Bethlehem Kudumba Unit 
ಸಿನಿವಾಣಿ

ಬೆತ್ಲಹೇಮ್​​ ಕುಟುಂಬಂ ಯೂನಿಟ್ ಒಟಿಟಿಗೆ​​​ ಲಗ್ಗೆ; ಗಾಂಧಿ ಜಯಂತಿ ದಿನದಿಂದ ಸ್ಟ್ರೀಮಿಂಗ್ ಶುರು..Bethlehem Kudumba Unit

  • ಬೆತ್ಲಹೇಮ್​ ಕುಟುಂಬಂ ಯೂನಿಟ್ ಒಟಿಟಿಗೆ ರಿಲೀಸ್

  • ಅ.2ರಂದು ಜಿಯೋ ಹಾಟ್​ಸ್ಟಾರ್​ನಲ್ಲಿ ಬೆತ್ಲಹೇಮ್​ ಕುಟುಂಬಂ ಯೂನಿಟ್ ನೋಡಲು ಲಭ್ಯ

  • ಫೀಲ್​ ಗುಡ್​​ ಸಿನಿಮಾ ಬೆತ್ಲಹೇಮ್​ ಕುಟುಂಬಂ ಯೂನಿಟ್ ಎಂದ ಪ್ರೇಕ್ಷಕರು

Bethlehem Kudumba Unit : ವಿಶ್ವನಾಥ್​ ಆಂಡ್​ ಸನ್ಸ್​ ಸಿನಿಮಾದ ನಂತ್ರ ಸಿನಿ ಪ್ರೇಮಿಗಳು ಹೆಚ್ಚು ಕಾದಿದ್ದು ಬೆತ್ಲಹೇಮ್​ ಕುಟುಂಬಂ ಯೂನಿಟ್ ಚಿತ್ರಕ್ಕಾಗಿ. ಮಮಿತಾ ಬೈಜು ನಟನೆಯ ಈ ಸಿನಿಮಾ ಎಂದು ಒಟಿಟಿಗೆ ರಿಲೀಸ್​ ಆಗುತ್ತೆ ಎಂದು ಕಾತರದಿಂದ ಕಾಯುತ್ತಿದ್ದವರ ಕುತೂಹಲಕ್ಕೆ ಬ್ರೇಕ್​ ಬಿದ್ದಿದೆ.

ಅ.2ರಂದು ಒಟಿಟಿಗೆ

ಹೌದು, ಇದೇ ವಾರ ಗಾಂಧಿ ಜಯಂತಿ ದಿನದಂದು, ಅಂದರೆ ಅ.2ರಂದು ಬೆತ್ಲಹೇಮ್​ ಕುಟುಂಬಂ ಯೂನಿಟ್​ ಸಿನಿಮಾ ಜಿಯೋಹಾಟ್​ಸ್ಟಾರ್​ನಲ್ಲಿ ರಿಲೀಸ್ ಆಗಲಿದೆ ಎಂದು ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಮಾಲಿವುಡ್​ ಸಿನಿಮಾರಂಗದಲ್ಲಿ ಹೆಚ್ಚು ಸದ್ದು ಮಾಡಿದ ಬ್ಲಾಕ್​ ಬ್ಲಸ್ಟರ್​ ಸಿನಿಮಾ ಬೆತ್ಲಹೇಮ್​ ಕುಟುಂಬಂ ಯೂನಿಟ್​​ ಯಶಸ್ವಿ ಪ್ರದರ್ಶನ ಕಂಡಿದೆ. ಇದರ ಒಟಿಟಿ ಸ್ಟ್ರೀಮಿಂಗ್​ ಹಕ್ಕನ್ನು ಜಿಯೋ ಹಾಟ್​ಸ್ಟಾರ್​ ಪಡೆದುಕೊಂಡಿದೆ.

ಎಷ್ಟು ಗಳಿಕೆ?

ಆಗಸ್ಟ್​21ರಂದು ಗಿರೀಶ್ ಎ.ಡಿ. ಆಕ್ಷನ್​ ಕಟ್ ಹೇಳಿರುವ, ನಿವಿನ್ ಪೌಲಿ ಮತ್ತು ಮಮಿತಾ ಬೈಜು ಅಭಿನಯದ ಬೆತ್ಲಹೇಮ್​ ಕುಟುಂಬಂ ಯೂನಿಟ್​​ ರಿಲೀಸ್​ ಆಗಿತ್ತು. ಸೆಪ್ಟೆಂಬರ್ 4 ರಂದು ಚಿತ್ರಮಂದಿರಗಳಿಗೆ ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಗಳು ಬಂದವು. ಈ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದೆ. ಇದು ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಿತ್ರವಾಗಿ ಹೊರ ಹೊಮ್ಮಿದೆ.

ಬೆತ್ಲಹೇಮ್​ ಕುಟುಂಬಂ ಯೂನಿಟ್​​ ಬಗ್ಗೆ

ಇದೊಂದು ಫೀಲ್​ಗುಡ್​ ಸಿನಿಮಾವಾಗಿದೆ. ಕಾಲೇಜು ವಿದ್ಯಾರ್ಥಿನಿ ಆಶ್ಲೇ ಅಂದ್ರೆ ಮಮಿತಾ ಬೈಜು ತನಗಿಂತ ವಯಸ್ಸಿನಲ್ಲಿ ಹಿರಿಯವನಾದ ಜಸ್ಟಿನ್​ ಅಂದ್ರೆ ನಿವಿನ್​ ಪೌಲಿಯನ್ನು ಪ್ರೇಮಿಸುತ್ತಾಳೆ. ಇವರಿಬ್ಬರ ರಹಸ್ಯ ಪ್ರೀತಿ, ಒತ್ತಡ ಹಾಸ್ಯ ಮತ್ತು ಭಾವನಾತ್ಮಕವಾಗಿ ಮೂಡಿಬಂದಿದೆ.

ಈ ಸಿನಿಮಾವೂ 23ರಿಂದ 25 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದು, ಜಗತ್ತಿನಾದ್ಯಂತ ಉತ್ತಮ ಪ್ರದರ್ಶನಗೊಂಡು 330 ಕೋಟಿಯನ್ನು ಬಾಚಿಕೊಂಡಿದೆ. ನಿವಿನ್​ ಪೌಲಿ ಅವರಿಗೆ ಇದೊಂದು ಉತ್ತಮ ಕಂಬ್ಯಾಕ್​ ಸಿನಿಮಾವಾಗಿದೆ. ಪ್ರೇಮಂ, ಸರ್ವಂ ಮಾಯಂ ನಂತ್ರ ಅದರಂತೆ ಫೀಲ್​ ಗುಡ್ ಎನಿಸುವ ಸಿನಿಮಾ ಇದಾಗಿದೆ.

ಗಿರೀಶ್​ ಎಡಿ ಅವರು ತಣ್ಣೀರ್ ಮಥನ್​ ದಿನಂಗಳು, ಸೂಪರ್​ ಶರಣ್ಯ, ಪ್ರೇಮಲು ಮತ್ತು ಐಆಮ್​ ಕಾಥಲನ್​ ಸಿನಿಮಾ ನಿರ್ದೇಶಿಸಿದ್ದಾರೆ. ಎಲ್ಲವೂ ಬ್ಲಾಕ್​ ಬ್ಲಸ್ಟರ್​ ಹಿಟ್​ ಕಂಡ ಸಿನಿಮಾವಾಗಿದೆ, (ಏಜೆನ್ಸೀಸ್).