ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸಕ್ರಿಯವಾಗಿರುವ ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ಅಕ್ಷಯ್ ಕುಮಾರ್ ಸಹ ಒಬ್ಬರು. ಪ್ರತಿ ದಿನ ಒಂದಲ್ಲ ಒಂದು ಪೋಸ್ಟ್, ಅಕ್ಷಯ್ ಕುಮಾರ್ ಕಡೆಯಿಂದ ಇದ್ದೇ ಇರುತ್ತದೆ.
ಇದನ್ನೂ ಓದಿ: ಹೊಸ ಮನೆ ಖರೀದಿಗಾಗಿ ಅಜಯ್ ದೇವಗನ್ ಮಾಡಿದ ಸಾಲ ಎಷ್ಟು?
'ಕಿಲಾಡಿಯೋಂ ಕಾ ಕಿಲಾಡಿ' ಚಿತ್ರದಲ್ಲಿ ಖ್ಯಾತ ಡಬ್ಲ್ಯುಡಬ್ಲ್ಯುಎಫ್ ಕುಸ್ತಿಪಟು ಅಂಡರ್ಟೇಕರ್ ಜತೆಗೆ ಕುಸ್ತಿ ಮಾಡಿರಲಿಲ್ಲ ಎಂದು ಅಕ್ಷಯ್ ಕುಮಾರ್ ಶುಕ್ರವಾರವಷ್ಟೇ ಹೇಳಿಕೊಂಡಿದ್ದರು. ಇನ್ನು ಶನಿವಾರ, 'ಧೂಮ್ 4' ಚಿತ್ರದಲ್ಲಿ ತಾನು ನಟಿಸುತ್ತಿರುವ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದು, ಅದೊಂದು ಫೇಕ್ ನ್ಯೂಸ್ ಎಂದು ಸ್ಪಷ್ಟಪಡಿಸಿದ್ದರು.
ಈಗ ಮೂರನೇ ದಿನವಾದ ಭಾನುವಾರ ಸಹ ಅಕ್ಷಯ್ ಕುಮಾರ್ ಸತತವಾಗಿ ಟ್ವೀಟ್ ಮಾಡಿದ್ದರಾರೆ. ಈ ಬಾರಿ ಯಾವುದೋ ವಿಷಯವನ್ನು ಸ್ಪಷ್ಟಪಡಿಸುವುದಕ್ಕೋ ಅಥವಾ ನಿರಾಕರಿಸುವುದಕ್ಕೋ ಅಲ್ಲ, ಫಾದರ್ಸ್ ಡೇ ಕುರಿತಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ: ಅಪ್ಪನ ನೆನೆದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು …
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನನ್ನಪ್ಪ ನನಗೆ ಪ್ರೀತಿ ಮತ್ತು ಜ್ನಾನದ ಸಮುದ್ರವನ್ನೇ ಕೊಟ್ಟಿದ್ದಾರೆ. ಆ ಸಮುದ್ರದಿಂದ ಕೆಲವು ಹನಿಗಳನ್ನು ನನ್ನ ಮಕ್ಕಳಿಗೆ ಕೊಟ್ಟರೂ ಸಾಕು, ನಾನು ಬದುಕಿದ್ದು ಸಾರ್ಥಕ' ಎಂದು ಎಮೋಷನಲ್ ಆಗಿ ಅಕ್ಷಯ್ ಬರೆದುಕೊಂಡಿದ್ದಾರೆ. ಅಕ್ಷಯ್ ಅವರ ಈ ಟ್ವೀಟ್ಗೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ.