Anora : ಇಂದು (ಮಾ.03) 97ನೇ ಆಸ್ಕರ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಬಾರಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಅನೋರಾ' ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದರ ಜೊತೆಗೆ, ಇದು ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡ ಗೆದ್ದುಕೊಂಡಿದೆ. ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಮೂಲ ಚಿತ್ರಕಥೆ ಮತ್ತು ಅತ್ಯುತ್ತಮ ಸಂಕಲನ ವಿಭಾಗದಲ್ಲಿ ಅವಾರ್ಡ್ ಬಂದಿದೆ. ಇಷ್ಟು ಪ್ರಶಸ್ತಿಗಳನ್ನು ಗೆದ್ದಿರುವ ಅನೋರಾ ಚಿತ್ರದ ವಿಶೇಷತೆ ಏನು ಎಂಬುದನ್ನು ನಾವೀಗ ತಿಳಿಯೋಣ.
ಅನೋರಾ ಒಂದು ರೊಮ್ಯಾಂಟಿಕ್ ಹಾಸ್ಯ ಚಿತ್ರ. ರಷ್ಯಾದ ಕೋಟ್ಯಾಧಿಪತಿ ಹುಡುಗನೊಬ್ಬ ಅಮೆರಿಕಕ್ಕೆ ಅಧ್ಯಯನ ಮಾಡಲು ಬರುತ್ತಾನೆ. ಈ ವೇಳೆ ಆತ ವೇಶ್ಯೆಯೊಬ್ಬಳನ್ನು ಭೇಟಿಯಾಗಿ, ಒಂದು ವಾರ ತನ್ನೊಂದಿಗೆ ಇರಲು ಹಣ ಕೊಡುತ್ತಾನೆ. ಆದರೆ, ಕೆಲವೇ ದಿನಗಳಲ್ಲಿ ಆತ ಅವಳನ್ನು ಪ್ರೀತಿಸಲು ಶುರು ಮಾಡುತ್ತಾನೆ ಮತ್ತು ಅವಳನ್ನು ಮದುವೆ ಸಹ ಆಗುತ್ತಾನೆ. ಆದರೆ, ಹುಡುಗನ ಪಾಲಕರಿಗೆ ಇದು ಗೊತ್ತಾಗಿ, ಅವನನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ವೇಶ್ಯೆ ಆತನಿಗೆ ಏನು ಮಾಡಿದಳು? ಕೊನೆಯಲ್ಲಿ ಏನಾಯಿತು ಎಂಬುದು ಸಿನಿಮಾದ ಉಳಿದ ಕಥೆ.
ಸಾಮಾನ್ಯವಾಗಿ, ಆಸ್ಕರ್ ಪ್ರಶಸ್ತಿಗಳನ್ನು ವಿಷಯಾಧಾರಿತ ಚಿತ್ರಗಳಿಗೆ ಮಾತ್ರ ನೀಡಲಾಗುತ್ತದೆ. ಆದರೆ, 18+ ಕಂಟೆಂಟ್ ಹೊಂದಿರುವ ಅನೋರಾ ಚಿತ್ರಕ್ಕೆ ಅತ್ಯುತ್ತಮ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ನೀಡಿರುವುದು ಅನೇಕ ಜನರನ್ನು ಅಚ್ಚರಿಗೊಳಿಸಿದೆ. ಸುಮಾರು ಎರಡೂವರೆ ಗಂಟೆಗಳ ಈ ಚಿತ್ರವು ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಅನೇಕರಿಂದ ಮೆಚ್ಚುಗೆ ಪಡೆಯಿತು. ಮೊದಲ ಗಂಟೆ ಮಸಾಲೆಯುಕ್ತ ದೃಶ್ಯಗಳೊಂದಿಗೆ ಸರಾಸರಿ ಹಾಲಿವುಡ್ ಚಲನಚಿತ್ರದಂತೆ ಕಂಡರೂ ದ್ವಿತೀಯಾರ್ಧವು ಉತ್ತಮ ಮತ್ತು ಭಾವನಾತ್ಮಕವಾಗಿದೆ. ಕ್ಲೈಮ್ಯಾಕ್ಸ್ ಮಾತ್ರ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ.
ನಮ್ಮಲ್ಲಿ ಹಲವರು ವೇಶ್ಯೆಯರನ್ನು ಕೀಳಾಗಿ ಕಾಣುತ್ತಾರೆ. ಆದರೆ, ಅವರು ಕೂಡ ಮನುಷ್ಯರೇ. ಅವರನ್ನು ಕೀಳಾಗಿ ಕಾಣಬಾರದು ಎಂಬ ಅಂಶದೊಂದಿಗೆ ಚಿತ್ರಿಸಲಾದ 'ಅನೋರಾ' ಈಗ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ. ಅನೋರಾ ಎಂಬುದು ಒಂದು ಲ್ಯಾಟಿನ್ ಪದ. ಕನ್ನಡದಲ್ಲಿ ಇದರ ಅರ್ಥ ಏನೆಂದು ನಿಮಗೆ ತಿಳಿದಿದೆಯೇ? ಅನೋರಾ ಅಂದರೆ, ಕನ್ನಡದಲ್ಲಿ 'ಗೌರವ' ಎಂದರ್ಥ.
* ಅತ್ಯುತ್ತಮ ಸಿನಿಮಾ - ಅನೋರಾ
* ಅತ್ಯುತ್ತಮ ಪೋಷಕ ನಟ – ಕೀರನ್ ಕಲ್ಕಿನ್ (ಎ ರಿಯಲ್ ಪೇನ್)
* ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್ಪ್ಲೇ – ಪೀಟರ್ ಸ್ಟ್ರಾಘನ್ (ಕಾನ್ಕ್ಲೇವ್)
* ಅತ್ಯುತ್ತಮ ಮೂಲ ಚಿತ್ರಕಥೆ – ಸೀನ್ ಬೇಕರ್ (ಅನೋರಾ)
* ಅತ್ಯುತ್ತಮ ವೇಷಭೂಷಣ ವಿನ್ಯಾಸ – ಪಾಲ್ ಟೇಜ್‌ವೆಲ್ (ವಿಕೆಡ್)
* ಅತ್ಯುತ್ತಮ ಅನಿಮೇಟೆಡ್ ಫೀಚರ್ – ಫ್ಲೋ
* ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ – ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್
* ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ – ದಿ ಸಬ್‌ಸ್ಟೆನ್ಸ್
* ಅತ್ಯುತ್ತಮ ಸಂಕಲನ – ಸೀನ್ ಬೇಕರ್ (ಅನೋರಾ)
* ಅತ್ಯುತ್ತಮ ಪೋಷಕ ನಟಿ – ಜೋ ಸಲ್ಡಾನಾ (ಎಮಿಲಿಯಾ ಪೆರೆಜ್)
* ಅತ್ಯುತ್ತಮ ಮೂಲ ಹಾಡು – ಎಲ್ ಮಾಲ್ (ಎಮಿಲಿಯಾ ಪೆರೆಜ್)
* ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ನಾಥನ್ ಕ್ರೌಲಿ, ಲೀ ಸ್ಯಾಂಡಲ್ಸ್ (ವಿಕೆಡ್)
* ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ – ನೋ ಅದರ್ ಲ್ಯಾಂಡ್
* ಅತ್ಯುತ್ತಮ ಸಾಕ್ಷ್ಯಚಿತ್ರ – ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
* ಅತ್ಯುತ್ತಮ ಧ್ವನಿ – ಡ್ಯೂನ್ – ಭಾಗ 2
* ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ – ಐ ಆಮ್ ನಾಟ್ ಎ ರೋಬೋಟ್
* ಅತ್ಯುತ್ತಮ ಛಾಯಾಗ್ರಹಣ – ಲಾಲ್ ಕ್ರೇಲ್ (ದಿ ಬ್ರೂಟಲಿಸ್ಟ್)
* ಅತ್ಯುತ್ತಮ ನಿರ್ದೇಶಕ – ಸೀನ್ ಬೇಕರ್ (ಅನೋರಾ)
* ಅತ್ಯುತ್ತಮ ನಟ – ಆಡ್ರಿಯನ್ ನಿಕೋಲಸ್ ಬ್ರಾಡಿ (ದಿ ಬ್ರೂಟಲಿಸ್ಟ್)
* ಅತ್ಯುತ್ತಮ ಮೂಲ ಸಂಗೀತ – ಡೇನಿಯಲ್ ಬ್ಲಂಬರ್ಗ್ (ದಿ ಬ್ರೂಟಲಿಸ್ಟ್)
* ಅತ್ಯುತ್ತಮ ನಟಿ – ಮೈಕಿ ಮ್ಯಾಡಿಸನ್ (ಅನೋರಾ)