Anupama Parameswaran sparks break-up rumoursDhruv Vikram 
ಸಿನಿವಾಣಿ

'ಅನುಮತಿ ಕೇಳಬೇಕಿಲ್ಲ, ಯಾರ ಭಯವಿಲ್ಲ'; ಅನುಪಮಾ ಪರಮೇಶ್ವರನ್​​ ಹೊಸ ಪೋಸ್ಟ್​, ಧ್ರುವ್​ ವಿಕ್ರಂ ಜೊತೆ ಬ್ರೇಕಪ್​?..Anupama Parameswaran

ಪ್ರಮುಖ ಮುಖ್ಯಾಂಶಗಳು

  • ಹೊಸ ಪೋಸ್ಟ್​ ಹಂಚಿಕೊಂಡ ನಟಿ ಅನುಪಮಾ ಪರಮೇಶ್ವರನ್​ ​, ಧ್ರುವ್​ ಜೊತೆಗೆ ಬ್ರೇಕಪ್​​ ವದಂತಿ
  • ಯಾರ ಅನುಮತಿ ಬೇಕಿಲ್ಲ, ಸ್ವತಂತ್ರ್ಯ ನಾನು ಎಂದು ಬರೆದುಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣ
  • ಧ್ರುವ್​ ಜೊತೆ ಬ್ರೇಕಪ್​ ಮಾಡಿಕೊಂಡು ಸ್ವತಂತ್ರ್ಯವಾಗಿ ಬದುಕುತ್ತಿರಬೇಕು ಎಂದ ಫ್ಯಾನ್ಸ್
Anupama Parameswaran sparks break-up rumoursDhruv Vikram: ನಿರ್ದೇಶಕ ಮಾರಿ ಸೆಲ್ವರಾಜ್​ ನಿರ್ದೇಶನದ ಬೈಸನ್​ ಕಾಳಮಾಡನ್ ಸಿನಿಮಾ ಮೂಲಕ ಧ್ರುವ್​ ವಿಕ್ರಂ ಹಾಗೂ ಸೌತ್​ ಇಂಡಿಯಾದ ನಟಿ ಅನುಪಮಾ ಪರಮೇಶ್ವರನ್​ ಹೆಚ್ಚು ಸದ್ದು ಮಾಡಿದ್ದರು. ಇಬ್ಬರು ಪ್ರೀತಿಯಲ್ಲಿದ್ದಾರೆ. ಗುಟ್ಟಾಗಿ ಡೇಟಿಂಗ್​ ಮಾಡ್ತಿದ್ದಾರೆ. ಒಂದೇ ಸ್ಥಳದಲ್ಲಿದ್ದು ಪ್ರತ್ಯೇಕವಾಗಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎನ್ನುವ ಊಹಾಪೋಹಗಳು ಹರಡಿದ್ದವು. ಇದು ನಿಜ ಎಂದು ಸ್ಪಷ್ಟವಾಗುವ ಮುನ್ನವೇ ಅನುಪಮಾ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ವೊಂದು ಸದ್ದು ಮಾಡುತ್ತಿದೆ. ಪರೋಕ್ಷವಾಗಿ ಧ್ರುವ್​ರೊಂದಿಗಿನ ಬ್ರೇಕಪ್​ ಸಂದೇಶವನ್ನು ನೀಡಿದಂತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.​
ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್​ ಮೀಡಿಯಾದಿಂದ ದೂರವಿದ್ದ ನಟಿ ಅನುಪಮಾ ಪರಮೇಶ್ವರನ್​ ಅವರು ಧಿಡೀರನೇ ವಿಡಿಯೋವೊಂದು ಹಂಚಿಕೊಂಡು, ನನ್ನ ಆಯ್ಕೆ, ಸ್ವತಂತ್ರ್ಯ, ಯಾರ ಅನುಮತಿ ಬೇಕಿಲ್ಲ ಎಂದು ಬರೆದುಕೊಂಡಿರುವ ಉದ್ದನೆಯ ಶೀರ್ಷಿಕೆಯು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೊದಲ ಪೋಸ್ಟ್​ ಹೀಗಿದೆ

ಓಹ್​​​ ಇಷ್ಟು ದಿನ ಪೋಸ್ಟ್ ಮಾಡದೆ ಇದ್ದಿದ್ದಕ್ಕೆ ಕ್ಷಮಿಸಿ. ಅನುಮೋದನೆ, ಹಾಡಿನ ಆಯ್ಕೆ ಬೇರೆಯವರ ಶೀರ್ಷಿಕೆಗಾಗಿ ಇನ್ಮುಂದೆ ಕಾಯುವಂತಿಲ್ಲ, ನನ್ನದೇ ಶೀರ್ಷಿಕೆ ಹಾಡು ಆಯ್ಕೆ ಮಾಡಿ ಪೋಸ್ಟ್​ ಮಾಡೋದು ಖುಷಿಯಾದ ವಿಚಾರ ಎಂದು ಶೀರ್ಷಿಕೆ ಬರೆದುಕೊಂಡಿದ್ದರು.

ಅನುಪಮಾರ ಮತ್ತೊಂದು ಪೋಸ್ಟ್​ನಲ್ಲಿ ಏನಿದೆ?

ಕೆಲವೊಮ್ಮೆ ಎಂದೂ ಮುಗಿಯದ, ಎಲ್ಲಿಗೋ ಕರೆದೊಯ್ಯುವ ಅಥವಾ ಮುಚ್ಚಿಹೋದ ಮಾರ್ಗ ಬಿಟ್ಟು ಬೇರೋಂದು ಕಡೆ ಸಾಗಬೇಕಾಗುತ್ತದೆ. ಅಲ್ಲಿಯೇ ಠಿಕಾಣಿ ಹೂಡುವುದರಿಂದ ಮನಸ್ಸಿಗೆ ಶಾಂತಿ ಸಿಗೋದಿಲ್ಲ. ಮತ್ತೆ ನಂಗೆ ಇಂದು ಆ ಶಾಂತಿ, ನೆಮ್ಮದಿ ಸಿಕ್ಕಿದೆ.
ಇಂದಿನಿಂದ ನಾನು ನನ್ನದೇ ಧ್ವನಿಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಯಾರ ಅನುಮತಿಗಾಗಿ ಕಾಯುವ ಅಗತ್ಯವಿಲ್ಲ,.ಹಾಗಯೇ ಯಾರ ಭಯವೂ ಇಲ್ಲ. ನಾನು ನನನ್ನೇ ಮರಳಿ ಕಂಡುಕೊಳ್ಳುತ್ತಾ, ಮರೆತು ಹೋದ ಜೀವನವನ್ನು ಪ್ರೀತಿಸುತ್ತಿದ್ದೇನೆ. ನಾನು ಬಹಳ ದಿನದಿಂದ ಹೇಳದೆ ಮುಚ್ಚಿಟ್ಟಿದ್ದ, ಹೇಳಲು ಅವಕಾಶವಿರದ ಒಂದು ಮಾತು ಇದೆ. ಅದು ನಾನು ನಿಮ್ಮನ್ನೆಲ್ಲ ತುಂಬಾನೆ ಪ್ರೀತಿಸುತ್ತೇನೆ ಎಂದು.
ನನ್ನ ಪರ ನೀವೆಲ್ಲ ನಿಂತಿದ್ದಕ್ಕೆ. ಇಷ್ಟು ಕಾಲ ನನ್ನನ್ನು ನಂಬಿದಕ್ಕೆ.ನನ್ನ ಜೀವನವನ್ನು ಇಷ್ಟೊಂದು ಪ್ರೀತಿಯಿಂದ ತುಂಬಿದ್ದಕ್ಕೆ ಧನ್ಯವಾದಗಳು. ನಾನು ಇದನ್ನು ಹಿಂದೆ ಸರಿಯಾಗಿ ಹೇಳದಿದ್ದರೆ, ದಯವಿಟ್ಟು ತಿಳಿದುಕೊಳ್ಳಿ—ನಾನು ಅದನ್ನು ಯಾವಾಗಲೂ ಅನುಭವಿಸಿದ್ದೇನೆ. ಪ್ರತಿಯೊಂದು ಸಂದೇಶ, ಪ್ರತಿಯೊಂದು ಪ್ರಾರ್ಥನೆ, ಪ್ರತಿಯೊಂದು ಕರುಣೆಯ ಮಾತುಗಳು ನನಗೆ ತೀರಾ ಅಗತ್ಯವಿದ್ದಾಗ ನನ್ನನ್ನು ತಲುಪಿವೆ.
ನನ್ನನ್ನು ಮರಳಿ ನನ್ನ ಬಳಿಗೆ ಮುನ್ನಡೆಸಿದ ಯೂನಿವರ್ಸ್​ಗೆ ಧನ್ಯವಾದ. ಇದು ನನ್ನ ಹೀಲಿಂಗ್​ ಮತ್ತು ಸ್ವಾತಂತ್ರ್ಯದ ಸಮಯ.ಕೊನೆಗೂ ಸಂಪೂರ್ಣವಾಗಿ, ಯಾವುದೇ ಹಿಂಜರಿಕೆಯಿಲ್ಲದೆ ನನ್ನದೇ ಆದ ಒಂದು ಜೀವನಕ್ಕೆ ವಾಪಸ್​ ಆಗಿದ್ದೇನೆ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಫ್ಯಾನ್ಸ್​, ನೆಟ್ಟಿಗರು ಏನಂದ್ರು?

ಕೆಲವರು ನಟಿಯ ಅಂದವನ್ನು ಹೊಗಳಿದರೆ, ಇನ್ನೂ ಕೆಲವರು ಅನುಪಮಾ ಹಾಗೂ ಧ್ರುವ್​ ಅವರ ಲವ್​​ ಬ್ರೇಕಪ್​ ಆಗಿದೆ. ಈಗ ಅವರು ಒಬ್ಬಂಟಿಯಾಗಿ ಜೀವನವನ್ನು ಸಂತೋಷವಾಗಿ ಕಳೆಯುತ್ತಿರಬೇಕು. ಹೀಗಾಗಿ ಈಗ ಸ್ವತಂತ್ರ್ಯ ಜೀವನವನ್ನು ಸಂಭ್ರಮಿಸುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಧ್ರುವ್​ ವಿಷ್​ಗೆ ನಾಚಿ ನೀರಾಗಿದ್ದ ಅನುಪಮಾ

ಬೈಸನ್​ ಸಿನಿಮಾ ರಿಲೀಸ್​ ವೇಳೆ ಇಬ್ಬರು ಓಡಾಟ, ಮಾತು ಡೇಟಿಂಗ್​ ವಿವಾದವನ್ನು ಹಬ್ಬಿಸಿದ್ದವು. ವೇದಿಕೆ ಮೇಲೆ ಅನುಪಮಾ ಅವರಿಗೆ ಧ್ರುವ್​ ಬರ್ತಡೇ ಶುಭ ಕೋರಿದ್ದನ್ನು ನೋಡಿ ನಟಿ ಅನುಪಮಾ ನಾಚಿ ನೀರಾಗಿದ್ದರು. ಇತ್ತೀಚೆಗೆ ನಟಿ ಸಾಯಿಪಲ್ಲವಿ ಅವರನ್ನು ಟ್ಯಾಗ್​ ಮಾಡಿ ಹೊಗಳಿದ್ದರು. ತಮ್ಮ ಕಲಾತ್ಮಕ ಪೇಟಿಂಗ್​ ಹೊರಬರಲು ಅವರೇ ಕಾರಣ ಎಂದಿದ್ದರು.2021ರಲ್ಲಿ ತಾವಿದ್ದ ಪರಿಸ್ಥಿತಿಯ ಬಗ್ಗೆ ನಟಿ ಬಳಿ ಹೇಳಿಕೊಂಡಾಗ ವಾಟರ್​ ಪೇಟಿಂಗ್​ಗೆ ಸಾಯಿಪಲ್ಲವಿ ಉತ್ತೇಜಿಸಿದ್ದು, ಅದರಿಂದ ತಮಗಾದ ಲಾಭಧ ಬಗ್ಗೆ ಅನುಪಮಾ ಬರೆದುಕೊಂಡಿದ್ದರು, (ಏಜೆನ್ಸೀಸ್).