ಸಿನಿವಾಣಿ

ತಮಿಳಿನ ಮಾಸ್ಟರ್​ ಶೆಫ್​ ರಿಯಾಲಿಟಿ ಶೋಗೆ ಸೂಪರ್​ ಸ್ಟಾರ್​ ವಿಜಯ್​ ಸೇತುಪತಿ ಚಾಲನೆ: ಬಿಡದಿಯಲ್ಲಿ ನಡೆಯಲಿದೆ ಶೋ

ಬೆಂಗಳೂರು: ತಮಿಳಿನ ಅಡುಗೆ ರಿಯಾಲಿಟಿ ಶೋ ಮಾಸ್ಟರ್​ ಶೆಫ್​ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಸೂಪರ್​ ಸ್ಟಾರ್​ ವಿಜಯ್​ ಸೇತುಪತಿ ಚಾಲನೆ ನೀಡಿದ್ದಾರೆ.

ತಮಿಳಿನ ಖಾಸಗಿ ವಾಹಿನಿಯಲ್ಲಿ ಆಗಸ್ಟ್ ತಿಂಗಳಲ್ಲಿ ರಿಯಾಲಿಟಿ ಶೋ ಶರುವಾಗಲಿದೆ. ಇಡೀ ರಿಯಾಲಿಟಿ ಶೋ ರಾಮನಗರದ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ದಕ್ಷಿಣ ಭಾರತದ ಅಡುಗೆಗಳ ಬಗ್ಗೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿರಲಿದೆ.

ಕಾರ್ಯಕ್ರಮದ ನಿರ್ಮಾಪಕ ಸರವಣ ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೇ ವೇಳ ವಿಜಯ್​ ಸೇತುಪತಿ ಅವರು ಅಖಾಡ ಸಿನಿಮಾದ ಕನ್ನಡ ಡೈಲಾಗ್ ಹೇಳಿ ರಂಜಿಸಿದರು.

ಇನ್ನು ಕನ್ನಡದಲ್ಲಿಯು ಮಾಸ್ಟರ್​ ಶೆಫ್​ ಕಾರ್ಯಕ್ರಮ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಗ್​ಬಾಸ್​ ನಿರೂಪಣೆಯಿಂದ ಈಗಾಗಲೇ ನಿರೂಪಕರಾಗಿ ಸುದೀಪ್​ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಅಡುಗೆ ಮಾಡುವುದರಲ್ಲಿಯೂ ಸುದೀಪ್​ ಪರಿಣಿತಿಯನ್ನು ಹೊಂದಿರುವುದರಿಂದ ಮಾಸ್ಟರ್​ ಶೇಫ್​ ಕಾರ್ಯಕ್ರಮವನ್ನು ಕನ್ನಡದಲ್ಲಿ ಸುದೀಪ್​ ನಡೆಸಿಕೊಡಲಿದ್ದಾರೆಂದು ಬಹಳ ದಿನಗಳಿಂದಲೂ ಸುದ್ದಿ ಕೇಳಿಬರುತ್ತಿದೆ. ಹಿಂದೊಮ್ಮೆ ಬಿಗ್​ಬಾಸ್​ನಲ್ಲೂ ಸುದೀಪ್ ವಿವಿಧ ಭಕ್ಷ್ಯಗಳನ್ನು ಪರಿಚಯಿಸಿದ್ದರು. ಅದನ್ನು ಸವಿದಿರುವ ಅನೇಕರು ಅವರ ಕೈರುಚಿಯ ಬಗ್ಗೆ ಮಾತನಾಡಿದ್ದಾರೆ.