Akshay Kumar (ಚಿತ್ರ X) 
ಸಿನಿವಾಣಿ

ಎಲ್ಲಿಗೆ ಹೋಗ್ತಿದ್ದೀರಾ..! ಅಂತ ಕೇಳಿದ ಕ್ಯಾಮರಾಮೆನ್​​ಗೆ ಅಕ್ಷಯ್ ಕುಮಾರ್ ಕೊಟ್ಟ ಶಾಕ್ ಎಂಥದ್ದು ಗೊತ್ತಾ...? Akshay Kumar

Akshay Kumar: ಬಾಲಿವುಡ್‌ನ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ವೆಲ್ಕಮ್ ಟು ದಿ ಜಂಗಲ್' ಪ್ರಚಾರ ಕಾರ್ಯಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಹಾಗೂ ಪ್ರಮೋಷನ್‌ಗಳ ನಡುವೆ ಸದಾ ಓಡಾಡುತ್ತಿರುವ ನಟ, ಇತ್ತೀಚೆಗೆ ಮುಂಬೈನಿಂದ ದೆಹಲಿಗೆ ಪ್ರಯಾಣ ಬೆಳೆಸುವಾಗ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣುಗಳಿಗೆ ಬಿದ್ದಿದ್ದಾರೆ. ಆದರೆ, ಈ ಬಾರಿ ಎಲ್ಲರ ಗಮನ ಸೆಳೆದದ್ದು ಅವರ ಮುಂದಿನ ಪ್ರಯಾಣದ ಯೋಜನೆಯಲ್ಲ. ಬದಲಿಗೆ ಏರ್​ಪೋರ್ಟ್​ ಆವರಣದಲ್ಲಿ ಕ್ಯಾಮರಾ ಮ್ಯಾನ್​ಗಳೊಂದಿಗೆ ನಡೆದ ಹಾಸ್ಯಭರಿತ ಸಂಭಾಷಣೆಯಿಂದಾಗಿ.

ಪಾಪರಾಜಿ ಜೊತೆ ಅಕ್ಷಯ್ ಕುಮಾರ್ ಮೋಜಿನ ಹಾಸ್ಯ!

ಹೌದು, ಅಕ್ಷಯ್​ ಕುಮಾರ್​ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅಲ್ಲಿ ನೆರದಿದ್ದ ಪಾಪಾರಾಜಿಗಳು ಅವರನ್ನು ಸ್ವಾಗತಿಸಿದರು. ಈ ವೇಳೆ ಒಬ್ಬ ಕ್ಯಾಮರಾಮೆನ್​ ಸರ್​ ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದರು. ಈ ವೇಳೆ ಹಾಸ್ಯಭರಿತದಿಂದ ಉತ್ತರಿಸಿದ ಅವರು ಯಾಕೆ? ನೀವೇನು ನನ್ನ ಚಿಕ್ಕಪ್ಪನಾ ಎಂದು ಕೇಳಿದ್ದಾರೆ. ನಂತರ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಸಲುವಾಗಿ ದೆಹಲಿಗೆ ಪ್ರಯಾಣಿಸುತ್ತಿರುವುದಾಗಿ ಬಹಿರಂಗಪಡಿಸಿದರು.
ಅಕ್ಷಯ್ ಕುಮಾರ್ ನಡೆಸಿದ ಈ ತಮಾಷೆಯ ಸಂಭಾಷಣೆಯು ಸಾಮಾಜಿಕ ಮಾಧ್ಯಮಗಳಲ್ಲಿ ಬೇಗನೆ ವೈರಲ್​ ಆಗಿದ್ದು, ಅನೇಕರು ಅಕ್ಷಯ್​ ಕುಮಾರ್​ ಅವರ ಹಾಸ್ಯ ಸಮಯವನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ. ಬಳಕೆದಾರರೊಬ್ಬರು ಕೊನೆಗೂ ರಾಜು ಮೋಡ್ ಸಕ್ರಿಯಗೊಳಿಸಲಾಗಿದೆ ಎಂದು ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬ ಬಳಕೆದಾರರ ಅಕ್ಷಯ್ ಮತ್ತು ಅವರ ಒನ್-ಲೈನರ್‌ಗಳಿಗೆ ಯಾರೂ ಸಾಟಿಯಿಲ್ಲ" ಎಂದು ಕಾಮೆಂಟ್​ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರದ ಬಗ್ಗೆ

ಅಕ್ಷಯ್ ಕುಮಾರ್ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ವೆಲ್ಕಮ್ ಟು ದಿ ಜಂಗಲ್' ಬಿಡುಗಡೆಗಾಗಿ ಸಖತ್ ಎದುರುನೋಡುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಮತ್ತು ಫಿಲ್ಮ್ ಮೇಕರ್ ಅಹ್ಮದ್ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಕಾಮಿಡಿ ಸರಣಿಯಾದ 'ವೆಲ್ಕಮ್' ಫ್ರಾಂಚೈಸ್‌ನ ಅಧಿಕೃತ ಮೂರನೇ ಕಂತು ಆಗಿದೆ. ಈ ಚಿತ್ರದಲ್ಲಿ ಅಕ್ಷಯ್ ಜೊತೆಗೆ ಸುನೀಲ್ ಶೆಟ್ಟಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ಅರ್ಷದ್ ವಾರ್ಸಿ, ಜಾಕಿ ಶ್ರಾಫ್, ಪರೇಶ್ ರಾವಲ್, ರವೀನಾ ಟಂಡನ್, ಲಾರಾ ದತ್ತ, ಫರೀದಾ ಜಲಾಲ್, ಜಾನಿ ಲಿವರ್, ಶ್ರೇಯಸ್ ತಲ್ಪಾಡೆ, ತುಷಾರ್ ಕಪೂರ್, ರಾಜ್‌ಪಾಲ್ ಯಾದವ್, ಕೃಷ್ಣ ಅಭಿಷೇಕ್, ಕಿಕು ಶಾರದಾ, ದಲೇರ್ ಮೆಹಂದಿ, ಅಫ್ತಾಬ್ ಶಿವದಾಸನಿ ಮುಂತಾದವರು ನಟಿಸಿದ್ದಾರೆ.
ಇದಲ್ಲದೆ, ಅಕ್ಷಯ್ ಜೊತೆ 'ಹೈವಾನ್' ಸಿನಿಮಾ ಕೂಡ ಚಿತ್ರೀಕರಣ ಹಂತದಲ್ಲಿದ್ದು, ಪ್ರಿಯದರ್ಶನ್ ನಿರ್ದೇಶನದ ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಒಂದು ದಶಕಕ್ಕೂ ಹೆಚ್ಚು ಕಾಲದ ನಂತರ ಸೈಫ್​ ಮತ್ತು ಅಕ್ಷಯ್​ ಮತ್ತೆ ಒಂದಾಗಿರುವುದನ್ನು ಸೂಚಿಸುತ್ತದೆ. ಈ ಸಿನಿಮಾ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ (ಏಜೆನ್ಸೀಸ್).