ಹೈದರಾಬಾದ್: ಸಿನಿ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಇತ್ತೀಚೆಗೆ ಮೇಲಿಂದ ಮೇಲೆ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡುತ್ತಿದೆ.
ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ನಟಿಸಿದ್ದಾರೆ. ಇವರ ಜನ್ಮ ದಿನ ಏಪ್ರೀಲ್ 3 ರಂದು. ಹೀಗಾಗಿ ಅಜಯ್ ಜನ್ಮದಿನಕ್ಕೆ ಒಂದು ದಿನ ಮುಂಚಿತವಾಗಿ ಆರ್ಆರ್ಆರ್ ಚಿತ್ರತಂಡ ಬಿಗ್ ಗಿಫ್ಟ್ ಕೊಟ್ಟಿದೆ.
ಯುಟ್ಯೂಬ್ನಲ್ಲಿ ಅಜಯ್ ದೇವಗನ್ ಇರುವ ಮೋಷನ್ ಪೋಸ್ಟರ್ನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಅಜಯ್ ದೇವಗನ್ ಅವರ ಪಾತ್ರದ ಹೆಸರನ್ನು ರಿವಿಲ್ ಮಾಡಲಾಗಿಲ್ಲ. ಆದರೆ ಅಜಯ್ ದೇವಗನ್ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಸಕತ್ ಆಗಿ ಮಿಂಚಿದ್ದಾರೆ.
ಡಿವಿವಿ ಪ್ರೊಡಕ್ಸನ್ನಲ್ಲಿ ಮೂಡಿಬರುತ್ತಿರುವ ಆರ್ಆರ್ಆರ್ ಸಿನಿಮಾ ಒಂದು ಬ್ರಿಟೀಷ್ ಕಾಲದ ಐತಿಹಾಸಿಕ ಕಥಾ ಹಂದರವುಳ್ಳ ಸಿನಿಮಾವಾಗಿದೆ. ಸಿನಿಮಾದಲ್ಲಿ ರಾಮಚರಣ್ ತೇಜ್, ಜೂನಿಯರ್ ಎನ್ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ , ಓಲಿವಿಯಾ ಮೊರಿಸ್, ಆಲಿಸನ್ ದೂಡಿ ಸೇರಿದಂತೆ ಮುಂತಾದ ಖ್ಯಾತ ನಾಮ ನಟರು ನಟಿಸುತ್ತಿದ್ದಾರೆ.