ಸಿನಿವಾಣಿ

ರಶ್ಮಿಕಾಗೆ ತೆಲುಗಿನ ಬಾಲಯ್ಯನಿಂದ ಕನ್ನಡದ ಪಾಠ!? ವಿಡಿಯೋ ವೈರಲ್...

ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರು 'ಆಹಾ' ಎಂಬ OTT ವೇದಿಕೆಯಲ್ಲಿ ಪ್ರಸಾರವಾಗುವ 'ಅನ್‌ಸ್ಟಾಪೆಬಲ್ ಬಾಲಯ್ಯ' ಶೋನಲ್ಲಿ ತಮ್ಮ ನಿರೂಪಣೆಯ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ, 'ಅನ್‌ಸ್ಟಾಪೆಬಲ್ ಬಾಲಯ್ಯ' ಟಾಕ್ ಶೋ ನಲ್ಲಿ ಹಲವು ತೆಲುಗಿನ ಸ್ಟಾರ್‌ ನಟರು ಭಾಗಿಯಾಗುತ್ತಿದ್ದಾರೆ. ಕಾರ್ಯಕ್ರಮದಲ್ಲಿ ನಟ ನಂದಮೂರಿ ಬಾಲಕೃಷ್ಣ ಕೇಳುವ ದಿಟ್ಟ ಪ್ರಶ್ನೆಗಳಿಗೆ ಉತ್ತರ ಕೊಡುವುದಲ್ಲದೇ ಅವರ ಜೊತೆ ಹಲವು ಆಟಗಳನ್ನು ಆಡುತ್ತಾರೆ. ಹೀಗೆ, ಇತ್ತೀಚೆಗೆ ಈ ಕಾರ್ಯಕ್ರಮದಲ್ಲಿ ನಟಿ ರಶ್ಮಕಾ ಮಂದಣ್ಣ ಅವರು ಭಾಗಿಯಾಗಿದ್ದರು.
ಹೌದು, 'ಪುಷ್ಪ: ದಿ ರೈಸ್' ಸಿನಿಮಾ ಯಶಸ್ಸು ಕಂಡೆ ನಂತರ ನಟ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಈ ಶೋನಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಬಾಲಯ್ಯ ಅವರು ಕನ್ನಡದಲ್ಲಿ ನಟಿ ರಶ್ಮಿಕಾ ಅವರ ಸೌಂದರ್ಯವನ್ನು ಅಭಿನಂದಿಸುತ್ತಾರೆ. ಹಾಗಾಗಿ, ಬಾಲಯ್ಯ ಅವರು ಮಾತಾಡಿರುವ ಮಾತುಗಳು ಸಣ್ಣ ಸಣ್ಣ ವಿಡಿಯೋ ತುಣುಕುಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಅಂದಹಾಗೆ, ಶೋನ ಆರಂಭದಲ್ಲೇ ಬಾಲಯ್ಯ ರಶ್ಮಿಕಾ ಅವರನ್ನು ನ್ಯಾಷನಲ್ ಕ್ರಶ್ ಆದ ಕ್ರಶ್ಮಿಕಾ ಎಂದು ವರ್ಣಿಸಿ ವೇದಿಕೆಯ ಮೇಲೆ ಆಹ್ವಾನಿಸುತ್ತಾರೆ. ನಂತರ, ''ತೆಲುಗಲ್ಲಿ ಬೇಲೂರ ಬಾಲೆ, ಮನಸಲ್ಲಿ ಮೈಸೂರ ಮಲ್ಲೆ, ನುಡಿಯಲ್ಲಿ ಕಸ್ತೂರಿ, ನಡೆಯಲ್ಲಿ ಕಾವೇರಿ, ಸೋಭಗಲ್ಲಿ ಮಡಿಕೇರಿ, ನಾಟ್ಯದಲ್ಲಿ ಮಯೂರಿ, ಕೊಡಗಿನ ಬೆಡಗಿ, ಕರ್ನಾಟಕದ ಕುಡಿ'', ಎಂದು ಹಾಡಿ ಹೊಗಳಿದ್ದಾರೆ. ಬಾಲಯ್ಯನ ಈ ಮಾತುಗಳಿಗೆ ನಟಿ ರಶ್ಮಿಕಾ ಕೂಡ ದಿಲ್ ಖುಷ್ ಆದಂತೆ ನಗುತ್ತಾರೆ. 
ಈ ವಿಡಿಯೋಗಳನ್ನು ನೋಡುತ್ತಿರುವ ಕನ್ನಡಿಗರು, ಸದ್ಯ ನಟ ಬಾಲಯ್ಯ ಅವರ ಕನ್ನಡವನ್ನು ಮೆಚ್ಚಿಕೊಂಡರೆ, ಮತ್ತೊಂದೆಡೆ ರಶ್ಮಿಕಾ ಅವರನ್ನು ಟ್ರೋಲ್ ಮತ್ತು ತೆಗಳುತ್ತಿದ್ದಾರೆ. ಬೇರೆ ಭಾಷೆಯವರಿಗಿರುವಷ್ಟು ಕನ್ನಡ ಪ್ರೀತಿ ರಶ್ಮಿಕಾ ಅವರಿಗೆ ಕಾಲ್ ಭಾಗವಿದ್ದರೂ ಎಷ್ಟು ಚಂದ ಇರುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಕೆಲವರಂತೂ, ಕನ್ನಡ ಮಾತಾಡದ ಮತ್ತು ಕರುನಾಡಿಗೆ ಬೆಲೆ ಕೊಡದ ನಟಿ ರಶ್ಮಿಕಾ ಅವರಿಗೆ ಇದು ಒಂದು ತರಹ, ಬೇರೆ ಸ್ಟಾರ್ ನಟರು ಪರೋಕ್ಷವಾಗಿ ಮಾಡುತ್ತಿರುವ ಕನ್ನಡದ ಪಾಠದಂತೆ ಎಂದು ಕಾಮೆಂಟ್ ಮಾಡತೊಡಗಿದ್ದಾರೆ.