ಆಮೀರ್ ಖಾನ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಲಾಲ್ ಸಿಂಗ್ ಛಡ್ಡಾ ಸಿನಿಮಾ ಹಾಲಿವುಡ್ನ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಎಂಬುದು ಎಲ್ಲರಿಗೂ ಗೊತ್ತು. ಈಗಾಗಲೇ ಚಿತ್ರೀಕರಣ ಒಂದಷ್ಟು ಭಾಗದ ಚಿತ್ರೀಕರಣ ಮಾಡಿಕೊಂಡಿರುವ ಚಿತ್ರತಂಡ, ಕರೊನಾ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಳಿಸಿದೆ. ಇದೀಗ ಇದೇ ಚಿತ್ರದ ಬಗ್ಗೆ ಅತುಲ್ ಕುಲಕರ್ಣಿ ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಟೊರಾಂಟೊ ಸಿನಿಮೋತ್ಸವಕ್ಕೆ ಹೊರಟ ಶ್ರದ್ಧಾ!
ಹೌದು, ಕಳೆದ ಹತ್ತು ವರ್ಷದ ಹಿಂದೆಯೇ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಸ್ಕ್ರಿಪ್ಟ್ ಬರೆದಿದ್ದರಂತೆ ಅತುಲ್ ಕುಲಕರ್ಣಿ. ‘ನಿಜಕ್ಕೂ ಇದೊಂದು ಸುದೀರ್ಘ ಪಯಣ. ನಾನು 10 ವರ್ಷದ ಹಿಂದೆಯೇ ಈ ಸಿನಿಮಾ ಕಥೆ ಬರೆದಿದ್ದೆ. ಇತ್ತೀಚಿನ ಕೆಲ ವರ್ಷಗಳಿಂದ ಆಮೀರ್ ಅದರಲ್ಲಿ ತೊಡಗಿಸಿಕೊಂಡಿದ್ದರು. ಈ ಕಥೆ ಬರೆಯುತ್ತಿರುವ ಬಗ್ಗೆ ನಾನು ಅವರ ಗಮನಕ್ಕೆ ತಂದಿದ್ದೆ. ಆದರೆ, ಆಮೀರ್ ಕಥೆ ಕೇಳಿರಲಿಲ್ಲ. ಅದಾದ ಬಳಿಕ 30 ಸೆಕೆಂಡ್ ಕಥೆ ಹೇಳಿದೆ. ಈ ಬಗ್ಗೆ ಈಗಾಗಲೇ ಸಿನಿಮಾ ಮಾಡುತ್ತಿದ್ದೇನೆ ಎಂದಿದ್ದರು. ಕಳೆದ 7-8 ವರ್ಷಗಳಿಂದ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಹಕ್ಕುಗಳಿಗಾಗಿ ನಾನು ಸಾಕಷ್ಟು ಪ್ರಯತ್ನಿಸಿದ್ದೆ. ನನಗೆ ಸಿಗಲಿಲ್ಲ. ಆಮೀರ್ ಹಲವು ಬಾರಿ ಅಮೆರಿಕಕ್ಕೆ ಹೋಗಿ ಬಂದು ಕೊನೆಗೂ ರೈಟ್ಸ್ ಪಡೆದಿದ್ದರು. ಕೊನೆಗೆ ಸಿನಿಮಾ ಶುರುವಾಯ್ತು’ ಎನ್ನುತ್ತಾರೆ ಅತುಲ್ ಕುಲಕರ್ಣಿ.
ಇದನ್ನೂ ಓದಿ: ಶ್ರೀಕೃಷ್ಣನಿಗೆ ರಾಧೆ ಸಿಕ್ಕಳು; ಭಾವನಾ ಮೆನನ್ ಎಂಟ್ರಿ
ಸದ್ಯ ಲಾಲ್ ಸಿಂಗ್ ಛಡ್ಡಾ ಚಿತ್ರದ ಸ್ಕ್ರೀನ್ಪ್ಲೇ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಅತುಲ್ ಕುಲಕರ್ಣಿ, ಈಗಾಗಲೇ 60-70 ಭಾಗದ ಶೂಟಿಂಗ್ ಮುಗಿದಿದೆ. ಅದ್ವೈತ್ ಚಂದನ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ವಯಾಕಾಮ್ 18 ಬಂಡವಾಳ ಹೂಡುತ್ತಿದೆ. ಕರೀನಾ ಕಪೂರ್, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿದ್ದಾರೆ. (ಏಜೆನ್ಸೀಸ್)