ಸಿನಿವಾಣಿ

ನಟಿ ಅನುಷ್ಕಾ ಶೆಟ್ಟಿ ಮತ್ತೆ ಮತ್ತೆ ಇಷ್ಟವಾಗುವುದು ಈ ಕಾರಣಕ್ಕೆ!

ಹೈದರಾಬಾದ್​: ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ನಟಿ ಅನುಷ್ಕಾ ಶೆಟ್ಟಿ ಕರ್ನಾಟಕದವರಾದರೂ, ಒಂದೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಆದರೆ, ಕನ್ನಡ, ಕರ್ನಾಟಕದ ವಿಷಯ ಬಂದಾಗ ಮೊದಲ ಪಂಕ್ತಿಯಲ್ಲಿ ಅನುಷ್ಕಾ ಕಾಣಿಸುತ್ತಾರೆ.

ಯಾವುದೇ ಹಬ್ಬ, ಹರಿದಿನವಿರಲಿ ಮೊದಲು ಕನ್ನಡದಲ್ಲಿಯೇ ಕರ್ನಾಟಕದ ಜನತೆಗೆ ಶುಭಾಶಯ ಕೋರುತ್ತಾರೆ. ಅದೇ ರೀತಿ ನಿನ್ನೆ ಯುಗಾದಿ ಹಬ್ಬದ ಸಂದರ್ಭದಲ್ಲೂ ಕನ್ನಡದಲ್ಲಿಯೇ ಶುಭಾಶಯ ಕೋರಿ ಮತ್ತಷ್ಟು ಹತ್ತಿರವಾಗಿದ್ದರು. ಫೇಸ್‌ಬುಕ್‌ನಲ್ಲಿ ‘ಯುಗಾದಿಯ ಶುಭಾಶಯಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲರಿಗೂ ಈ ಯುಗಾದಿಯು ಸಂತೋಷ ಮತ್ತು ಸಮೃದ್ಧತೆಯನ್ನು ನೀಡಲಿ. ನಾವೆಲ್ಲರೂ ಈ ಸಮಯವನ್ನು ಕುಟುಂಬದೊಂದಿಗೆ ಆನಂದಿಸೋಣ. ಸರ್ಕಾರದ ಆದೇಶದಂತೆ ಮನೆಯಲ್ಲಿ ಸುರಕ್ಷಿತವಾಗಿ ಇರೋಣ’ ಎಂಬ ಸಂದೇಶವನ್ನೂ ತಿಳಿಸಿದ್ದಾರೆ.

ಅಂದಹಾಗೆ, ಅನುಷ್ಕಾ ಇದೇ ಮೊದಲ ಬಾರಿ ಕನ್ನಡದಲ್ಲಿ ಬರೆದು ಶುಭಾಶಯ ಕೋರಿಲ್ಲ. ಈ ಹಿಂದೆ, ಕನ್ನಡ ರಾಜ್ಯೋತ್ಸವ ಸೇರಿ ಡಾ. ರಾಜ್ ಜನ್ಮದಿನವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.