ಸಿನಿವಾಣಿ

ಒಳಉಡುಪಿನಲ್ಲಿರೋ ಫೋಟೋ ಪೋಸ್ಟ್​ ಮಾಡಿದ ನಿರ್ದೇಶಕನ ಮಗಳಿಗೆ ಬಿಗ್​ ಶಾಕ್​..!

ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಮಗಳಾದ ಆಲಿಯಾ ಕಶ್ಯಪ್​ಗೆ ಟ್ರೋಲಿಗರ ಕಾಟ ಹೆಚ್ಚಾಗಿದೆಯಂತೆ. ಒಳಉಡುಪಿನಲ್ಲಿ ತೆಗೆಸಿದ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿದಾಗಲೆಲ್ಲ ತುಂಬಾ ಕೆಟ್ಟ ಕಾಮೆಂಟ್​ಗಳು ಬರುತ್ತವೆ. ನನ್ನನ್ನು 'ವೇಶ್ಯೆ' ಎಂದು ಕರೆಯುತ್ತಾರೆ. ಅಲ್ಲದೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬರುತ್ತಿವೆ ಎಂದು ಆಲಿಯಾ ಅಳಲು ತೋಡಿಕೊಂಡಿದ್ದಾರೆ.

ತನ್ನದೇ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಆಲಿಯಾ, ಟ್ರೋಲ್​ಗಳನ್ನು ಯಾವ ರೀತಿ ನಿರ್ವಹಿಸುತ್ತೇನೆಂದು ತಿಳಿಸಿದ್ದಾರೆ. ನಾನು ತುಂಬಾ ಸೂಕ್ಷ್ಮ ಮನಸ್ಸಿನವಳು. ಸಣ್ಣ ಮಟ್ಟದ ಹಗೆತನವು ಸಹ ನನ್ನ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಅದು ನನಗೆ ತಿಳಿದಿಲ್ಲ. ನಾನು ತುಂಬಾ ಸೂಕ್ಷ್ಮ. ಟ್ರೋಲಿಗರ ಅಸಭ್ಯತೆಯಿಂದ ಪ್ರತಿ ದಿನ ನಾನು ಅಳುವಂತಾಗಿದೆ ಎಂದು ಆಲಿಯಾ ಹೇಳಿದ್ದಾರೆ.

ಒಳಉಡುಪು ಧರಿಸಿ ತೆಗೆಸಿದ ಫೋಟೋಗಳನ್ನು ಪೋಸ್ಟ್​ ಮಾಡಿದಾಗ ಬರುವ ಪ್ರತಿಕ್ರಿಯೆ ಬಗ್ಗೆ ಮಾತನಾಡಿರುವ ಆಲಿಯಾ, ಇಂತಹ ಫೋಟೋಗಳನ್ನು ಪೋಸ್ಟ್​ಗಳನ್ನು ಮಾಡುವ ನಾನು ಭಾರತೀಯಳಾಗಿರಲು ನಾಚಿಕೆಯಾಗಬೇಕಂತೆ. ಜನರು ನನಗೆ ರೇಪ್​ ಬೆದರಿಕೆ ಹಾಕುತ್ತಿದ್ದಾರೆ. ನನ್ನನ್ನು ವೇಶ್ಯೆ ಎಂದು ಕರೆಯುತ್ತಿದ್ದಾರೆ. ಅಲ್ಲದೆ, ನನ್ನ ಬೆಲೆ ಎಷ್ಟೆಂದು ಕೇಳುತ್ತಿದ್ದಾರೆ. ಇಂತಹ ಸಾಕಷ್ಟು ಕಾಮೆಂಟ್​ಗಳು ಬರುತ್ತಿವೆ ಎಂದು ಆಲಿಯಾ ನೋವು ತೋಡಿಕೊಂಡಿದ್ದಾರೆ.

ಇದು ಸಮಸ್ಯೆಯೇ ಅಲ್ಲ ಎಂದು ನನಗೀಗ ಅರ್ಥವಾಗಿದೆ. ಇಂತಹ ಜನರು ತಮ್ಮ ಗುರುತನ್ನು ಬಚ್ಚಿಟ್ಟು ಫೋನ್​ ಹಿಂದೆಯೇ ಮಾತನಾಡುತ್ತಾರೆ. ನನ್ನ ಬಗ್ಗೆ ಯಾರೇ ನೆಗಿಟಿವ್​ ಆಗಿ ಮಾತನಾಡಿದರೆ, ಅವರನ್ನು ಮುಲಾಜಿಲ್ಲದೆ ಬ್ಲಾಕ್​ ಮಾಡುತ್ತೇನೆ. ಏಕೆಂದರೆ, ನನ್ನ ಜಾಲತಾಣ ಖಾತೆಯು ಪಾಸಿಟಿವ್​ ಸ್ಥಳದಲ್ಲಿ ಇರಬೇಕೆಂದು ಬಯಸುತ್ತೇನೆಂದಿದ್ದಾರೆ. ಇದೇ ವೇಳೆ ಸಿನಿಮಾ ಇಂಡಸ್ಟ್ರಿ ಸೇರುವ ಬಗ್ಗೆ ಯಾವುದೇ ಯೋಜನೆ ಇಲ್ಲ. ಬಾಲಿವುಡ್​ ಗ್ಲಾಮರ್​ ಜತೆ ನಾನು ಬೆಳಯಲು ಇಷ್ಟ ಪಡುವುದಿಲ್ಲ ಎಂದು ಆಲಿಯಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)