ಸಿನಿವಾಣಿ

ಒಡೆದ ಮನಸ್ಸುಗಳಿಗೆ ಅಮೃತ; ಅಪಾರ್ಟ್ಮೆಂಟ್​ನಲ್ಲಿ ಹೀಗೊಂದು ಕಥೆ...

Webdesk - Ravikanth

ಬೆಂಗಳೂರು: ಕಲಾ ಪ್ರಕಾರದ ಸಿನಿಮಾಗಳ ಮೂಲಕ ಗುರುತಿಸಿಕೊಂಡು, ಇದೀಗ ಕಮರ್ಷಿಯಲ್ ಚಿತ್ರಗಳತ್ತ ಹೊರಳಿದ್ದಾರೆ ನಟಿ ಮಾನಸಾ ಜೋಶಿ. ಅಷ್ಟೇ ಅಲ್ಲ ಖಡಕ್ ಪೊಲೀಸ್ ಅವತಾರದಲ್ಲಿಯೂ ಅವರನ್ನು ನೋಡಬಹುದು. ‘ಅಮೃತಾ ಅಪಾರ್ಟ್​ಮೆಂಟ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದಲ್ಲಿ ಎಸಿಪಿ ರತ್ನಪ್ರಭ ಹೆಸರಿನ ಪಾತ್ರದಲ್ಲಿ ನಟಿಸಿರುವ ಮಾನಸಾ ಹೊಸ ಬಗೆಯ ಪಾತ್ರ ನಿಭಾಯಿಸಿದ ಖುಷಿಯಲ್ಲಿದ್ದಾರೆ.

ಈ ಹಿಂದೆ ‘ಲಾಸ್ಟ್ ಬಸ್’ ಮಾಡಿದ್ದ ಚಿತ್ರತಂಡವೇ ‘ಅಮೃತಾ ಅಪಾರ್ಟ್​ವೆುಂಟ್’ಗೂ ಕೆಲಸ ಮಾಡಿದೆ. ಗುರುರಾಜ್ ಕುಲಕರ್ಣಿ (ನಾಡಗೌಡ) ಈ ಚಿತ್ರದ ಮೂಲಕ ನಿರ್ವಣದ ಜತಗೆ ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ತಾರಕ್ ಪೊನ್ನಪ್ಪ ನಾಯಕನಾಗಿ ನಟಿಸಿದರೆ, ಊರ್ವಶಿ ಗೋವರ್ಧನ್ ನಾಯಕಿಯಾಗಿದ್ದಾರೆ. ಬಾಲಾಜಿ ಮನೋಹರ್ ಅವರದ್ದಿಲ್ಲಿ ಆಟೋ ಡ್ರೖೆವರ್ ಪಾತ್ರ. ‘ಸಸ್ಪೆನ್ಸ್ ಶೈಲಿಯ ಸಿನಿಮಾ. ಐಟಿಬಿಟಿ ಕಾಲಘಟ್ಟದಲ್ಲಿ ಬೆಂಗಳೂರಿಗರ ಮನಸ್ಥಿತಿ ಏನಾಗುತ್ತಿದೆ? ಒಡೆದು ಹೋದ ಮನಸ್ಸುಗಳನ್ನ ಒಂದು ಮಾಡುವ ಕೆಲಸವನ್ನು ಈ ಸಿನಿಮಾ ಮೂಲಕ ಸೂಚ್ಯವಾಗಿ ಹೇಳಿದ್ದೇವೆ’ ಎಂಬುದು ನಿರ್ದೇಶಕ ಗುರುರಾಜ್ ಮಾತು. ಇತ್ತೀಚೆಗಷ್ಟೇ ಇದೇ ಚಿತ್ರದ ಮೊದಲ ಪೋಸ್ಟರ್ ಅನ್ನು ಹಿರಿಯ ನಿರ್ವಪಕ ಕೆಸಿಎನ್ ಚಂದ್ರಶೇಖರ್ ಮತ್ತು ನಟಿ-ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಅರ್ಜುನ್ ಅಜಿತ್ ಛಾಯಾಗ್ರಹಣ, ಎಸ್.ಡಿ ಅರವಿಂದ್ ಸಂಗೀತ ಈ ಚಿತ್ರಕ್ಕಿದೆ.