ಬೆಂಗಳೂರು: ಸಿರಿ ಕನ್ನಡ ಖಾಸಗಿ ವಾಹಿನಿಯು ಯಶಸ್ವಿಯಾಗಿ 7ನೇ ವರ್ಷಕ್ಕೆ ಕಾಲಿಟ್ಟಿದ್ದು, ವರ್ಷಪೂರ್ತಿ ಮನರಂಜನೆ ಕಾರ್ಯಕ್ರಮದ ಮೂಲಕ ಕನ್ನಡದ ಪ್ರತಿ ಮನೆಗಳನ್ನು ತಲುಪಲು ಯೋಜಿಸಲಾಗುತ್ತಿದೆ. ಈ ಕಾರಣಕ್ಕಾಗಿ ವಿನೂತನ ‘ಬಂಗಾರದ ಜೋಡಿ’ ಎಂಬ ರಿಯಾಲಿಟಿ ಶೋ ಆರಂಭಿಸಲಾಗಿದೆ ಎಂದು ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ, ಸಂಸ್ಥಾಪಕ ಸಂಜಯ್ ಶಿಂಧೆ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಐಎಎಂ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಮೂಡಿಬರಲಿರುವ ಈ ರಿಯಾಲಿಟಿ ಶೋಗೆ ಡಿ.14ರಂದು ದಾವಣಗೆರೆಯಲ್ಲಿ ಚಾಲನೆ ದೊರೆಯಲಿದೆ. ಕಿರುತೆರೆ ತಾರೆ ಮುರಳಿ ಹಾಗೂ ನಟಿ ಚಂದನಾ ನಿರೂಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಳಿಕ ಹಂತ ಹಂತವಾಗಿ ರಾಜ್ಯದ 12 ಕೇಂದ್ರಗಳಲ್ಲಿ ಈ ಶೋ ನಡೆಯಲಿದೆ’ ಎಂದು ಹೇಳಿದರು.
ಕನ್ನಡದ ಸ್ವತಂತ್ರ ಮಾಧ್ಯಮ: ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಸಿರಿ ಕನ್ನಡ ಸ್ವತಂತ್ರ ಮಾಧ್ಯಮವಾಗಿದ್ದು, ಆರು ವರ್ಷಗಳ ಪಯಣ ಸುಲಭವಾಗಿರಲಿಲ್ಲ. ಕೊರೊನಾ ಅಂತ ಕಠಿಣ ಸವಾಲು ಎದುರಿಸಿ, ನಿಂತಿದೆ. ಈ ಸಮಯದಲ್ಲಿ ಹಲವರು ನೆರವಾದರು. ನಮ್ಮ ವಾಹಿನಿಯು ಮೊದಲಿನಿಂದಲೂ ವೃತ್ತಿಪರತೆ, ದಕ್ಷತೆ ಕಾಪಾಡಿಕೊಂಡು ವಿಭಿನ್ನ ಕಂಟೆಂಟ್ ಕಾರ್ಯಕ್ರಮಗಳನ್ನು ನೀಡುವ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಕಾರಣವಾಯಿತು. ರಾಜ್ಯಾದ್ಯಂತ ವಾಹಿನಿ ಪ್ರಸಾರವಾಗುತ್ತಿದ್ದು, ನಮ್ಮ ತಂಡವೇ ನಮಗೆ ದೊಡ್ಡ ಶಕ್ತಿ’ ಎಂದು ಸಂಜಯ್ ಶಿಂಧೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಟಿಯರಾದ ರಜಿನಿ, ಚಂದನಾ, ಆಧ್ಯಾತ್ಮಿಕ ಗುರು ಡಾ.ಲಕ್ಷ್ಮೀ ಶ್ರೀನಿವಾಸ್ ಗುರೂಜೀ ಇದ್ದರು.
ಹಳ್ಳಿ ಹಳ್ಳಿಗೆ ತಲುಪಲಿದ್ದೇವೆ: ಐಎಎಂ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮಧುಸೂದನ್ ಮಾತನಾಡಿ, ‘ಕನ್ನಡದ ಸ್ಥಳೀಯ ಬ್ರ್ಯಾಂಡ್ ಸಂಸ್ಥೆಯು ನಮಗೆ ಅವಕಾಶ ನೀಡಿರುವುದು ವಿಶೇಷವಾದುದು. ಜನಸಾಮಾನ್ಯರಿಗೆ ಅನುಕೂಲವಾಗುವಂತಹ ರಿಯಾಲಿಟಿ ಶೋನ್ನು ನಿರೂಪಿಸಲಾಗುತ್ತಿದೆ. ಮಾಹಿತಿ, ಮನರಂಜನೆ ಸೇರಿ ಹಲವು ‘ಉತ್ಕ ೃಷ್ಟ’ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಗೂ ತಲುಪಿಸುತ್ತೇವೆ’ ಎಂದರು.
ಸ್ಪರ್ಧಿಗಳು- ವೀಕ್ಷಕರಿಗೆ ಸೇತುವೆ: ನಿರೂಪಕ ಮುರಳಿ, ‘ಈ ರಿಯಾಲಿಟಿ ಶೋ ವೀಕ್ಷಕರು ಹಾಗೂ ಸ್ಪರ್ಧಿಗಳಿಗೆ ಸೇತುವೆಯಾಗಲಿದೆ. ಇಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಸೇರಿ ವೀಕ್ಷಕರೂ ಕೂಡ ಬಹುಮಾನ ಪಡೆಯಬಹುದಾಗಿದ್ದು, ಎಲ್ಲ ವಯೋಮಾನದವರು ಭಾಗವಹಿಸಬಹುದಾಗಿದೆ. ನೇರವಾಗಿ ಭಾಗವಹಿಸುವ ವೀಕ್ಷಕರಿಗೂ 50 ಸಾವಿರ ಮಂದಿಗೆ ಒಂದು ಕೋಟಿ ರೂ.ವರೆಗಿನ ವಿಶೇಷ ಬಹುಮಾನಗಳನ್ನು ಗೆಲ್ಲಬಹುದು. ಸದ್ಯಕ್ಕೆ ಇದು 12 ಜಿಲ್ಲೆಗಳಲ್ಲಿ ನಡೆಯಲಿದೆ. ಇದು ಮುಂದೆ ರಾಜ್ಯದ ಎಲ್ಲ ಜಿಲ್ಲೆಗಳನ್ನು ತಲುಪುವ ಅವಕಾಶ ಇದೆ’ಎಂದರು.
ಮಿಮಿಕ್ರಿ ದಯಾನಂದ ಮಾತನಾಡಿ, ‘ಸಿರಿ ಕನ್ನಡ ಚಾನೆಲ್ ಜತೆ ನನ್ನ ಒಡನಾಟ ತುಂಬ ವರ್ಷಗಳದ್ದು. ಆಸಕ್ತಿ, ಅಭಿರುಚಿ ತಕ್ಕಂತ ಕಾರ್ಯಕ್ರಮಗಳು ಮೂಡಿಬರುತ್ತವೆ. ಇದುವೇ ಯಶಸ್ಸಿಗೆ ಕಾರಣವಾಗಿದೆ’ ಎಂದರು. ವಾಹಿನಿ ಮುಖ್ಯಸ್ಥ ರಾಜೇಶ್ ರಾಜಘಟ್ಟ, ‘ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ, ಎಲ್ಲರೂ ತಪ್ಪದೇ ವೀಕ್ಷಿಸಿ’ಎಂದು ಮನವಿ ಮಾಡಿದರು.
ಕೋಟಿ ರೂಪಾಯಿ ಬಹುಮಾನ ಗೆಲ್ಲಿ: ವೀಕ್ಷಕರಿಗೆ ಕೋಟಿ ರೂಪಾಯಿ ಮೌಲ್ಯದ ಬಹುಮಾನ ಗೆಲ್ಲುವ ಅವಕಾಶವನ್ನು ಈ ಶೋ ನೀಡಿದೆ. ಮೂರು ಲಕ್ಷ ವೀಕ್ಷಕರಿಗೆ ಕಾರು, ರೇಷ್ಮೇ ಸೀರೆ, ಚಿನ್ನ ಹಾಗೂ ಬೆಳ್ಳಿ ನಾಣ್ಯ, ಗೃಹೋಪಯೋಗಿ ಸಲಕರಣೆಗಳು, ಮೊಬೈಲ್, ೆನ್ ಹಾಗೂ ಶಾಪಿಂಗ್ ವೋಚರ್ಸ್ ಸೇರಿ 10 ಕೋಟಿ ರೂಪಾಯಿಗಳವರೆಗೆ ಬಹುಮಾನ ಗೆಲ್ಲಬಹುದು ಎಂದು ಮಧುಸೂದನ್ ಹೇಳಿದರು.
ನೋಂದಣಿ ಪ್ರಕ್ರಿಯೆ ಹೇಗೆ?:‘ಬಂಗಾರದ ಜೋಡಿ’ಶೋನಲ್ಲಿ ಭಾಗವಹಿಸುವ ದಂಪತಿಯು 90350 26824 ವಾಟ್ಸಾಪ್ ಮಾಬೇಕು ಇಲ್ಲವೇ www.bangaradajodi.com ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಈ ವೆಬ್‌ಸೈಟ್‌ಗೆ ಲಾಗಿನ್ ಆದ ಬಳಿಕ ಕಿರುಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯಾ ಜಿಲ್ಲೆಯಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ಅದೇ ಜಿಲ್ಲೆಯವರು ಮಾತ್ರ ಭಾಗವಹಿಸುತ್ತಾರೆ. ಮಂಕಿ 555 ಕಂಪನಿ, ಸುದರ್ಶನ್ ಸಿಲ್ಕ್‌ಸ್, ಸಂಗೀತ ಮೊಬೈಲ್, ಶ್ರೀ ಕೃಷ್ಣ ಘೀ, ಸದ್ಗುರು ಆಯುರ್ವೇದ ಗ್ರಾಮ್ ಸೋಪ್, ಐಎಚ್‌ಪಿ ಅಯ್ಯಂಗಾರ್ ಮಸಾಲ, ಐಶ್ವರ್ಯಾ ಟೀ, ಇಂಡಸ್ 555 ಕಂಪನಿಗಳು ಪ್ರಾಯೋಜಕತ್ವ ವಹಿಸಿವೆ.
ಸಿರಿ ಸೂಪರ್ ಸಂಡೇ: ಸಿರಿ ಕನ್ನಡ ವಾಹಿನಿಯು ಎಲ್ಲ ವಯೋಮಾನದ ವೀಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು 24 ದಿನಗಳಲ್ಲಿ 12 ಮೆಗಾ ಇವೆಂಟ್ ಮೂಲಕ 48 ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದೆ. ಹಿರಿಯರಿಗೆ ಆಧ್ಯಾತ್ಮಿಕ ಕಾರ್ಯಕ್ರಮ, ಮಹಿಳೆಯರಿಗೆ ಅಡುಗೆ ಸ್ಪರ್ಧೆ, ಮಕ್ಕಳಿಗೆ ಡ್ರಾಯಿಂಗ್, ಪ್ರತಿಭಾವಂತರಿಗೆ ವೇದಿಕೆ, ಮನೆ ಮನೆಗೂ ಗೃಹಲಕ್ಷ್ಮೀ, ವಿದ್ಯಾರ್ಥಿಗಳಿಗೆ ಲೌಡ್ ಸ್ಪೀಕರ್, ಉದ್ಯಮಿಗಳಿಗೆ ಬಿಜಿನೆಸ್ ಅವಾರ್ಡ್ ಹಾಗೂ ಹೊಸ ಮನೆಯ ಕನಸು ಕಾಣುವವರಿಗೆ ಕನ್‌ಸ್ಟ್ರಕ್ಷನ್ ಜಂಕ್ಷನ್ ಕಾರ್ಯಾಗಾರ ಆಯೋಜಿಸಲಿದೆ. ಈ ಮೂಲಕ 25 ಲಕ್ಷ ವೀಕ್ಷಕರನ್ನು ತಲುಪುವ ಗುರಿ ಹೊಂದಿದೆ. ಈ ಎಲ್ಲ ಕಾರ್ಯಕ್ರಮಗಳು ‘ಸಿರಿ ಸೂಪರ್ ಸಂಡೇ’ ಮಾಲಿಕೆಯಲ್ಲಿ ಪ್ರತಿ ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರಸಾರವಾಗಲಿವೆ.
ಸ್ಥಳೀಯ ಬ್ರ್ಯಾಂಡ್ ರಾಷ್ಟ್ರೀಯ ಬ್ರ್ಯಾಂಡ್ ಆಗಲಿ: ಕರ್ನಾಟಕದ ಹಲವು ವಾಹಿನಿಗಳು ಆರಂಭವಾಗುವ ಮುಂಚೆಯೇ ನಮ್ಮ ಐಎಎಂ ಆರಂಭವಾಗಿತ್ತು. ಕನ್ನಡ ನಾಡಿನ ನುಡಿ, ಸಂಸ್ಕೃತಿ ಪರಿಸರಿಸಲು ಸಿರಿ ಕನ್ನಡದ ಜತೆಗಿನ ಸಹಯೋಗ ಒಂದು ಕೊಡುಗೆ ಅಷ್ಟೇ. ಇದೀಗ ಆರಂಭಿಸುವ ಈ ರಿಯಾಲಿಟಿ ಶೋಗಾಗಿ ಹಲವಾರು ಪರೀಕ್ಷೆ, ಸರ್ವೇ ಮಾಡಿದ ಬಳಿಕವೇ ನಾವು ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ಮಧುಸೂದನ್ ಹೇಳಿದರು. ಈ ಸಂದರ್ಭ ವಾಹಿನಿಯ ಆರು ವರ್ಷ ನಡೆದು ಹಾದಿಯನ್ನು ಚಿತ್ರದ ಮೂಲಕ ಪ್ರದರ್ಶಿಸಲಾಯಿತು.
ಅತ್ಯದ್ಭುತ ವಾಹಿನಿ: ನಟಿ ರಜಿನಿ ಮಾತನಾಡಿ, ಇದು ಅತ್ಯದ್ಭುತವಾದ ವಾಹಿನಿ. ಹಲವು ವರ್ಷಗಳಿಂದ ಈ ವಾಹಿನಿಯ ಭಾಗವಾಗಿದ್ದೇನೆ. ಮೊದಲಿಗೆ ‘ನಾರಿಗೊಂದು ಸೀರೆ’ ಶೋನಲ್ಲಿ ನಿರೂಪಕಿಯಾಗಿದ್ದೆ. ಬಳಿಕ ಶೋ ಹೆಚ್ಚು ಪ್ರಸಿದ್ಧಿಗೊಂಡಿತು. ಆಗ ಜನರು ಕೂಡ ನನ್ನನ್ನು ಇದೇ ಶೋನಿಂದ ಗುರುತಿಸತೊಡಗಿದರು. ಇದೀಗ ಸೀಸನ್-3 ಆರಂಭವಾಗಿದೆ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಡಾ.ಲಕ್ಷ್ಮೀ ಶ್ರೀನಿವಾಸ್ ಗುರುಜೀ, ‘ನನ್ನ ಹದಿನಾಲ್ಕು 14 ಜರ್ನಿಯಲ್ಲಿ ನಾನು ನಾಲ್ಕು ವರ್ಷಗಳ ಕಾಲ ಅಂದರೆ ಹೆಚ್ಚು ದಿನಗಳ ಕಾಲ ನಾನು ಕಾರ್ಯ ನಿರ್ವಹಿಸಿರುವುದು ಇದೇ ಚಾನೆಲ್‌ನಲ್ಲಿ. ಇದು ಮನರಂಜನೆ ಜತೆಗೆ ಆಧ್ಯಾತ್ಮ ಸೇರಿ ಹಲವು ಕಾರ್ಯಕ್ರಮಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.