ಸಿನಿವಾಣಿ

ರಣಬೀರ್ ಇರುವ ಅಪಾರ್ಟ್​​​ಮೆಂಟ್​ನಲ್ಲಿಯೇ 32 ಕೋಟಿ ರೂ. ಮೊತ್ತದ ಮನೆ ಖರೀದಿಸಿದ ಆಲಿಯಾ!

ಮುಂಬೈ: ಬಾಲಿವುಡ್​ನ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕುರಿತು ಸಾಕಷ್ಟು ವದಂತಿಗಳು ಈಗಾಗಲೇ ಚಾಲ್ತಿಯಲ್ಲಿವೆ. ಇಬ್ಬರೂ ಪ್ರೀತಿಯಲ್ಲಿದ್ದಾರೆ. ಡೇಟಿಂಗ್ ಮಾಡುತ್ತಿದ್ದಾರೆ ಎಂಬೆಲ್ಲ ಸುದ್ದಿಗಳು ಕೇಳಿಬರುತ್ತಿವೆ. ಒಟ್ಟಿಗೆ ಸಿನಿಮಾ ಸಹ ಮಾಡುತ್ತಿರುವುದರಿಂದ ಇಬ್ಬರ ಮೇಲೆ ಬಹುತೇಕರ ಕಣ್ಣು ನೆಟ್ಟಿದೆ. ಈ ನಡುವೆ ಈ ಜೋಡಿಯ ಆಪ್ತತೆ ಬಗ್ಗೆ ಮತ್ತೊಂದು ಪುರಾವೆ ಸಿಕ್ಕಿದೆ. ಅದೇನೆಂದರೆ, ರಣಬೀರ್ ವಾಸವಾಗಿರುವ ಅಪಾರ್ಟ್ಮೆಂಟ್​ನಲ್ಲಿಯೇ ಆಲಿಯಾ ಮನೆ ಖರೀದಿಸಿದ್ದಾರೆ.

ಹೌದು, ಈಗಾಗಲೇ ಮುಂಬೈನ ಜುಹು ಮತ್ತು ಲಂಡನ್​ನಲ್ಲಿರುವ ಕೊವೆಂಟ್​ ಗಾರ್ಡನ್​ನಲ್ಲಿ ಆಲಿಯಾ ಮನೆಹೊಂದಿದ್ದಾರೆ. ಇದೀಗ ಬಾಂದ್ರಾದಲ್ಲಿನ ವಾಸ್ತು ಪಿಲಿ ಹಿಲ್ ಕಾಂಪ್ಲೆಕ್ಸ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಮನೆ ಖರೀದಿ ಮಾಡಿದ್ದಾರೆ. ಆ ಮನೆಯ ಮೊತ್ತ ಬರೋಬ್ಬರಿ 32 ಕೋಟಿ!

ಆಲಿಯಾ ಖರೀದಿ ಮಾಡಿರುವ ಪ್ಲ್ಯಾಟ್​ 5ನೇ ಫ್ಲೋರ್​ನಲ್ಲಿದ್ದರೆ, ರಣಬೀರ್ ಮನೆ 7ನೇ ಫ್ಲೋರ್​ನಲ್ಲಿದೆ. 2460 ಚದರ ಅಡಿ ವಿಸ್ತೀರ್ಣದ ಮನೆ ಇದಾಗಿದೆ. ಇನ್ನೊಂದು ವಿಶೇಷ ಏನೆಂದರೆ, ರಣಬೀರ್ ಕಪೂರ್ ಮನೆಯ ಒಳಾಂಗಣ ವಿನ್ಯಾಸ ಮಾಡಿದ್ದ ಗೌರಿ ಖಾನ್​, ಇದೀಗ ಆಲಿಯಾ ಭಟ್​ ಮನೆಯ ಇಂಟೀರಿಯರ್ ಡಿಸೈನ್ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಈ ಮನೆಯ ಗೃಹ ಪ್ರವೇಶವನ್ನೂ ನೆರವೇರಿಸಲಾಗಿದೆ. (ಏಜೆನ್ಸೀಸ್​)