ನೀವು ಬಚ್ಚಿಟ್ಟುಕೊಂಡ್ರು ಬಿಡೋದಿಲ್ಲ... ರಾಮ್​ಚರಣ್​ ಚಿತ್ರದ ಸುಂದರಿ ನೇಹಾ ಶರ್ಮಾ ಖಡಕ್​ ಎಚ್ಚರಿಕೆ | Neha Sharma 
ಸಿನಿವಾಣಿ

ನೀವು ಬಚ್ಚಿಟ್ಟುಕೊಂಡ್ರು ಬಿಡೋದಿಲ್ಲ... ಬೋಲ್ಡ್​ ಬ್ಯೂಟಿ ನೇಹಾ ಶರ್ಮಾ ಖಡಕ್​ ವಾರ್ನಿಂಗ್​ | Neha Sharma

ಮುಖ ಅಥವಾ ದೇಹವನ್ನು ಹೋಲುವ ರೀತಿಯಲ್ಲಿ ನಕಲಿ ವಿಡಿಯೋವನ್ನು ರಚಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಕಿಡಿಗೇಡಿಗಳು, ಇದೀಗ ನೇಹಾ ಅವರ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ.

Neha Sharma: ಪ್ರಸ್ತುತ ಡಿಜಿಟಲ್​ ಯುಗವನ್ನು ಆಳುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಟೆಕ್ನಾಲಜಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಒಂದಷ್ಟು ಕಿಡಿಗೇಡಿಗಳು, ಮಹಿಳೆಯರನ್ನು ಟಾರ್ಗೆಟ್​ ಮಾಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ, ಸಿನಿ ತಾರೆಯರು ಮತ್ತು ಇತರೆ ಕ್ಷೇತ್ರದ ಸೆಲೆಬ್ರಿಟಿಗಳು ಈ ಡೀಪ್​ಫೇಕ್, ಮಾರ್ಫಿಂಗ್​, ನಕಲಿ ಪೋಸ್ಟ್​ಗಳಿಗೆ ಬಹಳ ಸುಲಭವಾಗಿ ತುತ್ತಾಗುತ್ತಿದ್ದಾರೆ. ಇದೇ ಈಗ ತೆಲುಗು ನಟಿ ನೇಹಾ ಶರ್ಮಾ ಅವರ ಖಡಕ್​ ಎಚ್ಚರಿಕೆಗೆ ಕಾರಣ.

ಸಾಮಾಜಿಕ ಜಾಲತಾಣಗಳಲ್ಲಿ ಡೀಪ್ ಫೇಕ್ ವಿಡಿಯೋಗಳನ್ನು ಸೃಷ್ಟಿಸುತ್ತಿರುವ ಸಮಾಜಘಾತುಕರು, ಅತೀ ಮುಖ್ಯವಾಗಿ, ಸಿನಿಮಾ ಕಲಾವಿದರನ್ನು ಟಾರ್ಗೆಟ್​ ಮಾಡುತ್ತಿದ್ದಾರೆ. ಅದರಲ್ಲೂ, ಸ್ಟಾರ್​ ಮತ್ತು ಯುವ ನಟಿಮಣಿಯರು. ಅವರ ಮುಖ ಅಥವಾ ದೇಹವನ್ನು ಹೋಲುವ ರೀತಿಯಲ್ಲಿ ನಕಲಿ ವಿಡಿಯೋವನ್ನು ರಚಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಕಿಡಿಗೇಡಿಗಳು, ಇದೀಗ ನೇಹಾ ಅವರ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ.

ಈ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ನಟಿ, "ತಮ್ಮ ವಿರುದ್ಧ ಡೀಪ್​ಫೇಕ್​ ವಿಡಿಯೋಗಳನ್ನು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ನಾನೀಗ ಕಾನೂನು ಕ್ರಮವನ್ನು ಕೈಗೊಳ್ಳುತ್ತಿದ್ದೇನೆ. ಇನ್ಮುಂದೆ, ನನ್ನ ಡೀಪ್ ಫೇಕ್ ಫೋಟೋಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸುವವರಿಗೆ ಇದು ಕೊನೇ ವಾರ್ನಿಂಗ್​. ನನ್ನ ಅನುಮತಿಯಿಲ್ಲದೆ, ನನ್ನ ಮುಖವನ್ನು ಬಳಸಿ ಎಐ ವಿಡಿಯೋಗಳು ಅಥವಾ ಫೋಟೋಗಳನ್ನು ರಚಿಸುವುದನ್ನು ಇಂದೇ, ಈ ಕೂಡಲೇ ನಿಲ್ಲಿಸಿ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವ ನಕಲಿ ವಿಡಿಯೋಗಳನ್ನು ಡಿಲೀಟ್​ ಮಾಡಿ" ಎಂದಿದ್ದಾರೆ.

"ಯಾವುದೇ ಎಐ ಎಡಿಟಿಂಗ್‌ಗಾಗಿ ಅಥವಾ ಶೇರ್​ ಮಾಡುವ ಉದ್ದೇಶದಲ್ಲಿ ನನ್ನ ಮುಖವನ್ನು ಬಳಸಬೇಡಿ. ನನ್ನ ಘನತೆಗೆ ಧಕ್ಕೆ ತರುವ ಮತ್ತು ತಪ್ಪು ಚಿತ್ರಣವನ್ನು ನೀಡುವ ಇಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ. ನನ್ನ ಗುರುತನ್ನು ಅನಧಿಕೃತವಾಗಿ ಬಳಸುವುದನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಫೇಕ್​ ಅಕೌಂಟ್​ಗಳನ್ನು ಬಳಸಿಕೊಂಡವರು ಅಥವಾ ಎಐ ಟೂಲ್ಸ್​ ಮುಂದಿಟ್ಟು, ತಮ್ಮ ಮುಖವನ್ನು ಅಡಗಿಸಿಟ್ಟರೂ ನಿಮ್ಮನ್ನು ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ.

"ಇಂತಹ ವಿಷಯಗಳನ್ನು ಸೃಷ್ಟಿಸುವ ಮತ್ತು ಜಾಲತಾಣಗಳಲ್ಲಿ ಹಂಚಿಕೊಳ್ಳುವ ವ್ಯಕ್ತಿಗಳ ವಿರುದ್ಧ ನಾನು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ. ದಯವಿಟ್ಟು ಇದನ್ನು ಲಾಸ್ಟ್​ ವಾರ್ನಿಂಗ್ ಎಂದು ಪರಿಗಣಿಸಿ, ಆ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡಿ" ಎಂದು ಖಡಕ್​ ವಾರ್ನಿಂಗ್​ ನೀಡಿದ್ದಾರೆ. ನಟಿಯ ಈ ಖಾರವಾದ ಹೇಳಿಕೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).