ಚಿತ್ರ: ಹೆಜ್ಜಾರು
ನಿರ್ದೇಶನ: ಹರ್ಷಪ್ರಿಯ
ನಿರ್ಮಾಣ: ಕೆಎಸ್ ರಾಮ್ಜಿ
ತಾರಾಗಣ: ಭಗತ್ ಆಳ್ವ, ಶ್ವೇತಾ ಡಿಸೋಜಾ, ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕೃಷ್ಣ, ಅರುಣ ಬಾಲರಾಜ್, ಮುನಿರಾಜು, ವಿನೋದ್ ಭಾರತಿ ಮುಂತಾದವರು
| ಹರ್ಷವರ್ಧನ್ ಬ್ಯಾಡನೂರು
ಸ್ಟಾರ್ : 3.5
ಪಾತ್ರಗಳ ಪರಿಚಯ, ಹೀರೋ ಬಿಲ್ಡಪ್, ಕಾಮಿಡಿ, ರೊಮ್ಯಾನ್ಸ್ ಅಂತ ಚಿತ್ರದ ಮೊದರ್ಲಧ ಸಾಮಾನ್ಯವಾಗಿ ನಿಧಾನವಾಗಿರುತ್ತದೆ. ದ್ವೀತಿಯಾರ್ಧ ವೇಗವಾಗಿ ಸಾಗಿ, ಕ್ಲೆಮ್ಯಾಕ್ಸ್ನಲ್ಲಿ ಹೆಚ್ಚು ಸೌಂಡ್ ಇರುತ್ತದೆ. ಆದರೆ, "ಹೆಜ್ಜಾರು' ಅಂತಹ ಚಿತ್ರವಲ್ಲ. ಮೊದರ್ಲಧದಲ್ಲಿಯೇ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಸಿನಿಮಾ. ಇಂರ್ಟವಲ್ನಲ್ಲಿ ಹಲವು ಪ್ರಶ್ನೆಗಳನ್ನು ಸೃಷ್ಟಿಸಿ, ದ್ವೀತಿಯಾರ್ಧದಲ್ಲಿ ಹಲವು ಟ್ವಿಸ್ಟ್ಗಳ ಮೂಲಕ ಕಾಡುವ ಸಿನಿಮಾ.
"ಪ್ರಪಂಚ ನರಳುತ್ತಿರೋದು ಕೆಟ್ಟವರಿಂದ ಅಲ್ಲ. ಅವರು ಮಾಡೋ ಕ್ರೌರ್ಯದಿಂದಾನೂ ಅಲ್ಲ. ಒಳ್ಳೆಯವರು ಸುಮ್ನೇ ಇರೋದ್ರಿಂದ. ನಂಬಿಕೆ ಇದೆ ಆ ಕೀಚಕನ ಕ್ರೌರ್ಯ ಅಡಗಿಸೋಕೆ ಯಾವೋನಾದ್ರೂ ಒಬ್ಬ ಬಂದೇ ರ್ಬತಾನೆ' ಅಂತಾನೆ ರಾಜಾರಾಮ (ಗೋಪಾಲಕೃಷ್ಣ ದೇಶಪಾಂಡೆ). 1965ರಲ್ಲಿ ಇನ್ಸ್ಪೆಕ್ಟರ್ ಜಾರ್ಜ್, ಕಾನ್ಸ್ಟೆಬಲ್ ಸತ್ಯಮೂರ್ತಿ ಇಬ್ಬರೂ ಠಾಣೆಯಿಂದ ತಪ್ಪಿಸಿಕೊಂಡು ಓಡುವ ಕಳ್ಳನನ್ನು ಹಿಡಿಯಲು ಹೋಗಿ ಹೆಜ್ಜಾರಿನ ಬೃಹತ್ ಆಲದಮರದ ಬಳಿ ಲಾರಿಗೆ ಸಿಲುಕಿ ಸಾಯುತ್ತಾರೆ. ಆ ಸತ್ಯಮೂರ್ತಿ ಮಗನೇ ಈ ರಾಜಾರಾಮ. ಅದಾಗಿ 30 ವರ್ಷಗಳ ನಂತರ ಅಂದ್ರೆ 1995ರಲ್ಲಿ ಕೃಷ್ಣಮೂರ್ತಿ ಎಂಬ ಕಾನ್ಸ್ಟೆಬಲ್, ಮತ್ತೊಬ್ಬ ಇನ್ಸ್ಪೆಕ್ಟರ್ ಮತ್ತು ಕಳ್ಳ ಕೂಡ ಅದೇ ಸ್ಥಳದಲ್ಲಿ ಅದೇ ರೀತಿ ಲಾರಿಗೆ ಬಲಿಯಾಗುತ್ತಾರೆ. ಕಾನ್ಸ್ಟೆಬಲ್ ಕೃಷ್ಣಮೂರ್ತಿ ಮಗ ಭಗತ್ (ಭಗತ್). ಅಲ್ಲಿಂದ ರಾಜಾರಾಮನ ಒಳಗಿದ್ದ ಡಿಟೆಕ್ಟಿವ್ ಎಚ್ಚರವಾಗುತ್ತಾನೆ. ಎರಡಕ್ಕೂ ಏನೋ ಲಿಂಕ್ ಇದೆ ಎಂದು ತನಿಖೆಗೆ ಇಳಿಯುತ್ತಾನೆ. "ಹೆಜ್ಜಾರಿನ' ಆಲದ ಮರದಲ್ಲಿ ಬ್ರಹ್ಮರಾಕ್ಷಸನಿದ್ದಾನಾ? ಎರಡು ಕಾಲಟ್ಟಗಳಲ್ಲಿ ನಡೆಯುವ ಟನೆಗಳಿಗೆ ಏನಾದರೂ ಸಂಬಂಧವಿದೆಯೇ? ಅದರ ಹಿಂದೆ ಯಾರದೋ ಕೈವಾಡಿವಿದೆಯಾ? ಎಂಬುದೇ 126 ನಿಮಿಷಗಳ ರೋಚಕ ಜರ್ನಿ "ಹೆಜ್ಜಾರು'.
ನಾಯಕ ಭಗತ್ ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆಯುತ್ತಾರೆ. ಜಾನಕಿ ಪಾತ್ರದಲ್ಲಿ ನಾಯಕಿ ಶ್ವೇತಾ ಮುಗ್ಧ ಅಭಿನಯ ನೀಡಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಜೀವವಾಗಿದ್ದಾರೆ. ತಮ್ಮ ನೋಟದಿಂದಲೇ ಪ್ರೇಕ್ಷಕರ ಮನಸ್ಸಿನೊಳಗೆ ಇಳಿಯುತ್ತಾರೆ. ವಿಲನ್ ದೇವಿ ಪಾತ್ರ ನವೀನ್ ಕೃಷ್ಣ ಅಬ್ಬರಿಸಿದ್ದಾರೆ. ಭ್ರಷ್ಟ ಪೊಲೀಸ್ ಇನ್ಸ್ಪೆಕ್ಟರ್ ಧರ್ಮ ತಲ್ವಾರ್, ಭಗತ್ ತಾಯಿ ಸಾವಿತ್ರಿಯಾಗಿ ಅರುಣ ಬಾಲರಾಜ್ ಸೇರಿ ಉಳಿದ ಕಲಾವಿದರು ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮೂರು ಕಾಲಟ್ಟಗಳಲ್ಲಿ ನಡೆಯುವ, ಹಲವು ಉಪಕಥೆಗಳಿರುವ, ಕಮರ್ಷಿಯಲ್ ೈಟ್ಸ್, ರೊಮ್ಯಾಂಟಿಕ್ ಸಾಂಗ್ಸ್, ತಾಯಿ ಮಗನ ಸೆಂಟಿಮೆಂಟ್, ಲವ್ಸ್ಟೋರಿ… ಹೀಗೆ ಹಲವು ಅಂಶಗಳಿಂದ ಕೂಡಿರುವ ಥ್ರಿಲ್ಲರ್ ಕಥೆಯನ್ನು ಹರ್ಷಪ್ರಿಯ ಚೆನ್ನಾಗಿ ನಿಭಾಯಿಸಿದ್ದಾರೆ. ದ್ವೀತಿಯಾರ್ಧದ ಪ್ರಾರಂಭದಲ್ಲಿ ಸ್ವಲ್ಪ ಎಡವಿದ್ದಾರೆ ಅಂತನ್ನಿಸಿದರೂ, ನಂತರ ನೀಡಿರುವ ಟ್ವಿಸ್ಟ್ಗಳು ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುತ್ತವೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಮರ್ ಛಾಯಾಗ್ರಹಣ "ಹೆಜ್ಜಾರು' ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತವೆ.