ಸಿನಿವಾಣಿ

PHOTO|ಬಾದಲ್​ ನಂಜುಂಡಸ್ವಾಮಿ ಕೈಯಲ್ಲಿ ಬೆಂಗಳೂರಿನ ಗೋಡೆಗಳು, ರಸ್ತೆಗಳಿಗೆ ಹೊಸ ರೂಪ

ಕ್ರಿಯಾಶೀಲತೆಯ ಮೂಲಕವೇ ನಾಡಿನ ಮನಸೆಳೆದ ಕಲಾಕಾರ ಬಾದಲ್​ ನಂಜುಂಡಸ್ವಾಮಿ, ಕರೊನಾ ಹಿನ್ನೆಲೆಯಲ್ಲೂ ಸಾಕಷ್ಟು ಕಲಾತ್ಮಕ ಚಿತ್ರಗಳನ್ನು ಬಿಡಿಸಿ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಇದೀಗ ಬೆಂಗಳೂರಿನ ಬೀದಿಗೆ ಮಾಸ್ಕ್ ಹಾಕಿಸಿದ್ದಾರೆ! ಹಾಗಂತ ಬಟ್ಟೆ ತಂದು ಬೀದಿಗೆ ಹೊದಿಸಿಲ್ಲ. ಬದಲಿಗೆ ಬೀದಿ ಬದಿಯ ಗೋಡೆಗಳಿಗೆ ಮಾಸ್ಕ್​ ರೂಪದಲ್ಲಿ ಪೇಂಟಿಂಗ್​ ಮಾಡಿದ್ದಾರೆ. ಮತ್ತೊಂದೆಡೆ ರಸ್ತೆಗಳ ಮೇಲೆ ಕರೊನಾ ವೈರಸ್​ಗಳ ಹಾವಳಿ ಹೇಗಿದೆ ಎಂಬುದನ್ನು 3ಡಿ ಪೇಟಿಂಗ್​ ಮೂಲಕ ಚಿತ್ರಿಸಿದ್ದಾರೆ. ಪೊಲೀಸ್ ಠಾಣೆಯ ಮೆಟ್ಟಿಲಿಗೂ ಮಾಸ್ಕ್​ ಹಾಕಿಸಿದ್ದಾರೆ. ಒಟ್ಟಿನಲ್ಲಿ ಲಾಕ್​ಡೌನ್​ ಹೊತ್ತಲ್ಲಿ ಘಟಿಸಿದ ಸಣ್ಣ ಸಣ್ಣ ಬದಲಾವಣೆಗಳನ್ನೂ ಚಿತ್ರಕಲೆಯ ಮೂಲಕ ಹೊರಹಾಕಿದ್ದಾರೆ ಬಾದಲ್​. ಅಂಥ ಕೆಲ ಫೋಟೋಗಳು ಇಲ್ಲಿವೆ ನೋಡಿ..