ಸಿನಿವಾಣಿ

ಛಾವಾ ಚಿತ್ರದಲ್ಲಿ ಕನ್ನಡಿಗ ಬಾಲಾಜಿ ಮನೋಹರ್​ ಮಿಂಚು; ಮ್ಹಲೋಜಿ ಬಾಬಾ ಪಾತ್ರದಲ್ಲಿ ನಟ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಲಕ್ಷ$್ಮಣ್​ ಉತೇಕರ್​ ನಿರ್ದೇಶನದ, ವಿಕ್ಕಿ ಕೌಶಲ್​ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಛತ್ರಪತಿ ಸಂಭಾಜಿ ಮಹಾರಾಜ್​ ಜೀವನಾಧಾರಿತ ಸಿನಿಮಾ "ಛಾವಾ'. ಕಳೆದ ೆ. 14ರಂದು ಬಿಡುಗಡೆಯಾದ ಈ ಚಿತ್ರ, ಎರಡು ವಾರಗಳಲ್ಲಿ <300 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡು, ಬಾಕ್ಸಾಫಿಸಿನಲ್ಲಿ ನಾಗಾಲೋಟ ಮುಂದುವರಿಸಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜತೆ ಮತ್ತೊಬ್ಬ ಕನ್ನಡಿಗ ಬಾಲಾಜಿ ಮನೋಹರ್​ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಂಭಾಜಿ ಮಹಾರಾಜರ ಜತೆ ಸರಿಸಮನಾಗಿ ನಿಂತು ಔರಂಗಜೇಬನ ಸೇನೆಯ ವಿರುದ್ಧ ಹೋರಾಡುವ ಮ್ಹಲೋಜಿ ಬಾಬಾ ಪಾತ್ರದಲ್ಲಿ ಬಾಲಾಜಿ ಮನೋಹರ್​ ಮಿಂಚಿದ್ದಾರೆ. ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಅವರು, "ಕಾಸ್ಟಿಂಗ್​ ಏಜೆನ್ಸಿಯವರು 2023ರ ಮಾರ್ಚ್​ನಲ್ಲಿ ಆಡಿಷನ್​ ಕೇಳಿದರು. ಅವರಿಗೆ ವಿಡಿಯೋ ಮಾಡಿ ಕಳುಹಿಸಿದ್ದೆ. ಅದನ್ನು ನೋಡಿದ ನಿರ್ದೇಶಕ ಲಕ್ಷ$್ಮಣ ಉತೇಕರ್​, ಮ್ಹಲೋಜಿ ಪಾತ್ರಕ್ಕೆ ನಾನು ಹೋಲುತ್ತೇನೆ ಅಂತ ಜೂನ್​ನಲ್ಲಿ ಕನ್ಫಮ್​ರ್ ಮಾಡಿದರು. 2023ರ ಸೆಪ್ಟೆಂಬರ್​ನಿಂದ 2024ರ ಏಪ್ರಿಲ್​ವರೆಗೆ ಚಿತ್ರೀಕರಣ ನಡೆಯಿತು. ವಿಲನ್​, ನಾಯಕಿ ಪಾತ್ರಗಳಿಗೆ ದಣದಿಂದ ಕಲಾವಿದರು ಹೋಗಿರುವುದು ಸಾಮಾನ್ಯ. ಆದರೆ, ಇಲ್ಲಿನವರಿಗೆ ಪೋಷಕ ಪಾತ್ರಗಳಲ್ಲಿ ಅವಕಾಶ ನೀಡಿರುವುದು ಅಪರೂಪ. ಇದೀಗ ಚಿತ್ರಕ್ಕೆ ಮತ್ತು ನನ್ನ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನನಗಂತೂ ತುಂಬ ಖುಷಿಯಾಗಿದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಸಿಂಕ್​ ಸೌಂಡ್​ನಲ್ಲಿ ಚಿತ್ರೀಕರಣ:

ಸಾವಿರಾರು ಕಲಾವಿದರ ನಡುವೆಯೇ "ಛಾವಾ' ಚಿತ್ರವನ್ನು ಸಿಂಕ್​ ಸೌಂಡ್​ನಲ್ಲಿ ಲೊಕೇಷನ್​ನಲ್ಲೇ ಶೂಟಿಂಗ್​ ನಡೆಸಿರುವುದು ವಿಶೇಷ. "ಪ್ರತಿದಿನ 1500ರಿಂದ 2000 ಜನರ ನಡುವೆ ಚಿತ್ರೀಕರಣ ನಡೆಯುತ್ತಿತ್ತು. ಸಿಂಕ್​ ಸೌಂಡ್​ನಲ್ಲಿ ಚಿತ್ರೀಕರಿಸಿರುವ ನನ್ನ ಪಾತ್ರದ ಸಂಭಾಷಣೆಯನ್ನೇ ಬಹುತೇಕ ಉಳಿಸಿಕೊಂಡಿದ್ದಾರೆ. ಆದರೆ, ನನ್ನದು ದಣ ಭಾರತದ ಆ್ಯಕ್ಸೆಂಟ್​ ಆದ ಕಾರಣ, ಕೆಲವೆಡೆ ಉಚ್ಛಾರಣೆ ಪಕ್ಕಾ ಇರಬೇಕೆಂದು ಮತ್ತೆ ಮುಂಬೈನಲ್ಲಿ ಒಂದು ತಾಸು ಡಬ್​ ಮಾಡಿದೆ. ನಾನು ಸಣ್ಣ ಸಿನಿಮಾಗಳನ್ನು ಮಾಡಿಕೊಂಡು ಬಂದವನು. "ಅವನೇ ಶ್ರೀಮನ್ನಾರಾಯಣ' ಚಿತ್ರ ಬಹುಭಾಷೆಗಳಲ್ಲಿ ರಿಲೀಸ್​ ಆಗಿತ್ತು. ಮೆರಿಟ್​ ಮೇಲೆ ಅವಕಾಶ ಸಿಕ್ಕಾಗ ಖುಷಿಯಾಗುತ್ತದೆ. ನನಗೆ ಬಾಲಿವುಡ್​ನಲ್ಲಿ ಯಾರೂ ಪರಿಚಯವಿಲ್ಲ. ಆದರೂ ನನ್ನ ಪ್ರತಿಭೆಯನ್ನು ನಂಬಿ "ಛಾವಾ'ದಲ್ಲಿ ಅವಕಾಶ ನೀಡಿದರು. ಸಾಕಷ್ಟು ಕಲಿಯಲು ನನಗೂ ಈ ಸಿನಿಮಾ ಸಹಕಾರಿಯಾಯಿತು' ಎನ್ನುತ್ತಾರೆ ಬಾಲಾಜಿ ಮನೋಹರ್​.

ವಿಕ್ಕಿ ಹಲ್ಲು ಮುರಿಯಿತು

ಛತ್ರಪತಿ ಸಂಭಾಜಿ ಮಹಾರಾಜ್​ ಪಾತ್ರದಲ್ಲಿ ನಟಿಸಿರುವ ನಾಯಕ ವಿಕ್ಕಿ ಕೌಶಲ್​ ಬಗ್ಗೆ ಬಾಲಾಜಿ, "ಒಂದು ಸ್ಲೋಮೋಷನ್​ ಸೀಕ್ವೆನ್ಸ್​ ಬಿಟ್ಟರೆ, ಚಿತ್ರದಲ್ಲಿ ಹೆಚ್ಚು ಬಿಲ್ಡಪ್​ ಇಲ್ಲ. ಯುದ್ಧಗಳಿಗೆ ಹೆಚ್ಚು ಮಹತ್ವವಿರುವ ಸಿನಿಮಾ. ೈಟ್​ ಸನ್ನಿವೇಶದಲ್ಲಿ ನಾಯಕ ವಿಕ್ಕ ಕೌಶಲ್​ ಮುಖಕ್ಕೆ ಪೆಟ್ಟು ಬಿದ್ದು, ಅರ್ಧ ಹಲ್ಲು ಮುರಿಯಿತು. ಆದರೂ, ಅವರು ಹಿಂದೇಟು ಹಾಕದೇ ಶೂಟಿಂಗ್​ ಮುಂದುವರಿಸಿದರು. ಶಾಟ್​ ಮುಗಿದ ಬಳಿಕ ವಿಕ್ಕಿ ಕ್ಯಾರಾವಾನ್​ಗೆ ಹೋಗುತ್ತಿರಲಿಲ್ಲ. ನಮ್ಮ ಜತೆ ಕುಳಿತು ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು' ಎನ್ನುತ್ತಾರೆ.

ರಶ್ಮಿಕಾ ಗ್ರೇಟ್​!

"ರಶ್ಮಿಕಾ ಸ್ವೀಟ್​ ಹುಡುಗಿ' ಎನ್ನುವ ಬಾಲಾಜಿ ಮನೋಹರ್​, ""ಅವನೇ ಶ್ರೀಮನ್ನಾರಾಯಣ' ಶೂಟಿಂಗ್​ ಸಮಯದಲ್ಲಿ ಅವರನ್ನು ಭೇಟಿಯಾಗಿದ್ದೆ. "ಛಾವಾ' ಸೆಟ್​ನಲ್ಲಿ ಇಬ್ಬರೂ ಕನ್ನಡದಲ್ಲೇ ಮಾತನಾಡುತ್ತಿದ್ದೆವು. ಸಣ್ಣ ವಯಸ್ಸಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಅವರ ವೃತ್ತಿಪರತೆ, ಸಮರ್ಪಣಾ ಮನೋಭಾವವೇ ಕಾರಣ. ಬೆಳಗ್ಗೆ 5 ಗಂಟೆಗೆ ಸೆಟ್​ಗೆ ಬಂದು 7 ಗಂಟೆಗೆ ರೆಡಿಯಾಗಿಬಿಡುತ್ತಿದ್ದರು. ಸಂಜೆ 6 ಗಂಟೆಗೆ ಪ್ಯಾಕಪ್​ ಆದ ಬಳಿಕ, ಎರಡು ತಾಸುಗಳ ಕಾಲ ನಾಳೆಯ ಸೀನ್​ಗಳ ರಿಹರ್ಸಲ್ಸ್​ ಮಾಡಿ, ಬಳಿಕ ರೂಮಿಗೆ ತೆರಳಿ, ಮತ್ತೆ ಎರಡು ತಾಸು ಜಿಮ್​ಗೆ ಹೋಗುತ್ತಿದ್ದರು. ಹೀಗೆ ಅವರು ಮಲಗುವುದೇ ಮಧ್ಯರಾತ್ರಿ 1,2 ಗಂಟೆ ಆಗುತ್ತಿತ್ತು. ಮತ್ತೆ ಬೆ. 4ಕ್ಕೆ ಎದ್ದು 5ಕ್ಕೆಲ್ಲ ಸೆಟ್​ಗೆ ಬರುತ್ತಿದ್ದರು' ಎಂದು ಮಾಹಿತಿ ನೀಡುತ್ತಾರೆ ಬಾಲಾಜಿ ಮನೋಹರ್​.