ಸಿನಿವಾಣಿ

ಪ್ರಭಾಸ್​ ಜತೆಗಿನ ತೆಲುಗು ಸಿನಿಮಾಕ್ಕೆ ಅಮಿತಾಬ್​ ಪಡೆದ ಸಂಭಾವನೆ ಎಷ್ಟಿರಬಹುದು?

ಹೈದರಾಬಾದ್​: ಟಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಸಿನಿಮಾಸ್​ ಸದ್ಯ ಭಾರೀ ಸುದ್ದಿಯಲ್ಲಿದೆ. ಬಿಗ್​ ಬಜೆಟ್​ನ ಸಿನಿಮಾ ಘೋಷಣೆ ಮಾಡಿಕೊಂಡು ಸ್ಟಾರ್​ ಕಲಾವಿದರನ್ನೇ ಆಯ್ದುಕೊಂಡು ಸದ್ದು ಮಾಡುತ್ತಿದೆ. ಈಗಾಗಲೇ ಪ್ರಭಾಸ್ ಮತ್ತು ದೀಪಿಕಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ನಿನ್ನೆಯಷ್ಟೇ ಲೆಜಂಡರಿ ಸ್ಟಾರ್ ನಟ ಅಮಿತಾಬ್​ ಎಂಟ್ರಿಕೊಟ್ಟಿದ್ದಾರೆ.

ಹೌದು, ಈ ವಿಚಾರವನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ಘೋಷಿಸಿಕೊಂಡಿದ್ದು, ಪ್ರಮುಖ ಪಾತ್ರವೊಂದರಲ್ಲಿ ಅಮಿತಾಬ್​ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿಕೊಂಡಿದೆ. ಈ ಸಿನಿಮಾ ಶೀರ್ಷಿಕೆ ಏನು, ಶೂಟಿಂಗ್ ಯಾವಾಗ ಎಂಬುದರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಹಲವು ಸಿನಿಮಾಗಳಲ್ಲಿ ಪ್ರಭಾಸ್ ಮತ್ತು ದೀಪಿಕಾ ಬಿಜಿಯಾಗಿದ್ದು, 2021ರಲ್ಲಿಯೇ ಈ ಸಿನಿಮಾದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೀಗ ಚರ್ಚೆಗೆ ಕಾರಣವಾಗಿರುವ ವಿಚಾರ ಏನೆಂದರೆ, ಸಂಭಾವನೆ ವಿಷ್ಯಾ! ಹೌದು, ಅಮಿತಾಬ್​ ಬಚ್ಚನ್​ ಈ ಸಿನಿಮಾಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು? ಅದು ದೀಪಿಕಾಗಿಂತಲೂ ಅಧಿಕವಾ ಅಥವಾ ಕಡಿಮೆ ಇರಲಿದೆಯೇ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ದೀಪಿಕಾಗಿಂತಲೂ ಅಧಿಕ ಸಂಭಾವನೆಯನ್ನು ಅಮಿತಾಬ್​ ಪಡೆದುಕೊಂಡಿದ್ದಾರಂತೆ.

ಈ ಮೊದಲೇ ಸುದ್ದಿ ಹರಿದಾಡಿದಂತೆ 12 ಕೋಟಿ ರೂ. ಸಂಭಾವನೆಯನ್ನು ದೀಪಿಕಾ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ 15 ರಿಂದ 20 ಕೋಟಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅಚ್ಚರಿ ವಿಚಾರ ಏನೆಂದರೆ, ಈ ಚಿತ್ರಕ್ಕಾಗಿ ಪ್ರಭಾಸ್​ 60 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರಂತೆ.

ವೈಜಯಂತಿ ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಲಿದ್ದು, ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಇದೂ ಒಂದಾಗಿದೆ. ಇದೇ ಸಂಸ್ಥೆ 50ನೇ ವಾರ್ಷಿಕೋತ್ಸವದ ಆಚರಣೆಯಲ್ಲಿದ್ದು, ಆ ಸಂಭ್ರಮಕ್ಕೆ ಈ ಸಿನಿಮಾ ಘೋಷಣೆ ಮಾಡಿದ್ದು, ದೀಪಿಕಾ ಬಳಿಕ ಅಮಿತಾಬ್​ ಅವರನ್ನು ಕರೆತಂದಿದೆ. ಮಹಾನಟಿ ಸಿನಿಮಾ ನಿರ್ದೇಶನ ಮಾಡಿದ್ದ ನಿದೇಶಕ ನಾಗ್​ ಅಶ್ವಿನ್​ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್​)