​Kunal Kamra on Rs 370 Biryani Controversy 
ಸಿನಿವಾಣಿ

'ಸ್ಟಾಂಡ್​ ಅಪ್​ ಕಾಮಿಡಿಯನ್​​ಗಳು ಬ್ಯಾಂಕ್ ಬ್ಯಾಲೆನ್ಸ್ ಮತ್ತು ಪೋಷಕರ ಹಿಂದೆ ಅಡಗಿಕೊಳ್ಳೋದು ಬಿಡಿ': ​Kunal Kamra

ಪ್ರಮುಖ ಮುಖ್ಯಾಂಶಗಳು

  • '370 ರೂಪಾಯಿ ಬಿರಿಯಾನಿ' ವಿವಾದದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮಾರ್ಗಸೂಚಿ ಹಂಚಿಕೊಂಡ ಕುನಾಲ್
  • ಕ್ರೌಡ್ ವರ್ಕ್, ಬ್ಯಾಂಕ್ ಬ್ಯಾಲೆನ್ಸ್ ನೆಪ ಹೇಳಿ ತಮ್ಮ ಕಂಟೆಂಟ್‌ಗಳ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು
  • ​ಪ್ರಣೀತ್ ಮೊರೆ ಶೋನಲ್ಲಿ ಹಿಮಾಂಶು ಜಾಂಗ್ರಾ ಮತ್ತು ಡಾ. ಸೆಜಲ್ ಪವಾರ್ ಅವರ ಆಕ್ಷೇಪಾರ್ಹ ಹೇಳಿಕೆಗಳು ವೈರಲ್
ನವದೆಹಲಿ: ಹಲವು ವಿವಾದದ ಸುಳಿಯಲ್ಲಿ ಸಿಲುಕಿ, ವಿಚಾರಣೆಯನ್ನು ಎದುರಿಸುತ್ತಿರುವ ಸ್ಟಾಂಡ್​ ಅಪ್​ ಕಾಮಿಡಿಯನ್​​​ ಕುನಾಲ್​ ಕಾಮ್ರಾ ಅವರು, ರೂ.370 ಬಿರಿಯಾನಿ ಹಾಗೂ ಮೃತ ಪುರುಷರ ಶವದ ಖಾಸಗಿ ಅಂಗಾಗದ ಬಗ್ಗೆ ಇತ್ತೀಚೆಗೆ ಟ್ರೋಲ್​​ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. 
ಸ್ಟಾಂಡ್​ ಅಪ್​ ಕಾಮೆಡಿಯನ್​​ಗಳು ಕತೆ ಹೇಳುವುದು, ಕ್ರೌಡ್ ವರ್ಕ್, ಕಠಿಣ ಪರಿಶ್ರಮ, ಬ್ಯಾಂಕ್ ಬ್ಯಾಲೆನ್ಸ್ ಮತ್ತು ಪೋಷಕರ ಹಿಂದೆ ಅಡಗಿಕೊಳ್ಳೋದು ಬಿಡಿ ಎಂದು ಬರೆದುಕೊಂಡಿದ್ದಾರೆ. ಕಾಮೆಡಿಯನ್ ಪ್ರಣೀತ್ ಮೊರೆ ಅವರ ಕ್ರೌಡ್ ವರ್ಕ್ ಶೋನ ಕ್ಲಿಪ್‌ಗಳು ವೈರಲ್ ಆದ ಬೆನ್ನಲ್ಲೇ ಕಮ್ರಾ ಈ ನೇರ ಸಂದೇಶವನ್ನು ನೀಡಿದ್ದಾರೆ. 

ಏನಿದು ಘಟನೆ?

ಇತ್ತೀಚೆಗೆ ಕಾಮಿಡಿಯನ್​ ಪ್ರಣೀತ್​ ಮೊರೆ ಅವರ ಶೋನಲ್ಲಿ, ಹಿಮಾಂಶು ಜಾಂಗ್ರಾ ಎಂಬ ವ್ಯಕ್ತಿ ಭಾಗಿಯಾಗಿದ್ದ ಈ ವೇಳೆ ಮಾತನಾಡಿದ ಅವನು, ನಾನು ಹುಡುಗಿಯೊಬ್ಬಳಿಗೆ 370ರೂ.ಗೆ ಬಿರಿಯಾನಿ ಕೊಡಿಸಿದೆ. ಆಕೆ, ಮನೆಗೆ ಡ್ರಾಪ್​ ಮಾಡಲು ಹೇಳಿದಳು ಮನೆಗೆ ಬಿಡುವಾಗ, "ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಹಾಗಾಗಿ ಅದನ್ನು ವಸೂಲಿ ಮಾಡಿಯೇ ತೀರುತ್ತೇನೆ" ಎಂದು ಹೇಳಿ ಆ ರಾತ್ರಿಯ ಘಟನೆಯನ್ನು ಅತ್ಯಂತ ಕೆಟ್ಟದಾಗಿ ವಿವರಿಸಿದ್ದನು. ಇದಕ್ಕೆ ಪ್ರೇಕ್ಷಕರು ನಕ್ಕಿದ್ದರು, ಈ ಘಟನೆ ಟ್ರೋಲ್​ ಆಗುತ್ತಲೇ  ರಾಷ್ಟ್ರೀಯ ಮಹಿಳಾ ಆಯೋಗ  ಆತನ ವಿರುದ್ಧ ಕೇಸ್ ದಾಖಲಿಸಿ, ಸಮನ್ಸ್  ಜಾರಿ ಮಾಡಿತ್ತು.
ಇದೇ ಶೋನಲ್ಲಿ ಡಾ. ಸೆಜಲ್ ಪವಾರ್ ಎಂಬ ವೈದ್ಯೆ ಭಾಗವಹಿಸಿ, ಪುರುಷರ ಶವಗಳ ಗುಪ್ತಾಂಗಗಳ ಗಾತ್ರವನ್ನು ತಾವು ಕಣ್ಣಾರೆ ನೋಡಿ ಹೇಗೆ ತಮಾಷೆ ಮಾಡುತ್ತಿದ್ದೆವು ಎಂದು ಹೇಳಿದ್ದರು.
​ಈ ಎಲ್ಲಾ ವಿವಾದಗಳ ಹಿನ್ನೆಲೆಯಲ್ಲಿ ಕುನಾಲ್ ಕಮ್ರಾ ಅವರು ಕಾಮೆಡಿಯನ್‌ಗಳು ಇನ್ನು ಮುಂದೆಯಾದರೂ ಕೇವಲ 'ಕ್ರೌಡ್ ವರ್ಕ್' ಅಥವಾ 'ಇನ್‌ಸ್ಟಾಗ್ರಾಮ್ ಆಲ್ಗೋರಿದಮ್' ನೆಪವೊಡ್ಡಿ ಇಂತಹ ಅಗ್ಗದ ಹಾಗೂ ಅತಿರೇಕದ ಕಂಟೆಂಟ್‌ಗಳ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದಾರೆ, (ಏಜೆನ್ಸೀಸ್).