ಆಂಕರ್ ಆನುಶ್ರೀ ಈಗ ಬೇರಸದಲ್ಲಿ ಇದ್ದಾರೆ. ಇದಕ್ಕೆ, ಕಾರಣ ಅನುಶ್ರೀ ಅವರು ತಮ್ಮ ಮುದ್ದಿನ ಶ್ವಾನವನ್ನು ಕಳೆದುಕೊಂಡಿರೋದು. ಸ್ವತಃ ಅನುಶ್ರೀ ಅವರೇ ನಾಯಿಯನ್ನು ಕಳೆದುಕೊಂಡ ವಿಚಾರವನ್ನು ಸಾಮಾಜಿಕ ಜಾಳತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಅವರ ಮುದ್ದಿನ ಶ್ವಾನದ ಹೆಸರು ಚಿನ್ನು ಅಂತ. ನಾಯಿಯ ಜೊತೆ ಅವರು ತೆಗೆಸಿಕೊಂಡಿರುವ ಕೊನೆಯ ಫೋಟೋ ಶೇರ್ ಮಾಡಿಕೊಂಡು ಅದರ ಅಗಲಿಕೆ ಬಗ್ಗೆ ಒಂದು ನೋವಿನ ಪೋಸ್ಟ್ ಮಾಡಿದ್ದಾರೆ ಅನುಶ್ರೀ.
ಕೆಲವೊಮ್ಮೆ ನೋವನ್ನು ಮುಚ್ಚಿಡುವುದು ಅಭ್ಯಾಸಬಾಗುತ್ತೆ ಎಂದು ಹೇಳಿಕೊಂಡಿದ್ದಾರೆ. ಹೌದು, ಅನೇಕ ಬಾರಿ ತಮ್ಮ ಮುದ್ದಿನ ಚಿನ್ನುವಿನ ಬಗ್ಗೆ ಖಾಸಗೀ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರು ಹೇಳಿಕೊಂಡಿದ್ದಾರೆ. ಚಿನ್ನು ಕೇವಲ ಶ್ವಾನ ಅಲ್ಲ. ನಮ್ಮ ಮನೆಯ ಒಬ್ಬ ಸದಸ್ಯ. ನಾವು ಮಾತನಾಡುವುದನ್ನು ಅವನು ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ. ಸುಮಾರು ಹತ್ತು ವರ್ಷಗಳಿಂದಲೂ ಅನುಶ್ರೀ ಅವರ ಕುಟುಂಬ ಸದಸ್ಯನಾಗಿದ್ದ ಚಿನ್ನುವನ್ನು ಕಳೆದುಕೊಂಡಿರೋದು ಅವರ ಕುಟುಂಬಕ್ಕೆ ತುಂಬಾನೆ ನೋವುಂಟು ಮಾಡಿದೆ.
ಚಿನ್ನುವಿನ ನೆನಪು ಸದಾ ನಮ್ಮೊಂದಿಗೆ ಇರತ್ತೆ ಎಂದು ಹೇಳಿದ್ದಾರೆ. ನಟಿ ಹಂಚಿಕೊಂಡಿರುವ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಅನುಶ್ರೀ ಆವರು ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದು, ಈಗ ಸೆಕೆಂಡ್ ಇನಿಂಗ್ಸ್ ಆರಂಭಿಸಲು ರೆಡಿಯಾಗಿದ್ದಾರೆ. ಹೊಸ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಪ್ರಭಾಕರನ್ ನಿರ್ದೇಶನದ ಸಿನಿಮಾವೊಂದರಲ್ಲಿ ಅನುಶ್ರೀ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಹಾರರ್, ಡ್ರಾಮಾ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು ಹೊಂದಿರಲಿದೆಯಂತೆ.