Gaurav Khanna ಚಿತ್ರ Instagram
Gaurav Khanna: ಟೆಲಿವಿಷನ್ ಲೋಕದ ಜನಪ್ರಿಯ ಜೋಡಿ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕಳೆದ ಕೆಲವು ಸಮಯದಿಂದ ಇವರ ವಿಚ್ಛೇದನದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ಹೊಸದೊಂದು ನಾಟಕೀಯ ತಿರುವು ಸಿಕ್ಕಿದ್ದು, ಆಕಾಂಕ್ಷಾ ಅವರ ತಂದೆ ಮಾಡಿದ್ದಾರೆ ಎನ್ನಲಾದ ವೈರಲ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ.
ವೈರಲ್ ಪೋಸ್ಟ್ನಲ್ಲೇನಿದೆ?
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಆಕಾಂಕ್ಷಾ ಚಮೋಲಾ ಅವರ ತಂದೆಯದ್ದೇ ಎನ್ನಲಾದ ಪೋಸ್ಟ್ನಲ್ಲಿ, ಕಳೆದ ಒಂದು ವರ್ಷದಿಂದ ಆಕಾಂಕ್ಷಾ ಮುಂಬೈನ ಅಂಧೇರಿಯಲ್ಲಿರುವ ನನ್ನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಧಿಕೃತವಾಗಿ ಬೇರ್ಪಡುವವರೆಗೆ ಮಾತ್ರ ಇಬ್ಬರೂ ವೃತ್ತಿಪರವಾಗಿ ಬೆಂಬಲಿಸಲಿದ್ದಾರೆ. ಗೌರವ್ ಖನ್ನಾ ಒಳ್ಳೆಯ ನಟನಾಗಿದ್ದರೂ, ಆಕಾಂಕ್ಷಾಗೆ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡಲು ವಿಫಲರಾಗಿದ್ದಾರೆ.
ಗೌರವ್ ಮಗುವಿನ ವಿಷಯದಲ್ಲಿ ನಂಬಿಕೆ ದ್ರೋಹ ಮಾಡಿ ಜನರ ಸಹಾನುಭೂತಿ ಗಳಿಸಲು ಯತ್ನಿಸುತ್ತಿದ್ದಾರೆ. ಜೊತೆಗೆ ಮಾಧ್ಯಮಗಳೊಂದಿಗೆ ಆಕಾಂಕ್ಷ ಅವರನ್ನು ಖಳನಾಯಕಿಯನ್ನಾಗಿ ಬಿಂಬಿಸಲು ಸಂಚು ರೂಪಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಆದಾಗ್ಯೂ, ಆ ಖಾತೆ ನಿಜವಾಗಿಯೂ ಆಕಾಂಕ್ಷಾ ಅವರ ತಂದೆಗೆ ಸೇರಿದೆಯೇ ಎಂಬುದರ ಕುರಿತು ಈವರೆಗೂ ಯಾವುದೇ ದೃಢೀಕರಣವಿಲ್ಲ.
ವಿಚ್ಛೇದನ ದೃಢೀಕರಣ
ನಟಿ ಆಕಾಂಕ್ಷಾ ಚಮೋಲಾ ರಿಯಾಲಿಟಿ ಶೋ 'ಲಾಕ್ ಅಪ್ 2' ನಲ್ಲಿ ಕಾಣಿಸಿಕೊಂಡಾಗ ತಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಗೌರವ್ ಖನ್ನಾ ಮತ್ತು ನಾನು ವಿಚ್ಛೇದನ ಪಡೆಯುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಜನರ ಗಮನಕ್ಕೆ ಇದು ಬಂದಿರಲಿಲ್ಲ. ಇದು ಇಬ್ಬರೂ ಒಟ್ಟಾಗಿ ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿದ್ದು, ಕಳೆದ ಒಂದು ವರ್ಷದಿಂದಲೇ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾಗಿ ಎಂದು ಬಹಿರಂಗಪಡಿಸಿದ್ದಾರೆ. .
ಮದುವೆ ಮುರಿದುಬಿದ್ದ ಬಗ್ಗೆ ಮಾತನಾಡಿದ ಆಕಾಂಕ್ಷಾ, ತಮ್ಮ ನಡುವೆ ಯಾವುದೇ ದ್ವೇಷವಿಲ್ಲ. ನಾವಿಬ್ಬರು ಪರಸ್ಪರ ಮಾತನಾಡುತ್ತೇವೆ. ಆದರೆ ಜೊತೆಯಾಗಿ ಜೀವನ ನಡೆಸಲು ನಾವಿಬ್ಬರು ಸೂಕ್ತವಲ್ಲ ಎಂದು ನನಗೆ ಅನಿಸುತ್ತದೆ. ಏಕೆಂದರೆ, ಇಬ್ಬರು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ ಎಂದು ಅವರು ಹೇಳಿದರು.
ಆಕಾಂಕ್ಷಾ ಸುಚಿಸುವಂತೆ, ಬಿಗ್ಬಾಸ್ 19 ರಲ್ಲಿ ಗೌರವ್ ಭಾಗವಹಿಸಿದ ನಂತರ ಈ ಎಲ್ಲಾ ಸಮಸ್ಯೆಗಳು ಹುಟ್ಟುಕೊಂಡವು. ಈ ವೇಳೆ ಪೋಷಕರು ಇಬ್ಬರಿಗೂ ಸ್ವಲ್ಪ ಸಮಯದವರೆಗೆ ಪ್ರತ್ಯೇಕವಾಗಿರಲು ಸೂಚಿಸಿದರು. ಇದರಿಂದ ನಿಮ್ಮಿಬ್ಬರ ಪ್ರಾಮುಖ್ಯತೆ ತಿಳಿದುಕೊಳ್ಳುತ್ತೀರಿ ಎಂದಿದ್ದರು.
ರಿಯಾಲಿಟಿ ಶೋನಲ್ಲಿ ವಿಚ್ಛೇದನದ ಬಗ್ಗೆ ಮಾತನಾಡುತ್ತಾ ಭಾವುಕರಾದ ಆಕಾಂಕ್ಷಾ, ಈ ರಹಸ್ಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ತಮಗೆ ಅತ್ಯಂತ ವಿನಾಶಕಾರಿಯಾಗಿತ್ತು ಮತ್ತು ಸುರಕ್ಷಿತವಾಗಿರುವುದು ಸುಲಭವಾಗಿರಲಿಲ್ಲ ಎಂದು ಅವರು ಕಣ್ಣೀರು ಹಾಕಿದರು. ಈ ನಿರ್ಧಾರವು ಜೀವನವನ್ನೇ ಬದಲಾಯಿಸುವಂತಹದ್ದಾಗಿದ್ದು, ತೀವ್ರ ದುಃಖಿತರಾಗಿದ್ದ ನಟಿಯನ್ನು ಸಹ-ಸ್ಪರ್ಧಿಗಳು ಸಮಾಧಾನಪಡಿಸಲು ಪ್ರಯತ್ನಿಸಿದರು (ಏಜೆನ್ಸೀಸ್).