ಸಿನಿವಾಣಿ

ಪವರ್​ಸ್ಟಾರ್​ಗೆ ಪುಟಾಣಿ ಅಭಿಮಾನಿಯ ಪತ್ರ; ಸುದೀರ್ಘ ಪತ್ರದಲ್ಲಿ ಏನೇನಿದೆ?

ಬೆಂಗಳೂರು: ಅಭಿಮಾನಿಗಳೇ ದೇವರೆಂದು ಹೇಳಿದವರು ವರನಟ ಡಾ. ರಾಜ್​ಕುಮಾರ್. ಇದೀಗ ಅದೇ ಅಭಿಮಾನಿ ದೇವರು, ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಬಗ್ಗೆ ಪತ್ರವೊಂದನ್ನು ಬರೆದು, ತಮ್ಮೊಳಗಿನ ಅಭಿಮಾನವನ್ನು ಹೊರಹಾಕಿದ್ದಾರೆ.

ಅಪ್ಪು ನಟಿಸಿದ ಬಹುತೇಕ ಸಿನಿಮಾಗಳ ಶಿರ್ಷಿಕೆಯನ್ನು ಬಳಸಿಕೊಂಡು, ಪತ್ರ ಬರೆಯಲಾಗಿದ್ದು, ಪುನೀತ್​ ನಟಿಸಿದ ಮೊದಲ ಸಿನಿಮಾ ಪ್ರೇಮದ ಕಾಣಿಕೆಯಿಂದ ಆರಂಭವಾಗುವ ಸಾಲು, ಇನ್ನೇನು ಬಹುತೇಕ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಿರುವ ಯುವರತ್ನದ ವರೆಗೂ ಶೀರ್ಷಿಕೆಗಳನ್ನು ಬಳಕೆ ಮಾಡಿದ್ದಾರೆ.

ಆ ದೇವರು ನಿಮ್ಮನ್ನು ಪ್ರೇಮದ ಕಾಣಿಕೆಯಾಗಿ ಕೊಟ್ಟು, ಸನಾದಿ ಅಪ್ಪಣ್ಣನಂತೆ ಪಿಪಿ ಊದಿಸಿ, ತಾಯಿಗೆ ತಕ್ಕಮಗನಂತೆ ಎಂದೆಂದಿಗೂ ವಸಂತಗೀತ ಎಂದು ಹಾಡುತಾ ಭೂಮಿಗೆ ಬಂದ ಭಗವಂತನಂತೆ ಹೊಸಬೆಳಕನ್ನು ಚೆಲ್ಲುತ್ತಾ ಚಲಿಸುವ ಮೋಡಗಳು ಹೋಗುವಷ್ಟರಲ್ಲಿ ಬೆಟ್ಟದ ಹೂವನ್ನು ತಂದು ಶಿವಮೆಚ್ಚಿದ ಕಣ್ಣಪ್ಪನಿಗೆ ಅರ್ಪಿಸಿ.. ಹೀಗೆ ಸುದೀರ್ಘವಾಗಿ ಪತ್ರವನ್ನು ಬರೆದಿದ್ದಾರೆ ರಮೇಶ್​.

ಡಾ. ರಾಜ್​ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್ ನಟನೆಯ ಹಲವು ಸಿನಿಮಾಗಳ ಶೀರ್ಷಿಕೆಯನ್ನು ಪತ್ರದಲ್ಲಿ ಬಳಸಿಕೊಂಡಿರುವ ರಮೇಶ್​, ತಮ್ಮೊಳಗಿನ ಅಭಿಮಾನವನ್ನು ಪತ್ರದ ಮೂಲಕ ಬಹಿರಂಗಪಡಿಸಿದ್ದಾರೆ.