ಬೆಂಗಳೂರು: ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಶನಿವಾರ ರಾತ್ರಿ ನಗರದ ಕಾನ್ರಾಡ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಸಂದರ್ಭದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ಅವರು ನೂತನ ವಧು-ವರರಿಗೆ ಶುಭ ಹಾರೈಸಿದ್ದಾರೆ. ನಿಹಾರಿಕಾ ಮತ್ತು ಅಕ್ಷಯ್ ಮದುವೆ ಡಿಸೆಂಬರ್ ಕೊನೆಯಲ್ಲಿ ನಡೆದಿತ್ತು. ಕುಟುಂಬದವರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಭಾಗವಹಿಸಿದ್ದರು.
ಚಿತ್ರರಂಗ, ರಾಜಕೀಯ ಕ್ಷೇತ್ರ ಸೇರಿ ಹಲವು ಗಣ್ಯರಿಗೆಂದು ಶನಿವಾರ ಆರತಕ್ಷತೆ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್ನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರವಿಚಂದ್ರನ್, ಉಪೇಂದ್ರ, ಸುದೀಪ್, ಪುನೀತ್ ರಾಜಕುಮಾರ್, ಯಶ್, ಶ್ರೀಮುರಳಿ, ಸುಮಲತಾ ಅಂಬರೀಷ್, ಡಾ. ಜಯಮಾಲಾ, ರಾಕ್ಲೈನ್ ವೆಂಕಟೇಶ್, ಮುನಿರತ್ನ, ದೊಡ್ಡಣ್ಣ ಸೇರಿ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಭಾಗವಹಿಸಿ ನಿಹಾರಿಕಾ ಮತ್ತು ಅಕ್ಷಯ್ಗೆ ಶುಭ ಹಾರೈಸಿದ್ದಾರೆ.