ಸಿನಿವಾಣಿ

‘ಭರ್ಜರಿ’ಯಾಗಿ ಅತ್ತೆ ಮಗಳನ್ನೇ ವರಿಸಿದ ‘ಬಹದ್ದೂರ್’ ನಿರ್ದೇಶಕ ಚೇತನ್​ಕುಮಾರ್

ಮೈಸೂರು: ಸ್ಯಾಂಡಲ್​ವುಡ್​ನ ಕಮರ್ಷಿಯಲ್​ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಡೈರೆಕ್ಟರ್ ಬಹದ್ದೂರ್ ಚೇತನ್ ಕುಮಾರ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವಿಶೇಷ ಏನೆಂದರೆ ಅವರ ಸೋದರತ್ತೆಯ ಮಗಳನ್ನೇ ಚೇತನ್ ವರಿಸಿದ್ದು, ಮೈಸೂರಿನಲ್ಲಿ ಮದುವೆ ನಡೆದಿದೆ.

ಮೈಸೂರಿನ ಕಲ್ಪವೃಕ್ಷ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಪ್ತರು ಮತ್ತು ಸ್ಮೇಹಿತರ ಸಮ್ಮುಖದಲ್ಲಿ ಚೇತನ್​ ಕುಮಾರ್​, ಮಾನಸ ಅವರನ್ನು ವರಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಇದೀಗ ಲಾಕ್​ಡೌನ್​ನ ನಡುವೆಯೇ ಮದುವೆ ಆಗಿದ್ದಾರೆ.

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್, ನಟ ಧ್ರುವ ಸರ್ಜಾ, ನಿರ್ದೇಶಕ ‘ಅಯೋಗ್ಯ’ ಮಹೇಶ್ ಸೇರಿ ಚಿತ್ರರಂಗದ ಕೆಲವೇ ಕೆಲವು ಆಪ್ತರು ಈ ಮದುವೆಗೆ ಸಾಕ್ಷಿಯಾಗಿದ್ದರು. ಸದ್ಯ ಪುನೀತ್ ಅವರ ಜೇಮ್ಸ್ ಸಿನಿಮಾ ಶೂಟಿಂಗ್ ಸೇರಿ ಬೇರೆ ಬೇರೆ ಸಿನಿಮಾಗಳಿಗೆ ಬರವಣಿಗೆ ಕೆಲಸದಲ್ಲಿಯೂ ಚೇತನ್ ತೊಡಗಿಸಿಕೊಂಡಿದ್ದಾರೆ.