ಸಿನಿವಾಣಿ

ಯುವ ಸಂಭ್ರಮದಲ್ಲಿ ಅಂಕಿತಾ ಅಮರ್​! Ankita Amar

Ankita Amar: ಕುಲವಧು ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ನಂತರ ನಮ್ಮನೆ ಯುವರಾಣಿ, ಶ್ರೀಮತಿ ಶ್ರೀನಿವಾಸ ಮೊದಲಾದ ಸೀರಿಯಲ್​ಗಳಲ್ಲಿ ಸೈ ಎನಿಸಿಕೊಂಡು, ನಂತರ ಮೈ ಹಿರೋ, ಇಬ್ಬನಿ ತಬ್ಬಿದ ಇಳೆಯಲಿ ಹಾಗೂ ಜಸ್ಟ್​ ಮ್ಯಾರಿಡ್​ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ನಟಿ ಎಂದರೆ ಅದು ಅಂಕಿತಾ ಅಮರ್​ ಆಗಿದ್ದಾರೆ. ಇವರ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಅಭಿನಯಕ್ಕೆ ಸೈಮಾ ಅತ್ಯುತ್ತಮ ಪಾದಾರ್ಪಣಾ ನಟಿ ಪ್ರಶಸ್ತಿ ಕೂಡ ಲಭಿಸಿದೆ. ಇತ್ತೀಚೆಗೆ ಅಂಕಿತಾ, ಮೈಸೂರಿನ ಮಾನಸ ಗಂಗ್ರೋತ್ರಿಯಲ್ಲಿ ನಡೆಯುತ್ತಿರುವ ಯುವ ಸಂಭ್ರಮ ಎಂಬ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಲ್ಲಿ ಕ್ಲಕ್​ಕಿಸಿಕೊಂಡ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ