ಸಿನಿವಾಣಿ

ಅರುಂಧತಿ ಚಿತ್ರದ ಬಾಲನಟಿಗೆ ಕೂಡಿಬಂತು ಕಂಕಣ ಭಾಗ್ಯ: ಸ್ಟಾರ್​ ನಟಿಯರಿಗೂ ಕಮ್ಮಿ ಇಲ್ಲ ದಿವ್ಯಾ! Arundhati

Arundhati : ಟಾಲಿವುಡ್ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ನಟನೆಯ ಲೇಡಿ ಓರಿಯೆಂಟೆಡ್ ಬ್ಲಾಕ್ ಬಸ್ಟರ್ ಸಿನಿಮಾ ಯಾವುದು ಎಂದು ಸಿನಿ ರಸಿಕರನ್ನು ಪ್ರಶ್ನೆ ಮಾಡಿದರೆ ಥಟ್ಟನೆ ‘ಅರುಂಧತಿ’ ಎಂದು ಹೇಳುತ್ತಾರೆ. ಎಲ್ಲಾ ಭಾಷಿಗರು ಸಿನಿಮಾವನ್ನು ನೋಡಿ, ಹಾಡಿ ಹೊಗಳಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನ ಮಾಡಿದರು. 2009ರಲ್ಲಿ ಬಿಡುಗಡೆಯಾದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ, ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತು. ಈ ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿತು ಎನ್ನಬಹುದು.

ಇನ್ನೂ ಈ ಚಿತ್ರದಲ್ಲಿ ನಟ ಸೋನು ಸೂದ್, ಅರ್ಜುನ್ ಬಾಜ್ವಾ ಮತ್ತು ಶಾಯಾಜಿ ಶಿಂಧೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಪಶುಪತಿಯಾಗಿ ಸೋನು ಸೂದ್ ಮತ್ತು ಜೇಜಮ್ಮಳಾಗಿ ಅನುಷ್ಕಾ ಈ ಸಿನಿಮಾದ ಹೈಲೈಟ್ಸ್. ಮೇಲಾಗಿ ಅನುಷ್ಕಾ ಅಭಿನಯಕ್ಕೆ ಪ್ರೇಕ್ಷಕರಿಂದ ಒಳ್ಳೆ ಮಾರ್ಕ್ಸ್ ಸಿಕ್ಕಿದೆ. ಈ ಚಿತ್ರ ತೆರೆ ಮೇಲೆ ಬಿಡುಗಡೆಯಾದಾಗಲೆಲ್ಲ ಅತ್ಯುತ್ತಮ ರೇಟಿಂಗ್ ಹಾಗೂ ರೆಸ್ಪಾನ್ಸ್ ಪಡೆಯುತ್ತಿರುವುದು ಗೊತ್ತೇ ಇದೆ. ಅಂದಹಾಗೆ ಅರುಂಧತಿ ಚಿತ್ರದಲ್ಲಿ ಅನುಷ್ಕಾ ಅವರ ಬಾಲ್ಯದ ಪಾತ್ರ ಎಲ್ಲರಿಗೂ ನೆನಪಿರುತ್ತದೆ. ಆ ಬಾಲ ನಟಿ ಈಗ ಬೆಳೆದು ದೊಡ್ಡವಳಾಗಿದ್ದು, ಮದುವೆಗೆ ತಯಾರಿ ನಡೆಸುತ್ತಿದ್ದಾರೆ.

ಅರುಂಧತಿ ಸಿನಿಮಾ ನೋಡಿದವರು ಅನುಷ್ಕಾ ಅವರ ಬಾಲ್ಯದ ಪಾತ್ರವನ್ನು ಮರೆಯುವುದಿಲ್ಲ. ಬಾಲನಟಿ ತುಂಬಾ ಅದ್ಭುತವಾಗಿ ನಟನೆ ಮಾಡಿದರು. ಹೀಗಾಗಿಯೇ ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಉತ್ತಮ ಪ್ರಶಂಸೆಯೂ ಸಿಕ್ಕಿತು. ಅಷ್ಟಕ್ಕೂ ಆ ಬಾಲ ಕಲಾವಿದೆಯ ಹೆಸರು ಏನು ಅಂದರೆ ‘ದಿವ್ಯಾ ಗಣೇಶ್’. ದಿವ್ಯಾ ಇದೀಗ ಮದುವೆಗೆ ಸಜ್ಜಾಗಿದ್ದು, ಪ್ರಸ್ತುತ ತಮ್ಮ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದಾರೆ. ಹಾಗಾದರೆ ಮದುವೆ ಯಾವಾಗ? ಯಾರನ್ನು ಮದುವೆಯಾಗಲಿದ್ದಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ತೆಲುಗು-ತಮಿಳು ಮೂಲದ ಕುಟುಂಬಕ್ಕೆ ಸೇರಿದ ದಿವ್ಯಾ ನಾಗೇಶ್, ಪ್ರಸ್ತುತ ನರ್ತಕಿ ಮತ್ತು ರೂಪದರ್ಶಿಯಾಗಿದ್ದಾರೆ. ಅಲ್ಲದೆ, ನಟಿಯಾಗಿ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ತಮ್ಮ ಸಹನಟ ಮತ್ತು ನೃತ್ಯ ಸಂಯೋಜಕ ಅಜಯ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದ ದಿವ್ಯಾ, ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇನ್ನು 8 ದಿನಗಳಲ್ಲಿ, ಅಂದರೆ ಆಗಸ್ಟ್ 18 ರಂದು ವಿವಾಹವಾಗಲಿದ್ದಾರೆ.

ಈ ಸಂದರ್ಭದಲ್ಲಿ, ದಿವ್ಯಾ ಮದುವೆಯ ಫೋಟೋಶೂಟ್‌ಗಳಲ್ಲಿ ಬಿಜಿಯಾಗಿದ್ದಾರೆ. ಅವರು ತಮ್ಮ ಲೇಡಿ ಫ್ರೆಂಡ್ಸ್‌ ಜೊತೆ ಬ್ಯಾಚುಲರ್ ಪಾರ್ಟಿ ಕೂಡ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ವೈರಲ್​ ಆಗಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದವರು ಶುಭ ಹಾರೈಸುತ್ತಿದ್ದಾರೆ. 'ಅರುಂಧತಿ' ಚಿತ್ರದಲ್ಲಿ ಪಾತ್ರ ನಿರ್ವಹಿಸಿದ ಬಾಲನಟಿ ಇದೀಗ ಮದುವೆಯಾಗುತ್ತಿದ್ದಾರೆ. ಆದರೆ, ಅದೇ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ ಅನುಷ್ಕಾ ಇನ್ನೂ ಒಂಟಿಯಾಗಿದ್ದಾರೆ. ಅನುಷ್ಕಾ ಮದುವೆಯಾಗುತ್ತಾರೋ? ಇಲ್ಲವೋ? ಕಾದು ನೋಡಬೇಕಿದೆ. (ಏಜೆನ್ಸೀಸ್​)