Allu Arjun Shares Heartwarming Moment With Young Leukaemia Patient 
ಸಿನಿವಾಣಿ

'ಲ್ಯುಕೇಮಿಯಾ' ಪೀಡಿತ ಪುಟ್ಟ ಬಾಲಕಿ ಜೊತೆ Allu Arjun ಮಾತು; ವಿಡಿಯೋ ಕಾಲ್​ನಲ್ಲೇ ಪುಷ್ಪ-2 ಡೈಲಾಗ್​ ಹೇಳಿಸಿ ಮನರಂಜನೆ

ಪ್ರಮುಖ ಮುಖ್ಯಾಂಶಗಳು

  • ಮಾರಕ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿ ಜೊತೆ ಮಾತನಾಡಿದ ಸ್ಟೈಲಿಶ್​ ಸ್ಟಾರ್​
  • ಪುಷ್ಪ ಡೈಲಾಗ್​ ಹೇಳಿಸಿ ನಕ್ಕು ನಗಾಡಿದ ಟಾಲಿವುಡ್​ ಐಕಾನ್​​ ಅಲ್ಲು ಅರ್ಜುನ್​
  • ಹೈದರಾಬಾದ್​ಗೆ ಬಂದು ಅಲ್ಲು ಅರ್ಜುನ್​ರನ್ನು ಭೇಟಿಯಾಗಲು ಮನವಿ
ಹೈದರಾಬಾದ್​: ಇತ್ತೀಚೆಗೆ ಆಂಧ್ರ ಡಿಸಿಎಂ ಮತ್ತು ನಟ ಪವನ್​ ಕಲ್ಯಾಣ್​ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಅಭಿಮಾನಿಯನ್ನು ಭೇಟಿ ಮಾಡಿ, ಮಾತನಾಡಿ ಆತನ ಜೊತೆಗೆ ಸಮಯ ಕಳೆದಿರುವ ಫೋಟೋ, ವಿಡಿಯೋಗಳು ವೈರಲ್ ಆಗಿತ್ತು. ಅವರ ಮಾನವೀಯತೆ ಬಗ್ಗೆ ಫ್ಯಾನ್ಸ್​ ಕೊಂಡಾಡಿದ್ದರು. ಸದ್ಯ ನಟ ಅಲ್ಲು ಅರ್ಜುನ್​ ಅವರು ಸಹ ಲ್ಯುಕೇಮಿಯಾದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿ ಜೊತೆ ಮಾತನಾಡಿ ಮನಗೆದ್ದಿದ್ದಾರೆ.
ಅಪರೂಪದ ಹಾಗೂ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ, ಮೇಕ್​ ಆ ವಿಶ್​ ಫೌಂಡೇಶನ್​ ಕೆಲಸ ಮಾಡುತ್ತಿದೆ, ಅದರಂತೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ ಶ್ರದ್ಧಾಗೆ ಟಾಲಿವುಡ್​ ಸ್ಟಾರ್​ ಅಲ್ಲು ಅರ್ಜುನ್​ರೊಂದಿಗೆ ಮಾತನಾಡುವ ಆಸೆ ಇತ್ತಂತೆ. ಈ ಹಿನ್ನೆಲೆ ಸಂಸ್ಥೆ ನಟನೊಂದಿಗೆ ಸಂಪರ್ಕಿಸಿ, ಪುಟ್ಟ ಬಾಲಕಿಯ ಇಚ್ಛೆಯನ್ನು ಈಡೇರಿಸುವ ಕೆಲಸ ಮಾಡಿದೆ.

ಅಲ್ಲು ಅರ್ಜುನ್ ಟೀಂ ಪೋಸ್ಟ್

ಅಲ್ಲು ಅರ್ಜುನ್​ ಅವರು ಮಗುವಿನೊಂದಿಗೆ ಮಾತನಾಡಿದ ವಿಡಿಯೋವನ್ನು ಎಕ್ಸ್​ನಲ್ಲಿ ಅಲ್ಲು ಅರ್ಜುನ್ ಟೀಂ ಎಂಬ ಖಾತೆಯಿಂದ ಪೋಸ್ಟ್ ಹಂಚಿಕೊಳ್ಳಲಾಗಿದೆ. ಸಿನಿಮಾ ಮೀರಿ ನಗುವನ್ನು ಹರಡುವುದು ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ಅವರ ಕಾರ್ಯ. ಮೇಕ್-ಎ-ವಿಶ್ ಫೌಂಡೇಶನ್ ಮೂಲಕ ಶ್ರದ್ಧಾ ಅವರೊಂದಿಗೆ ಸಂವಹನ ನಡೆಸಿ, ಆ ಚಿಕ್ಕ ಹುಡುಗಿಗೆ ಮರೆಯಲಾಗದ ಕ್ಷಣವನ್ನು ಸೃಷ್ಟಿಸಿದರು. ಇದು ಅವರ ನಿಜವಾದ ಸಹಾನುಭೂತಿಯನ್ನು ಪ್ರತಿಬಿಂಬಿಸುವ ಸನ್ನೆಯಾಗಿದೆ ಎಂದು ಅವರ ಅಭಿಮಾನಿಗಳು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಹಾಯ್​ ಶ್ರದ್ಧಾ ಹೇಗಿದ್ದೀಯಾ ಎಂದು ಕೇಳಿದ ನಟ ಅಲ್ಲು ಅರ್ಜುನ್​​ ಪ್ರಶ್ನೆಗೆ ಆಕೆ ಚೆನ್ನಾಗಿದ್ದೀನಿ ಎನ್ನುತ್ತಾಳೆ. ಪುಷ್ಪಾ ಸಿನಿಮಾದ ಫೈರ್​​ ಡೈಲಾಗ್​ ಕೇಳುತ್ತಾರೆ. ಆಗ ಆಕೆ ಪುಷ್ಪಾ ಹೆಸರು ಕೇಳು ಹೂ ಎಂದುಕೊಂಡ್ರಾ? ಹೂ ಅಲ್ಲ ಪುಷ್ಪಾ ಅಂದ್ರೆ ಫೈರ್​ ಎಂದು ಹೇಳುತ್ತಾಳೆ. ಹೈದರಾಬಾದ್​ಗೆ ಬಂದ್ರೆ ನನ್ನನ್ನು ಭೇಟಿಯಾಗುವಂತೆ ಅಲ್ಲು ಅರ್ಜುನ್​ ಕೇಳಿಕೊಂಡರು. ಆಕೆ ತಾನು ವೈದ್ಯೆಯಾಗಬೇಕು ಎನ್ನುವುದನ್ನು ವ್ಯಕ್ತಪಡಿಸಿದಳು. ನಂತರ ಅಲ್ಲೇ ಇದ್ದ ಆಕೆಯ ಪೋಷಕರ ಬಳಿ ಮಾತನಾಡಿಸಿ, ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಮನವಿ ಮಾಡಿಕೊಂಡರು.

ಅಲ್ಲು ಅರ್ಜುನ್​ಗೆ ಸಮನ್ಸ್​ ಜಾರಿ

ಪುಷ್ಪಾ ಸಿನಿಮಾ ರಿಲೀಸ್​ ವೇಳೆ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಕೋರ್ಟ್​​ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣದಡಿ 23 ಆರೋಪಿಗಳಿಗೆ ಸಮನ್ಸ್ ಜಾರಿಯಾಗಿದೆ. ಪೊಲೀಸರು ನಟನನ್ನು ಆರೋಪಿ ಸಂಖ್ಯೆ 11 (A11) ಎಂದು ಪಟ್ಟಿ ಮಾಡಿದ್ದಾರೆ.
2024ರಲ್ಲಿ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದರು. ಆಕೆಯ ಮತ್ತು 8 ವರ್ಷದ ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ನಂತರ, ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದರು. ಜಾಮೀನಿನ ಮೇಲೆ ಹೊರಬಂದಿದ್ದರು, (ಏಜೆನ್ಸೀಸ್).