ಆ ಒಂದು ಕಹಿ ಘಟನೆಯಿಂದ ಮಧ್ಯರಾತ್ರಿ ಪತಿಯನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದರಂತೆ ನಟಿ ಅನಸೂಯಾ ಭಾರದ್ವಾಜ್! Anasuya Bharadwaj  
ಸಿನಿವಾಣಿ

ಆ ಒಂದು ಕಹಿ ಘಟನೆಯಿಂದ ಮಧ್ಯರಾತ್ರಿ ಪತಿಯನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದರಂತೆ ನಟಿ ಅನಸೂಯಾ ಭಾರದ್ವಾಜ್! Anasuya Bharadwaj

ಪ್ರಮುಖ ಮುಖ್ಯಾಂಶಗಳು

  • ನಟಿ ಅನಸೂಯಾ ಭಾರದ್ವಾಜ್ ಅವರ ಸಿನಿ ಪಯಣ ಯಾರಿಗಾದರೂ ರೋಮಾಂಚನ ತರಿಸುವಂತದ್ದು
  • ಕಿರುತೆರೆಯಲ್ಲಿ ಸ್ಟಾರ್ ನಿರೂಪಕಿಯಾಗಿ ಧೂಳೆಬ್ಬಿಸಿ, ಬಳಿಕ ಬೆಳ್ಳಿತೆರೆಯಲ್ಲಿ ಬ್ಯಾಕ್​ ಟು ಬ್ಯಾಕ್​ ಹಿಟ್​ ನೀಡಿದರು
  • ಯಶಸ್ಸಿನ ನಡುವೆ ಒಂದಿಷ್ಟು ಸೋಲಿನ ರುಚಿಯನ್ನೂ ನೋಡಿದ ಅನಸೂಯಾ ಅವರು ವಿವಾದಗಳಿಗೆ ಸಿಲುಕಿದ್ದು ಹೊಸತೇನಲ್ಲ
  • ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಎದುರಿಸಿದ ಕಹಿ ಘಟನೆಗಳನ್ನು ನೆನೆದು ಅನಸೂಯಾ ಭಾವುಕರಾಗಿದ್ದಾರೆ
Anasuya Bharadwaj : ಕಿರುತೆರೆಯಲ್ಲಿ ಸ್ಟಾರ್ ನಿರೂಪಕಿಯಾಗಿ ಧೂಳೆಬ್ಬಿಸಿ, ಬಳಿಕ ಬೆಳ್ಳಿತೆರೆಯಲ್ಲಿ ಬ್ಯಾಕ್-ಟು-ಬ್ಯಾಕ್ ಹಿಟ್ ನೀಡುತ್ತಾ ಸದ್ಯ ಚಿತ್ರರಂಗದ ಮೋಸ್ಟ್ ವಾಂಟೆಡ್ ನಟಿಯಾಗಿ ಹೊರಹೊಮ್ಮಿರುವ ಅನಸೂಯಾ ಭಾರದ್ವಾಜ್ ಅವರ ಸಿನಿ ಪಯಣ ಯಾರಿಗಾದರೂ ರೋಮಾಂಚನ ತರಿಸುವಂತದ್ದು. 'ಕ್ಷಣಂ' ಮತ್ತು 'ಸೊಗ್ಗಾಡೆ ಚಿನ್ನಿನಾಯನ' ಚಿತ್ರಗಳ ಮೂಲಕ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿ, 'ರಂಗಸ್ಥಲಂ' ಸಿನಿಮಾದ ರಂಗಮ್ಮತ್ತ ಕ್ಯಾರೆಕ್ಟರ್ ಮೂಲಕ ಸ್ಟಾರ್‌ಡಮ್ ಅನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ದ ಈ ನಟಿಯ ಬದುಕು ಬರೀ ಯಶಸ್ಸಿನ ಹೂವಿನ ಹಾಸಿಗೆಯಾಗಿರಲಿಲ್ಲ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಎದುರಿಸಿದ ಆಘಾತಕಾರಿ ಹಾಗೂ ಮನಸ್ಸಿಗೆ ನೋವುಂಟು ಮಾಡಿದ ಕಹಿ ಘಟನೆಗಳನ್ನು ನೆನೆದು ಅನಸೂಯಾ ಭಾವುಕರಾಗಿದ್ದಾರೆ.
ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ಅನಸೂಯಾ, ಒಂದರ ಹಿಂದೆ ಒಂದರಂತೆ ಸತತ ಮೂರು ದೊಡ್ಡ ಸಿನಿಮಾಗಳಿಗೆ ತಾವೇ ಫೈನಲ್ ಆಗಿದ್ದರೂ, ಕೊನೆಯ ಕ್ಷಣದಲ್ಲಿ ಯಾವುದೇ ಕಾರಣ ನೀಡದೆ ತಮ್ಮನ್ನು ಆ ಚಿತ್ರಗಳಿಂದ ಕೈಬಿಡಲಾಗಿತ್ತು ಎಂದು ಆ ನೋವನ್ನು ಹಂಚಿಕೊಂಡಿದ್ದಾರೆ.
ಕಾರಣ ಹೇಳದೇ ಸಿನಿಮಾಗಳಿಂದ ಹೊರಹಾಕಿದ್ದಕ್ಕೆ ಆ ರಾತ್ರಿ ನನಗೆ ತುಂಬಾ ನೋವುಂಟಾಗಿತ್ತು. ಏನು ಮಾಡಬೇಕೆಂದು ತೋಚದೆ ಮಧ್ಯರಾತ್ರಿ 2 ಗಂಟೆಗೆ ನನ್ನ ಪತಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದೆ ಎಂದು ತಮ್ಮ ಸಿನಿಮಾ ಪಯಣದ ಆ ಕಹಿ ನೆನಪನ್ನು ನೆನೆದು ಅನಸೂಯಾ ಅವರು ಭಾವುಕರಾಗಿದ್ದಾರೆ.
ಇದೇ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತು ಬರುವ ಟ್ರೋಲ್‌ಗಳು ಮತ್ತು ವದಂತಿಗಳಿಗೆ ತಾವು ಎಂದಿಗೂ ಹೆದರುವುದಿಲ್ಲ ಎಂದು ಅನಸೂಯಾ ಸ್ಪಷ್ಟಪಡಿಸಿದ್ದಾರೆ. ನಾನು ಕೆಲವೊಮ್ಮೆ ಸೀಮಿತ ಪ್ರಮಾಣದಲ್ಲಿ ಮದ್ಯಪಾನ ಮಾಡುತ್ತೇನೆ. ಇದನ್ನೇ ದೊಡ್ಡ ಇಶ್ಯೂ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಭೀಕರವಾಗಿ ಟ್ರೋಲ್ ಮಾಡಲಾಗಿತ್ತು. ಆದರೆ ಈಗ ಇಂತಹ ನೆಗೆಟಿವಿಟಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ರೂಢಿಯಾಗಿದೆ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ನೆಗೆಟಿವ್ ಕಮೆಂಟ್ ಮಾಡುವವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಯಾರು ಏನೇ ಅಂದುಕೊಂಡರೂ, ನಾನು ನನ್ನ ಕೆಲಸವನ್ನು ಮಾಡುತ್ತಾ ಧೈರ್ಯದಿಂದ ಮುನ್ನಡೆಯುತ್ತೇನೆ ಎಂದು ಫೈರ್‌ಬ್ರಾಂಡ್ ಶೈಲಿಯಲ್ಲಿ ನೆಟ್ಟಿಗರಿಗೆ ಸ್ಟ್ರಾಂಗ್ ಕೌಂಟರ್ ಕೊಟ್ಟಿರುವ ಅನಸೂಯಾ ಅವರ ಈ ಮಾತುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸದ್ಯ ಚಿತ್ರರಂಗದಲ್ಲಿ ಫುಲ್ ಬಿಜಿಯಾಗಿರುವ ಅನಸೂಯಾ ಭಾರದ್ವಾಜ್ ಅವರ ಕೈಯಲ್ಲಿ ಕೆಲವು ಪ್ರಮುಖ ಸಿನಿಮಾಗಳಿವೆ. ಮುಂಬರುವ ದೊಡ್ಡ ಬಜೆಟ್‌ನ ಸಾಹಸ ಮತ್ತು ಥ್ರಿಲ್ಲರ್ ಚಿತ್ರವಾದ 'ನಾಗಬಂಧಂ: ದಿ ಸೀಕ್ರೆಟ್ ಟ್ರೆಷರ್' ಸಿನಿಮಾದಲ್ಲಿ ಅವರು 'ಲೀಲಾವತಿ' ಎಂಬ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ಫಸ್ಟ್‌ಲುಕ್ ಪೋಸ್ಟರ್ ಭಾರಿ ಸೌಂಡ್ ಮಾಡಿದೆ. ಇದರೊಂದಿಗೆ, ಅವರ ಬಹುನಿರೀಕ್ಷಿತ ಚಿತ್ರವಾದ 'ಅರಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಲ್ಲದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲಿರುವ 'ಪುಷ್ಪ 3' ಚಿತ್ರದಲ್ಲೂ ಅವರು ತಮ್ಮ ದಕ್ಷಾಯಿಣಿ ಪಾತ್ರವನ್ನು ಮುಂದುವರಿಸಲಿದ್ದು, ತಮಿಳಿನ 'ವುಲ್ಫ್' ನಂತಹ ಬಹುಭಾಷಾ ಪ್ರಾಜೆಕ್ಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ, (ಏಜೆನ್ಸೀಸ್​).