ನ್ನೆಸ್ ಪುಟಕ್ಕೆ ಸೇರಿದ ರಾಕಾ ಸಿನಿಮಾ, ಸಂತಸ ಹಂಚಿಕೊಂಡ ನಟ ಅಲ್ಲು ಅರ್ಜುನ್
ಏಕಕಾಲದಲ್ಲಿ ಅತಿ ಹೆಚ್ಚು ಕಲಾವಿದರ ಮೋಷನ್-ಕ್ಯಾಪ್ಚರ್ ಮಾಡಿದ ಹಿನ್ನೆಲೆ ಗಿನ್ನೆಸ್ ದಾಖಲೆ
ಪ್ರಮುಖ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್
Raaka Sets Guinness World Record Before Release: ರಾಜಾ-ರಾಣಿ, ಜವಾನ್, ಮರ್ಸೆಲ್, ಬಿಗಿಲ್ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾವನ್ನು ಕಾಲಿವುಡ್ಗೆ ಕೊಟ್ಟ ನಿರ್ದೇಶಕ ಅಟ್ಲೀ ಅವರು ಸದ್ಯ ವಿಶ್ವದಾದ್ಯಂತ ಸುದ್ದಿಯಲ್ಲಿದ್ದಾರೆ. ಹೌದು, ಇದಕ್ಕೆ ಕಾರಣ ಅವರ ಮುಂದಿನ ಚಿತ್ರ ರಾಕಾ. ನಟ ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ರಾಕಾ ಸಿನಿಮಾವು ಗಿನ್ನೆಸ್ ದಾಖಲೆ ಬರೆದಿದೆ.
ಸನ್ ಪಿಕ್ಚರ್ಸ್ ಸಂಸ್ಥೆಯ ಕಲಾ ನಿಧಿ ಮಾರನ್ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾವು ತಾಂತ್ರಿಕ ಶೇಷ್ಠತೆ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ರಾಕಾ ಚಿತ್ರವು ಏಕಕಾಲದಲ್ಲಿ ಅತಿ ಹೆಚ್ಚು ಕಲಾವಿದರ ಮೋಷನ್-ಕ್ಯಾಪ್ಚರ್ ಮಾಡಿದ ದಾಖಲೆಗಾಗಿ ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದೆ.ಚಿತ್ರದ ಒಂದು ದೃಶ್ಯಕ್ಕಾಗಿ ಒಟ್ಟು 37 ಕಲಾವಿದರನ್ನು ಏಕಕಾಲದಲ್ಲಿ ಮೋಷನ್-ಕ್ಯಾಪ್ಚರ್ ಮಾಡುವ ಮೂಲಕ ಈ ದಾಖಲೆಯನ್ನು ನಿರ್ಮಿಸಲಾಗಿದೆ.ಈ ಪ್ರಕ್ರಿಯೆಯಲ್ಲಿ 4 ವರ್ಷದ ಮಗುವಿನಿಂದ ಹಿಡಿದು, 70 ವರ್ಷದ ವಯೋವೃದ್ಧರವರೆಗಿನ ಕಲಾವಿದರು ಭಾಗಿಯಾಗಿದ್ದರು. ಒಂದೇ ಮೋಷನ್ ಕ್ಯಾಪ್ಚರ್ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರ ಮುಖಭಾವ ಹಾಗೂ ದೈಹಿಕ ಭಾಷೆಯನ್ನು ಚಿತ್ರೀಕರಿಸಲಾಗಿದೆ.
ಸಿನಿಮಾ ತಂಡದಿಂದ ಪೋಸ್ಟ್ಅಲ್ಲು ಅರ್ಜುನ್ ಅವರ ಪೋಸ್ಟ್ನಲ್ಲಿ ಹೀಗಿದೆ. ರಾಕಾ ಸಿನಿಮಾ ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆ. ಒಂದು ಸಿನಿಮಾವು ದಾಖಲೆ ಸೃಷ್ಟಿ ಮಾಡುವುದು ನಿಜಕ್ಕೂ ವಿಶೇಷವಾದದ್ದು. ಮುಂಬರುವ ದಿನಗಳ ಬಗ್ಗೆ ತೀರ ಉತ್ಸುಕನಾಗಿ ಕಾಯುತ್ತಿದ್ದೇನೆ. ಅಟ್ಲೀ ಅವರೇ ಇದು ನಿಜಕ್ಕೂ ವಿಶೇಷ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆಸನ್ ಪಿಕ್ಚರ್ಸ್ ಹೇಳಿದ್ದು ಹೀಗೆರಾಕಾ ಸಿನಿಮಾವು ಇತಿಹಾಸ ಸೃಷ್ಟಿ ಮಾಡಿದೆ. ಭಾರತೀಯ ಸಿನಿಮಾವನ್ನು ವಿಶ್ವವೇದಿಕೆಗೆ ಕೊಂಡೊಯ್ಯುವ ಜಾಗತಿಕ ವಿಜಯವನ್ನು ರಾಕಾ ಸಿನಿಮಾ ಮಾಡಿದೆ. ರಿಯಲ್ ಟೈಂನಲ್ಲಿ ಅತಿ ಹೆಚ್ಚು ಜನರ ಚಲನೆ ಸೆರೆಹಿಡಿದ ಸಲುವಾಗಿ ರಾಕಾ ಸಿನಿಮಾಕ್ಕೆ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಕೊಡಲಾಗಿದೆ ಎಂದು ಬರೆದುಕೊಂಡಿದೆ.
ರಾಕಾ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಲ್ಕು ವಿಭಿನ್ನ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವೈಜ್ಞಾನಿಕ ಕಾಲ್ಪನಿಕ ಆಕ್ಷನ್ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಇದು ಅಲ್ಲು ಅರ್ಜುನ್ ಮತ್ತು ಅಟ್ಲೀ ನಡುವಿನ ಮೊದಲ ಸಿನಿಮಾವಾಗಿದೆ.
ಪುನರ್ಜನ್ಮ, ಕಾಸ್ಮಿಕ್ ಶಕ್ತಿಗಳ ಹಿನ್ನೆಲೆಯುಳ್ಳ ದಿವ್ಯ ಯೋಧನೊಬ್ಬನ ಕತೆ. ಅಲ್ಲು ಅರ್ಜುನ್ ಅವರು ಅಜ್ಜ, ತಂದೆ ಹಾಗೂ ಗಂಡು ಮಕ್ಕಳು ಸೇರಿದಂತೆ ನಾಲ್ಕು ವಿಭಿನ್ನ ಪಾತ್ರದಲ್ಲಿ ಮಿಂಚಲಿದ್ದಾರೆ. ಹಾಲಿವುಡ್ ಅವತಾರ್ ಸಿನಿಮಾದ ತಾಂತ್ರಿಕತೆಗೂ ಮೀರಿ ಅತ್ಯಾಧುನಿಕ ವಿಎಫ್ಎಕ್ಸ್ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ, (ಏಜೆನ್ಸೀಸ್).