'ಭೋಲಾ ಶಂಕರ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅದು ತಮಿಳಿನ 'ವೇದಲಾಂ'ನ ರೀಮೇಕ್ ಆಗಿದೆ.
ಇದನ್ನೂ ಓದಿ:
'ಭೋಲಾ ಶಂಕರ್' ಚಿತ್ರದಲ್ಲಿ ಚಿರಂಜೀವಿ ಅವರ ಸಹೋದರಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಭಾನುವಾರ ರಕ್ಷಾ ಬಂಧನದ ಅಂಗವಾಗಿ, ವಿಶೇಷ ಟೀಸರ್ವೊಂದು ಬಿಡುಗಡೆ ಮಾಡಲಾಗಿದೆ. ಚಿರಂಜೀವಿ ಅವರಿಗೆ ಕೀರ್ತಿ ರಾಖಿ ಕಟ್ಟುವ ಟೀಸರ್ ಆಗಿದ್ದು, ಈ ಮೂಲಕ ಇದೊಂದು ಬರೀ ಆಕ್ಷನ್ ಚಿತ್ರವಷ್ಟೇ ಅಲ್ಲ, ಅಣ್ಣ-ತಂಗಿ ಬಾಂಧವ್ಯವೂ ಇದೆ ಎಂದು ತೋರಿಸಲಾಗಿದೆ.
ಇದಕ್ಕೂ ಮುನ್ನ, ಭಾನುವಾರ ರಕ್ಷಾ ಬಂಧನದ ಜತೆಗೆ ಚಿರಂಜೀವಿ ಅವರ ಹುಟ್ಟುಹಬ್ಬವಾಗಿದ್ದು, ಟಾಲಿವುಡ್ ನಟ ಮಹೇಶ್ ಬಾಬು ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇದನ್ನೂ ಓದಿ:
ಈ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸುತ್ತಿದ್ದಾರೆ. ರಮೇಶ್ ಈ ಹಿಂದೆ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ 'ವೀರ ಕನ್ನಡಿಗ' ಮತ್ತು 'ಅಜಯ್' ಚಿತ್ರಗಳನ್ನು ನಿರ್ದೇಶಿಸಿದ್ದರು.