ಮುಂಬೈ: ಬಾಲಿವುಡ್ ಬೆಡಗಿ ಆಲಿಯಾ ಭಟ್ ಇದೇ ಮಾರ್ಚ್ 15 ಕ್ಕೆ 28 ನೇ ವರ್ಷಕ್ಕೆ ಕಾಲಿಡುತ್ತಿದ್ದಾಳೆ. ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತೆರೆಗೆ ಬರುತ್ತಿರುವ ಬಹುಭಾಷಾ ಸಿನಿಮಾ ಆರ್ಆರ್ಆರ್ನಲ್ಲಿ ಆಲಿಯಾ ಪ್ರಧಾನ ಭೂಮಿಕೆಯಲ್ಲಿ ನಟಿಸುತ್ತಿದ್ದಾಳೆ.
ಈ ಸಿನಿಮಾದಲ್ಲಿ ಆಲಿಯಾ ರಾಮ್ಚರಣ್ ತೇಜ್ ಜೊತೆಯಾಗಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಮಾರ್ಚ್ 15 ರಂದು ಆಲಿಯಾ ಹುಟ್ಟು ಹಬ್ಬ ಇರುವುದರಿಂದ ಆರ್ಆರ್ಆರ್ ಚಿತ್ರತಂಡ ಆಲಿಯಾಗೆ ಸರ್ಪ್ರೈಸ್ ನೀಡಲು ಸಿದ್ದವಾಗಿದೆ.
ಆರ್ಆರ್ಆರ್ ಸಿನಿಮಾದಲ್ಲಿ ಆಲಿಯಾಳ ಪಾತ್ರದ ಫಸ್ಟ್ಲುಕ್ ಮಾರ್ಚ್ 15 ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ಟ್ವಿಟ್ಟರ್ನಲ್ಲಿ ಈ ವಿಷಯ ಪ್ರಕಟಿಸಿರುವ ಚಿತ್ರತಂಡ ಆಲಿಯಾಳ ಜನ್ಮ ದಿನಕ್ಕೆ ಮುಂಚಿತವಾಗಿಯೇ ಖುಷಿಯ ಸಮಾಚಾರ ನೀಡಿದೆ. ಇದಲ್ಲದೇ ಆರ್ಆರ್ಆರ್ ನಿಂದಾಗಿ ಆಲಿಯಾ ತೆಲಗು ಸಹ ಕಲಿಯುತ್ತಿದ್ದಾರಂತೆ.
ಡಿವಿವಿ ಪ್ರೊಡಕ್ಸನ್ನಲ್ಲಿ ಮೂಡಿಬರುತ್ತಿರುವ ಆರ್ಆರ್ಆರ್ ಸಿನಿಮಾ ಒಂದು ಬ್ರಿಟೀಷ್ ಕಾಲದ ಐತಿಹಾಸಿಕ ಕಥಾ ಹಂದರವುಳ್ಳ ಸಿನಿಮಾವಾಗಿದೆ. ಸಿನಿಮಾದಲ್ಲಿ ರಾಮಚರಣ್ ತೇಜ್, ಜೂನಿಯರ್ ಎನ್ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ , ಓಲಿವಿಯಾ ಮೊರಿಸ್, ಆಲಿಸನ್ ದೂಡಿ ಸೇರಿದಂತೆ ಮುಂತಾದ ಖ್ಯಾತ ನಾಮ ನಟರು ನಟಿಸುತ್ತಿದ್ದಾರೆ.