ಸಿನಿವಾಣಿ

ಕಾನ್​ ಚಿತ್ರೋತ್ಸವದಲ್ಲಿ ವಿಶೇಷ ಗಮನ ಸೆಳೆದ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ: ಇಲ್ಲಿವೆ ಚಿತ್ರಗಳು

ಫ್ರಾನ್ಸ್​: ಪ್ರತಿಷ್ಟಿತ ಕಾನ್​ ಚಿತ್ರೋತ್ಸವ ಪ್ರಾರಂಭವಾಗಿದ್ದು, ಈ ಭಾರಿ ಭಾರತೀಯ ಕಲಾವಿದರು ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. ಮತ್ತೊಂದೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರನ್ನು ವಿಶೇಷ ಉಡುಪಿನಲ್ಲಿ ಕಣ್ತುಂಬಿಕೊಳ್ಳುತ್ತಾರೆ.

ಕಾನ್​ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ನಟಿಯರ ಉಡುಪುಗಳು ಕೆಲವು ಬಾರಿ ಮೆಚ್ಚುಗೆ ವ್ಯಕ್ತವಾದರೆ, ಮತ್ತೆ ಕೆಲವು ಬಾರಿ ಇಷ್ಟವಾಗುವುದಿಲ್ಲ. ಈ ಸಾಲಿನಲ್ಲಿ ಹಲವು ನಟಿಯರು ಸೇರಿಕೊಂಡಿದ್ದಾರೆ. ಈ ಹಿಂದೆ  ಪಾಲ್ಗೊಂಡ ಕಾನ್ ಉತ್ಸವದಲ್ಲಿ ಬಾಲಿವುಡ್​ ತಾರೆ ಐಶ್ವರ್ಯಾ ರೈ ಅವರ ಉಡುಗೆ ಕೂಡ ಕೆಲವೊಮ್ಮೆ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ.

ಈ ಹಿಂದೆ ನೇರಳೆ ಬಣ್ಣದ ಲಿಪ್​ಸ್ಟಿಕ್​ ಹಂಚಿಕೊಂಡಿದ್ದ ಐಶ್ವರ್ಯಾ ಅವರ ಮೇಕಪ್​ ಬಗ್ಗೆ ಭಾರೀ ಟ್ರೋಲ್​ ಮಾಡಲಾಗಿತ್ತು. ಆದರೆ ಈ ಬಾರಿಯ ಕಾನ್​ ಚಿತ್ರೋತ್ಸವದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ವಿಶೇಷ ಉಡುಪಿನಲ್ಲಿ ಭಾರೀ ಗಮನವನ್ನೇ ಸೆಳೆದಿದ್ದಾರೆ.

ಅವರ ಉಡುಗೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಐಶ್ವರ್ಯಾ ರೈ ಅವರ ಉಡುಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಟ್ವಿಟರ್​ ನಲ್ಲಿ ಮೆಚ್ಚುಗೆಯ ಕಾಮೆಂಟ್ಸ್​ ಹರಿದುಬರುತ್ತಿದೆ. ಹೂವುಗಳಿಂದ ತುಂಬಿದ ಕಪ್ಪು ಬಣ್ಣದ ಗೌನ್​ ಧರಿಸಿರುವ ಐಶ್ವರ್ಯಾ ರೈ ಉಡುಗೆಯ ಹೂ ಬೊಕ್ಕೆ ಭಾರೀ ಆಕರ್ಷಿಸಿಸಿದೆ. ಇನ್ನು ತೀರ್ಪುಗಾರರಿಂದಲೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)