AMAZON 
ಸಿನಿವಾಣಿ

ಅಕ್ಷಯ್ 'ರಾಮಸೇತು'ವಿಗೆ ಅಮೆಜಾನ್ ಬಂಡವಾಳ

ಇಷ್ಟು ದಿನ ಸಿದ್ಧವಾದ ಚಿತ್ರಗಳನ್ನು ನಿಗದಿತ ಮೊತ್ತ ಕೊಟ್ಟು ಖರೀದಿಸಿ, ವೇದಿಕೆ ಕಲ್ಪಿಸಿಕೊಡುತ್ತಿದ್ದ ಅಮೆಜಾನ್ ಪ್ರೖೆಮ್ ಬುಧವಾರ ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದೆ.

ಅಕ್ಷಯ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ‘ರಾಮಸೇತು’  ಚಿತ್ರದ ನಿರ್ವಣದಲ್ಲಿ ಅಮೆಜಾನ್ ಪ್ರೖೆಂ ಸಂಸ್ಥೆ ಕೈ ಜೋಡಿಸಿದೆ. ಈ ಮೊದಲು ಅಕ್ಷಯ್ ಒಡೆತನದ ‘ಕೇಪ್ ಆಫ್ ಗುಡ್ ಫಿಲಂಸ್’, ‘ಅಬಂಡನ್ಶಿಯಾ ಎಂಟರ್​ಟೈನ್​ವೆುಂಟ್’ ಮತ್ತು ‘ಲೈಕಾ ಪ್ರೊಡಕ್ಷನ್ಸ್’ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದವು.

ಇದೀಗ ಅಮೆಜಾನ್ ಸಹ ಈ ಚಿತ್ರದ ನಿರ್ವಣದಲ್ಲಿ ಪಾಲುದಾರಿಕೆ ಹೊಂದಿದೆ. ಅಭಿಷೇಕ್ ಶರ್ಮಾ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಈ ಚಿತ್ರ, ಭಾರತ ಮತ್ತು ಶ್ರೀಲಂಕಾ ನಡುವಿನ ಪೌರಾಣಿಕ ಹಿನ್ನೆಲೆಯುಳ್ಳ ರಾಮ ಸೇತುವನ್ನು ಆಧರಿಸಿ ತಯಾರಾಗುತ್ತಿದೆ. ‘ಸತ್ಯವೋ ಮಿಥ್ಯವೋ’ ಎಂಬ ಟ್ಯಾಗ್​ಲೈನ್ ಸಹ ಇಲ್ಲಿರುವುದರಿಂದ, ಏನೆಲ್ಲ ಅಂಶಗಳನ್ನು ಈ ಸಿನಿಮಾ ಮೂಲಕ ಹೇಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದಲ್ಲಿ

ಅಕ್ಷಯ್ಗೆ ಜಾಕ್​ಲೀನ್ ಫರ್ನಾಂಡೀಸ್ ಜೋಡಿಯಾಗಿ ನಟಿಸಲಿದ್ದಾರೆ. ಇದಷ್ಟೇ ಅಲ್ಲದೆ, ಥಿಯೇಟರ್​ನಲ್ಲಿ ಬಿಡುಗಡೆಯಾದ ನಂತರ ‘ರಾಮ್ೇತು’ ಚಿತ್ರ ಅಮೆಜಾನ್ ಪ್ರೖೆಮ್ಲ್ಲಿ ಎಕ್ಸ್ ಕ್ಲೂಸಿವ್ ಸ್ಟ್ರೀಮಿಂಗ್ ಪಾರ್ಟ್​ನರ್ ಆಗಿರಲಿದೆ. ಈ ಚಿತ್ರದ ಮುಹೂರ್ತ ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಡೆಯಲಿದೆ. -ಏಜೆನ್ಸೀಸ್