Janhvi Kapoor skips Ram Charan Peddi success meet  
ಸಿನಿವಾಣಿ

‘ಪೆದ್ದಿ’ ಯಶಸ್ಸಿನ ವೇದಿಕೆಯಲ್ಲಿ ನಟಿ ಜಾನ್ಹವಿ ಕಪೂರ್ ಕಾಣಲೇ ಇಲ್ಲ: ವಿವಾದಗಳಿಂದ ದೂರವೇ?..Janhvi Kapoor

ಪ್ರಮುಖ ಮುಖ್ಯಾಂಶಗಳು

  • ಅಚ್ಚಿಯಮ್ಮ ಪಾತ್ರ ವಿವಾದದ ಬೆನ್ನಲ್ಲೇ ಪೆದ್ದಿ ಸಿನಿಮಾದ ಸಕ್ಸಸ್​ ಮೀಟ್​
  • ಪೆದ್ದಿ ಸಿನಿಮಾದ ಸಕ್ಸಸ್​ ಮೀಟ್​ಗೆ ಗೈರಾದ ಜಾನ್ಹವಿ ಕಪೂರ್​​
  • ಉಪ್ಪೇನಾ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನದ ಪೆದ್ದಿ ಸಿನಿಮಾ
Peddi’ success meet  Janhvi Kapoor Absent: ಬುಚ್ಚಿ ಬಾಬು ಸನಾ ನಿರ್ದೇಶನದ ಪೆದ್ದಿ ಸಿನಿಮಾವು ಒಂದು ಕಡೆ ದಿನದಿಂದ ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ  ಜಾನ್ಹವಿ ಕಪೂರ್​ ಅವರನ್ನು ಸಿನಿಮಾದಲ್ಲಿ ಐಟಂ ಗರ್ಲ್​ನಂತೆ ತೋರಿಸಲಾಗಿದೆ, ಗ್ಲಾಮರ್​ಗಾಗಿ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ವಿವಾದ ಇನ್ನೂ ತಣ್ಣಗಾಗಿಲ್ಲ.  ಈ ಮಧ್ಯೆ  ಚಿತ್ರತಂಡ ಜೂನ್​.8ರಂದು ನಡೆಸಿದ ಪೆದ್ದಿ ಸಕ್ಸಸ್​ ಮೀಟ್​ಗೆ ಜಾನ್ಹವಿ ಕಪೂರ್​ ಅವರು ಹೋಗದೆ ಇರುವುದು ಮತ್ತಷ್ಟು ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಂತೆ ಆಗಿದೆ.
'ಮಹಿಳೆಯರನ್ನು ನಾನು ಗೌರವಿಸುತ್ತೇನೆ. ಭಾವನೆಗೆ ಧಕ್ಕೆಯಾಗಿದ್ದರೆ ನನ್ನನ್ನು ಕ್ಷಮಿಸಿ. ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕಲಾಗುವುದು ಎಂದು  ನಿರ್ದೇಶಕ ಬುಚ್ಚಿಬಾಬು ಸನಾ ಭರವಸೆ ಕೊಟ್ಟಿದ್ದರು. ಅದರಂತೆ ಟೀಕೆಗೆ ಒಳಗಾದ ದೃಶ್ಯಕ್ಕೆ ಕತ್ತರಿ ಹಾಕಲಾಯಿತು ಎನ್ನುವ ಮಾಹಿತಿ ಸಹ ಹೊರಬಿದ್ದಿದೆ. ಇಷ್ಟಾಗಿಯೂ ಟೀಕೆ ಮಾತ್ರ ನಿಂತಿಲ್ಲ,. ಕೆಲವರು ಜಾನ್ವಿ ಕಪೂರ್​ ಅವರು ಸಹ ಈ ಬಗ್ಗೆ ಗಮನ ಹರಿಸಬೇಕಿತ್ತು. ಅವರ ಕರ್ತವ್ಯ ಇದು ಎಂದರೆ, ಇನ್ನೂ ಕೆಲವರು ನಿರ್ದೇಶಕರು ಹೇಳಿದ್ದನ್ನು ಜಾನ್ಹವಿ ಕಪೂರ್​ಮಾಡಿದ್ದಾರೆ ಅಷ್ಟೇ ಅವರನ್ನು ಟೀಕೆ ಮಾಡೋದು ತಪ್ಪು ಎಂದು ನಟಿ ಪರ ನಿಂತಿದ್ದಾರೆ.

ಪೆದ್ದಿ ಸಕ್ಸಸ್​ ಮೀಟ್​ಗೆ ಹೋಗದ ಜಾನ್ಹವಿ!

ಗ್ಲಾಮರ್​​ಗಾಗಿ ಜಾಹ್ನವಿಯವರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹಳ್ಳಿಯಲ್ಲಿ ಇಂತಹ ಬಟ್ಟೆ ಯಾರು ಧರಿಸುತ್ತಾರೆ ಎಂದು ಟೀಕೆಗಳು, ವಿವಾದಗಳ ಮಧ್ಯೆಯೇ ರಾಮ್​ ಚರಣ್​ ನಟನೆಯ ಪೆದ್ದಿ ಸಿನಿಮಾವು ವಿಶ್ವದಾದ್ಯಂತ 315 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಕೆ ಮಾಡಿದೆ ಎನ್ನಲಾಗಿದೆ. ಸಿನಿಮಾ ಸಕ್ಸಸ್​ ಕಾಣುತ್ತಿರವ ಹಿನ್ನೆಲೆ ತಂಡವು ಹೈದರಾಬಾದ್​ನಲ್ಲಿ ಸಕ್ಸಸ್​ ಮೀಟ್​ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ, ಇದಕ್ಕೆ ನಟಿ ಭಾಗಿಯಾಗೆ ಇಲ್ಲ. ಇದಕ್ಕೆ ವಿವಾದಗಳೇ ಕಾರಣ ಎನ್ನುವ ಚರ್ಚೆ ಜೋರಾಗಿದೆ. 
  ರಾಮ್​ಚರಣ್​ ಅವರು ಕಾರ್ಯಕ್ರಮದಲ್ಲಿ ಪಾತ್ರವರ್ಗವನ್ನು ಉಲ್ಲೇಖಿಸಿ ಧನ್ಯವಾದ ತಿಳಿಸುವಾಗ ಜಾನ್ಹವಿ ಕಪೂರ್​ ಅವರ ಹೆಸರು ಉಲ್ಲೇಖಿಸಿಲ್ಲ ಎನ್ನಲಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಸಕ್ರಿಯರಾಗಿ ತಂಡದ ಜೊತಗಿದ್ದ ಜಾನ್ಹವಿಯವರು ಟೀಕೆಗಳು ಶುರುವಾದ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ, (ಏಜೆನ್ಸೀಸ್)