ಸಿನಿವಾಣಿ

ಶಿವಣ್ಣನಿಗೆ ಅಂಜಲಿ ನಾಯಕಿ

ಬೆಂಗಳೂರು: ‘ಹೊಂಗನಸು’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸಿ, ಅದಾದ ಬಳಿಕ ಪುನೀತ್ ರಾಜಕುಮಾರ್ ಜತೆಗೆ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿದ್ದ ಅಂಜಲಿ ಇದೀಗ ಮತ್ತೆ ಚಂದನವನಕ್ಕೆ ಆಗಮಿಸಿದ್ದಾರೆ. ಈ ಸಲ ಅವರು ‘ಸೆಂಚುರಿ ಸ್ಟಾರ್’ ಶಿವರಾಜಕುಮಾರ್​ಗೆ ಜೋಡಿಯಾಗಲಿದ್ದಾರೆ.

ಶಿವರಾಜಕುಮಾರ್, ಡಾಲಿ ಧನಂಜಯ್ ಮತ್ತು ಪೃಥ್ವಿ ಅಂಬರ್ ನಟಿಸಲಿರುವ ‘ಶಿವಪ್ಪ’ ಚಿತ್ರದ ಶೀರ್ಷಿಕೆ ಅನಾವರಣ ಮತ್ತು ಮುಹೂರ್ತ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿದೆ. ಇದೀಗ ಈ ಚಿತ್ರಕ್ಕೆ ಬಹುಭಾಷಾ ನಟಿ ಅಂಜಲಿ ಆಗಮಿಸಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್​ನಲ್ಲಿಯೂ ಭಾಗವಹಿಸಿದ್ದಾರೆ.

ಶಿವಪ್ಪ ಚಿತ್ರದಲ್ಲಿ ಒಟ್ಟು ಮೂರು ವಿಭಿನ್ನ ಬಗೆಯ ಶೇಡ್​ಗಳಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದು, ನಿರ್ದೇಶಕ ವಿಜಯ್ ಮಿಲ್ಟನ್ ನಿದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ತಮಿಳಿನಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿರುವ ಅವರು, ಇದೀಗ ಮೊದಲ ಬಾರಿ ಶಿವಣ್ಣನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಕನ್ನಡಕ್ಕೆ ಆಗಮಿಸಿದ್ದಾರೆ.