Aishwarya Rai stunt double recalls Raavan cinema climax 
ಸಿನಿವಾಣಿ

ಪ್ರಾಣ ಉಳಸಿಕೊಳ್ಳಲು 30 ನಿಮಿಷ ಹೋರಾಟ ನಡೆಸಿದ್ದೆ; ರಾವಣನ್ ಸಿನಿಮಾದ ಶೂಟಿಂಗ್​ ಬಗ್ಗೆ ಸ್ಟಂಟ್​​ ಡಬಲ್ ಆರ್ಟಿಸ್ಟ್ ಹೇಳಿದ್ದಿಷ್ಟು..Ravanan

ಪ್ರಮುಖ ಮುಖ್ಯಾಂಶಗಳು

  • ರಾವಣನ್ ಸಿನಿಮಾದ ಸಾಹಸಮಯ ದೃಶ್ಯದ ಬಗ್ಗೆ ಸ್ಟಂಟ್ ಡಬಲ್​ ಆರ್ಟಿಸ್ಟ್​​ ಮಾತು
  • ಅಂದು ನಾನು ನನ್ನ ಶಕ್ತಿಯನ್ನು ನಂಬಿ ಮೂವತ್ತು ನಿಮಿಷ ಶಾಂತ ರೂಪದಲ್ಲಿದ್ದೆ ಎಂದು ಪೋಸ್ಟ್​​
  • ಸಾಹಸಮಯ ದೃಶ್ಯ ಶೂಟಿಂಗ್​ ವೇಲೆ ಬೆಟ್ಟದ ಮಧ್ಯೆ ತಾತ್ರಿಂಕ ದೋಷದಿಂದ ಸಿಕ್ಕಿ ಹಾಕಿಕೊಂಡ ಬಗ್ಗೆ ಮಾತು.
Aishwarya Rai stunt double recalls Raavan cinema climax: ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ರಾವಣನ್ ಹಾಗೂ ರಾವಣ್​ ಸಿನಿಮಾ 2010ರಲ್ಲಿ  ಹಿಂದಿ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗಿತ್ತು. ಈ ಸಿನಿಮಾದ ಹಾಡುಗಳು ಹಾಗೂ ವಿಸ್ಮಯಾಕಾರಿ ದೃಶ್ಯಗಳು ಇಂದಿಗೂ  ಬಾಯ್ಬಿಟ್ಟು ನೋಡುವಂತೆ ಮಾಡುತ್ತದೆ. ಅದರಲ್ಲಿನ  ಕೊನೆಯ ಸಾಹಸಮಯ ದೃಶ್ಯದ ಬಗ್ಗೆ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅದೇನು, ಇಷ್ಟೆಲ್ಲ ಚರ್ಚೆಗೆ ಕಾರಣವಾದ ಆ  ಚಿತ್ರೀಕರಣದಲ್ಲೇನಿದೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.
ಸಿನಿಮಾದ ಕಥಾ ನಾಯಕಿ ರಾಗಿಣಿ(ಐಶ್ವರ್ಯಾ ರೈ)ಯನ್ನು ವೀರ (ವಿಕ್ರಂ) ಎನ್ನುವ ಬುಡಕಟ್ಟು ಸಮುದಾಯದ ಯುವಕ ಅಪಹರಿಸಿರುತ್ತಾನೆ. ಕೊನೇ ದೃಶ್ಯದಲ್ಲಿ ರಾಗಿಣಿ ಪತಿ ಮತ್ತು ಪೊಲೀಸ್ ಅಧಿಕಾರಿ ಆತನನ್ನು ಕೊಲ್ಲುವಾಗ ಇದನ್ನು ಧಿಕ್ಕರಿಸುವ ನಾಯಕಿ ಹೇಗೆ ಕಂದಕಕ್ಕೆ ಬೀಳುತ್ತಾಳೆ. ಈ ಸಾಹಸಮಯ  ದೃಶ್ಯದಿಂದ ಪ್ರಾಣಕ್ಕೆ ಕುತ್ತು ಬಂದಿದ್ದರ ಬಗ್ಗೆ ಸಿನಿಮಾದಲ್ಲಿ ಸ್ಟಂಟ್​ ಡಬಲ್ ಆರ್ಟಿಸ್ಟ್​ ಆಗಿ ಕಾರ್ಯನಿರ್ವಹಿಸಿದ್ದ ಸನೋಬರ್ ಪರ್ದಿವಾಲಾ ಮಾಹಿತಿ ಹಂಚಿಕೊಂಡಿದ್ದಾರೆ. 

ಏನಿದೆ ವಿಡಿಯೋದಲ್ಲಿ? 

ಇನ್​ಸ್ಟಾಗ್ರಾಮ್​ ಮತ್ತು ಯೂಟ್ಯೂಬ್​ ಸೇರಿದಂತೆ ಸೋಶಿಯಲ್​ ಮೀಡಿಯಾದ ಖಾತೆಯಲ್ಲಿ ಬಿಹೈಂಡ್​ ದಿ ಸೀನ್​ ಎಂದು ವಿಡಿಯೋ ಹಂಚಿಕೊಂಡಿರುವ ಸನೋಬರ್ ಪರ್ದಿವಾಲಾ, ಇದಕ್ಕೆ ಶೀರ್ಷಿಕೆ ಬರೆದುಕೊಂಡಿರುವುದು ಹೀಗೆ, 150 ಅಡಿ, 3.5 ಸೆಂಕೆಂಡು ನನ್ನ ಜೀವನದಲ್ಲೇ ಮರೆಯಲಾಗದ ಘಟನೆ ಇದು. ರಾವಣನ್ ಸಿನಿಮಾ ಶೂಟಿಂಗ್​ ವೇಳೆ ಅನಿರೀಕ್ಷಿತ ತಾಂತ್ರಿಕ ಸಮಸ್ಯೆಗಳಿಂದಾಗಿ ನಾನು 30 ನಿಮಿಷಗಳ ಕಾಲ ಬಂಡೆಯ ಮಧ್ಯೆ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತ್ತು. 

ಹೀಗೆ ಮಾಡಿ ಸಾಕು..

ಸಾಹಸಮಯ ಕೆಲಸವನ್ನು ಮಾಡುವಾಗ ನಾವು ಕಲಿಯಬೇಕಾದ ಪಾಠ ಎಂದರೆ, ನಮಗೆ ಕೊಟ್ಟಷ್ಟು ಕೆಲಸವನ್ನು ಮಾಡುವುದಲ್ಲ. ಅನಿರೀಕ್ಷಿತ ಘಟನೆಗಳು ಎದುರಾದಾಗ ಅದನ್ನು ನಿರ್ವಹಿಸುವುದು ಹೇಗೆ ಎನ್ನುವುದು ಮುಖ್ಯವಾಗಿ ಕಲಿಯಬೇಕಾದ ಒಂದು ವಿಧಾನ. ಅಕಸ್ಮಾತ್​ ನಿಮಗೆ ಇಂತಹ  ಪ್ರಕರಣ ಎದುರಾದರೆ ಶಾಂತವಾಗಿ ಇರಿ.  ಉಸಿರಾಟ ನಿಯಂತ್ರಿಸಿ, ಸುರಕ್ಷತಾ ವ್ಯವಸ್ಥೆ ಬಗ್ಗೆ ನಂಬಿಕೆ ಇಡಿ, ಶಕ್ತಿಯ ಮೇಲೆ ನಂಬಿಕೆ ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ. 
ಅಂದು ನಾನು ಮಾಡಿದ್ದು ಇದನ್ನೇ, ಜಲಪಾತದ ಪಕ್ಕದಲ್ಲೇ ಮಧ್ಯ ತೂಗಾಡುತ್ತಿದ್ದ ನಾನು, ಅಂದು ಮಾಡಿದ್ದು ಅದನ್ನೇ. ಶಾಂತವಾಗಿದ್ದೆ,. ಸುರಕ್ಷತಾ ವ್ಯವಸ್ಥೆಯನ್ನು  ನಂಬಿದ್ದೆ. ಜೊತೆಗೆ, ಜಗತ್ತಿನಲ್ಲಿ ಕೆಲವೇ ಕೆಲವು ಜನ ನೋಡಬಹುದಾದ ಕಣಿವೆಯನ್ನು ನಾನು ಅಂದು ಕಣ್ತುಂಬಿಕೊಂಡೆ  ಎಂದು ಸನೋಬರ್ ಪರ್ದಿವಾಲಾ ಹೇಳಿದರು, (ಏಜೆನ್ಸೀಸ್).