ಸಿನಿವಾಣಿ

ಮನೆಯಲ್ಲಿದ್ದುಕೊಂಡೇ ರಂಜಿಸಲಿದ್ದಾರೆ ಬಾಲಿವುಡ್​ ಸ್ಟಾರ್ಸ್​; ಸ್ಫೂತಿರ್ದಾಯಕ ಕಾನ್ಸೆಪ್ಟ್​ ಹೊತ್ತು ಬರಲಿದ್ದಾರೆ ಅಕ್ಷಯ್​ಕುಮಾರ್​ ಆ್ಯಂಡ್​ ಟೀಮ್​..

ಕರೊನಾದಿಂದ ದೇಶದ ಜನತೆ ಮನೆಯಲ್ಲೇ ಕಾಲಕಳೆಯುತ್ತಿದೆ. ಸರ್ಕಾರ, ಪೊಲೀಸ್ ಇಲಾಖೆ, ಸಿನಿಮಾ ಮಂದಿ ಸೇರಿ ಹಲವರು ಜಾಗೃತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಗ್​ ಬಿ ಅಮಿತಾಬ್​ ಬಚ್ಚನ್​, ರಜನಿಕಾಂತ್​ ಕರೊನಾ ಕುರಿತ ಕಿರುಚಿತ್ರ ಮಾಡುತ್ತಿದ್ದಾರೆ. ಅದು ಇಂದು ರಾತ್ರಿ 9ಕ್ಕೆ ಸೋನಿ ಪಿಕ್ಚರ್ಸ್​ನಲ್ಲಿ ಪ್ರಸಾರವಾಗಲಿದೆ. ಈಗ ಅದೇ ಹಾದಿಯಲ್ಲಿ ಅಕ್ಷಯ್​ ಕುಮಾರ್​ ಸೇರಿ ಹತ್ತು ಹಲವು ಬಾಲಿವುಡ್​ ಸ್ಟಾರ್​ಗಳು ಒಟ್ಟಿಗೆ ಕೈ ಜೋಡಿಸಿ ಕರೊನಾ ಜಾಗೃತಿ ಮತ್ತು ಸ್ಫೂತಿರ್ದಾಯಕ ಸಂದೇಶವನ್ನು ಹಾಡಿನ ಮೂಲಕ ಹೊತ್ತು ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಕ್ಷಯ್​ ಕುಮಾರ್​, ವಿಕ್ಕಿ ಕೌಶಲ್​, ಟೈಗರ್​ ಶ್ರಾಫ್​, ತಾಪ್ಸೀ ಪನ್ನು, ಭೂಮಿ ಪಡ್ನೇಕರ್​, ಕಾರ್ತಿಕ್​ ಆರ್ಯನ್​, ಕೃತಿ ಸನೂನ್​, ಆಯುಷ್ಮಾನ್​ ಖುರಾನಾ, ಕಿಯಾರಾ ಅಡ್ವಾನಿ, ರಾಜ್​ಕುಮಾರ್​ ರಾವ್​, ಸಿದ್ಧಾರ್ಥ್​ ಮಲ್ಹೋತ್ರಾ, ಅನನ್ಯ ಪಾಂಡೆ ಸೇರಿ ಇನ್ನೂ ಹಲವರು "ಮುಸ್ಕೂರಾಯೇ ಇಂಡಿಯಾ' ಶೀಷಿರ್ಕೆಯಲ್ಲಿ ಹಾಡು ಮೂಡಿಬರಲಿದ್ದು, ವಿಶಾಲ್​ ಮಿಶ್ರಾ ಹಾಡನ್ನು ಕಂಪೋಸ್​ ಮಾಡಿ ಧ್ವನಿ ಸಹ ನೀಡಿದ್ದಾರೆ. ಈ ಎಲ್ಲ ಕಲಾವಿದರು ಮನೆಯಲ್ಲಿದ್ದುಕೊಂಡೆ ಹಾಡಿಗೆ ತಕ್ಕಂತೆ ವಿಡಿಯೋ ಮಾಡಿ ಕಳುಹಿಸಿದ್ದು, ಇಂದೇ ಯೂಟ್ಯೂಬ್​ನಲ್ಲಿ ರಿಲೀಸ್​ ಆಗಲಿದೆ. ಅಂದಹಾಗೆ ಜಾಕಿ ಬಗ್ನಾನಿ ಈ ಹಾಡಿನ ಸೂತ್ರಧಾರ. (ಏಜೆನ್ಸೀಸ್​)