ಇಂದು (ಆ. 05) ಆಶಿಕಾ ರಂಗನಾಥ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವ ಆಶಿಕಾ, ತಮ್ಮ ಹುಟ್ಟುಹಬ್ಬಕ್ಕೆ ಮನೆಯ ಹತ್ತಿರ ಬಂದು ವಿಶ್ ಮಾಡುವ ಬದಲು, ಎಲ್ಲರೂ ಒಂದೊಂದು ಗಿಡ ನೆಟ್ಟರೆ, ಅದೇ ನೀವು ನನಗೆ ಕೊಡುವ ಅತ್ಯಮೂಲ್ಯ ಉಡುಗೊರೆ ಎಂದು ಭಾವಿಸುತ್ತೇನೆ ಎಂದು ಆಶಿಕಾ ಹೇಳಿದ್ದರು. ಅದರಂತೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೂ ಸುರಿದಿದೆ. ಚಿತ್ರತಂಡದವರೂ ಬಗೆಬಗೆ ರೀತಿಯಲ್ಲಿ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ಪಾತ್ರಕ್ಕಾಗಿ ಯಾವ ಹೀರೋ ಜತೆಗೂ ಮಲಗಿಲ್ಲ: ರವೀನಾ ಟಂಡನ್
ಆ ಪೈಕಿ ಸಿಂಪಲ್ ಸುನಿ ನಿರ್ದೇಶನದಲ್ಲಿ ಸಿದ್ಧವಾಗಿರುವ ಅವತಾರ್ ಪುರುಷ ಚಿತ್ರದಿಂದ ಆಶಿಕಾ ಜನ್ಮದಿನದ ನಿಮಿತ್ತ ವಿಶೇಷ ಟೀಸರ್ ಬಿಡುಗಡೆ ಮಾಡಿದೆ ಚಿತ್ರತಂಡ. ಕಾಗದದ ದೋಣಿಯಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದು ನೀರಿನಲ್ಲಿ ತೇಲಿಬಿಡುತ್ತಾನೆ ಕಥಾನಾಯಕ ಶರಣ್. ಹಿನ್ನೆಲೆ ಸಂಗೀತದ ಮೂಲಕ ಕಿರಿದಾದ ಬರ್ತ್ಡೇ ಟೀಸರ್ ಗಮನ ಸೆಳೆಯುತ್ತದೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಈ ಸಿನಿಮಾ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದೆ. ಇನ್ನೇನು ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್ ತಿಂಗಳಲ್ಲಿ ಬಿಡುಗಡೆಯ ಮಾಡುವ ಯೋಜನೆ ಹಾಕಿತ್ತು ಚಿತ್ರತಂಡ. ಆದರೆ, ಕರೊನಾದಿಂದಾಗಿ ಎಲ್ಲ ಸಿನಿಮಾ ರಿಲೀಸ್ ಮುಂದೋಗಿದೆ.
ಅವತಾರ್ ಪುರುಷ, ಮದಗಜ ಚಿತ್ರತಂಡಗಳಷ್ಟೇ ಅಲ್ಲ, ನಿರ್ದೇಶಕ ಶಶಾಂಕ್, ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಉಮಾಪತಿ ಶ್ರೀನಿವಾಸ್ ಸಹ ಆಶಿಕಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.