ಅಮಿತ್ ಶಾ ಭೇಟಿಯಾದ ರಾಮಾಯಣ ಸಿನಿಮಾ ತಂಡ 
ಸಿನಿವಾಣಿ

Ramayana ಸಕ್ಸಸ್​ ಬೆನ್ನಲ್ಲೇ ಅಮಿತ್​ ಷಾ ಭೇಟಿಯಾದ ತಂಡ; ಫೋಟೋದಲ್ಲಿ 'ರಾವಣ' ಮಿಸ್ಸಿಂಗ್​, ಯಶ್ ಬಾಸ್ ಎಲ್ಲಿ ಎಂದ ಫ್ಯಾನ್ಸ್!

  • ರಾಮಾಯಣ ಸಕ್ಸಸ್ ಬೆನ್ನಲ್ಲೇ ಸಿನಿಮಾ ತಂಡ ಭೇಟಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಷಾ.

  • ನಟಿ ಸಾಯಿ ಪಲ್ಲವಿ, ರಣಬೀರ್​ ಕಪೂರ್​, ನಿತೀಶ್​ ತಿವಾರಿ ಜೊತೆ ಅಮಿತ್​ ಷಾ ಮಾತುಕತೆ.

  • ಇನ್​ಸ್ಟಾದಲ್ಲಿ ಅಮಿತ್​ ಷಾ ಭೇಟಿ ಪೋಸ್ಟ್, ಯಶ್​​​​​ ಎಲ್ಲಿದ್ದಾರೆ, ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ ಫ್ಯಾನ್ಸ್.

Amit Shah meets Ramayana Team: ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ: ಭಾಗ 1' ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. 21 ದಿನಕ್ಕೆ ವಿಶ್ವಾದ್ಯಂತ 1,755 ಕೋಟಿ ರೂ. ಗಳಿಸಿ ಪುಷ್ಪ 2 ದಾಖಲೆಯನ್ನು ಮುರಿದಿದೆ. ಆ ಬೆನ್ನಲ್ಲೇ ನ.25ರಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಜೊತೆಗೆ ಸಿನಿಮಾ ತಂಡ ಕಾಣಿಸಿಕೊಂಡಿರುವ ಫೋಟೋ ಮತ್ತು ಅಭಿನಂದನೆ ಸಲ್ಲಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೋಸ್ಟ್​ನಲ್ಲಿ ಏನಿದೆ?

ವರ್ಲ್ಡ್​ ಆಫ್​ ರಾಮಾಯಣದ ಇನ್​ಸ್ಟಾಗ್ರಾಮ್​, ಎಕ್ಸ್​​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ದೇಶಾದ್ಯಂತ ಮತ್ತು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾಗೆ ಅಪಾರ ಪ್ರೀತಿ ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ, ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿದ್ದು 'ರಾಮಾಯಣ' ಚಿತ್ರತಂಡಕ್ಕೆ ಸಿಕ್ಕ ಗೌರವವಾಗಿದೆ ಎನ್ನುವ ಶೀರ್ಷಿಕೆ ಕೊಡಲಾಗಿದೆ.

ಯಶ್​​ ಬಾಸ್​ ಎಲ್ಲಿ ಎಂದ ಫ್ಯಾನ್ಸ್

ಇನ್ನು ಅಮಿತ್​ ಷಾ ಅವರನ್ನು ಭೇಟಿಯಾಗಿರುವ ಸಂದರ್ಭದಲ್ಲಿ ನಟ ರಣಬೀರ್​ ಕಪೂರ್​, ನಟಿ ಸಾಯಿ ಪಲ್ಲವಿ ನಿರ್ದೇಶಕ ನಿತೀಶ್​ ತಿವಾರಿ, ನಿರ್ಮಾಪಕರು- ಸಹ ನಿರ್ಮಾಪಕರು ಇದ್ದರು. ಆದರೆ, ರಾವಣನಾಗಿ ಇಂದಿಗೂ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ ಯಶ್​​​ ಕಾಣಿಸಿಕೊಳ್ಳದೆ ಇರುವುದು, ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ.

ಹೌದು, ವರ್ಲ್ಡ್​ ಆಫ್​ ರಾಮಾಯಣ ಹಂಚಿಕೊಂಡಿರುವ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಯಶ್​ ಅವರು ಎಲ್ಲಿ, ರಾಮಾಯಣದಲ್ಲಿ ರಾವಣನಿಲ್ಲದೆ ಸಿನಿಮಾನೆ ಇಲ್ಲ..ಯಶ್​​ ಬಾಸ್ ಎಲ್ಲಿದ್ದಾರೆ. ನೀವು ಅಮಿತ್​ ಷಾ ಅವರನ್ನು ಭೇಟಿಯಾಗಿದ್ದು ಓಕೆ ಆದರೆ, ಯಶ್​ ಎಲ್ಲಿ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಸಿನಿಮಾ ತಂಡವು ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಂಡಿಲ್ಲ. ಜೊತೆಗೆ ಈ ಬಗ್ಗೆ ಯಾವುದೇ ಸ್ಪಷ್ಟನೆಯೂ ಕೊಟ್ಟಿಲ್ಲ.

ರಾಮಾಯಣ ಸಿನಿಮಾ ಬಗ್ಗೆ

ನಿತೇಶ್ ತಿವಾರಿ ನಿರ್ದೇಶನದಲ್ಲಿ ಹಾಗೂ ನಮಿತ್ ಮಲ್ಹೋತ್ರಾ ಮತ್ತು 'ರಾಕಿಂಗ್ ಸ್ಟಾರ್' ಯಶ್ ಅವರ ನಿರ್ಮಾಣದಲ್ಲಿ ಮೂಡಿಬಂದ 'ರಾಮಾಯಣ: ಭಾಗ 1' ನವೆಂಬರ್​ 5ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತ ಹಾಗೂ ವಿದೇಶಗಳಲ್ಲಿ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಭವ್ಯ ದೃಶ್ಯ ವೈಭವ, ಭಾವನಾತ್ಮಕ ಕಥಾಹಂದರ ಹಾಗೂ ಎಆರ್ ರೆಹಮಾನ್ ಮತ್ತು ಹ್ಯಾನ್ಸ್ ಝಿಮ್ಮರ್ ಅವರ ಸಂಗೀತವನ್ನು ಪ್ರೇಕ್ಷಕರು ಕೊಂಡಾಡಿದ್ದಾರೆ.

ಆಸ್ಕರ್​ ರೇಸ್​ನಲ್ಲಿ ರಾಮಾಯಣ

99ನೇ ಅಕಾಡೆಮಿ ಪ್ರಶಸ್ತಿಯ ವಿಶುವಲ್​ ಎಫೆಕ್ಟ್​ ವಿಭಾಗದ ಅಗ್ರ 20 ಸಂಭಾವ್ಯ ಸಿನಿಮಾ ಪಟ್ಟಿಯಲ್ಲಿ ರಾಮಾಯಣ ಸಿನಿಮಾ ಸ್ಥಾನ ಪಡೆದುಕೊಂಡಿದೆ. ದಿ ಒಡಿಸ್ಸಿ, ಡ್ಯೂನ್​ ಪಾರ್ಟ್​3, ಡೂಮ್ಸ್​ ಡೇ ಸಿನಿಮಾದೊಂದಿಗೆ ನಿತೀಶ್​​ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಸ್ಪರ್ಧಿಸಲಿದೆ. 2027 ಮಾರ್ಚ್​ 17ರಂದು ಲಾಸ್​ ಏಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಕಾರ್ಯಕ್ರಮ ನಡೆಯಲಿದೆ, (ಏಜೆನ್ಸೀಸ್).