ಸಿನಿವಾಣಿ

ಕತ್ರಿನಾ ನಂತ್ರ Aishwarya Raiಗೆ ಬಾಡಿ ಶೇಮಿಂಗ್​ ಕಾಟ; ಸ್ಲಿಮ್​ ಆಗಿ ಕಾಣಲು ಶಿಲ್ಪಾ ಶೆಟ್ಟಿಯಂತೆ ಯೋಗ ಮಾಡಿ ಎಂದ ಟ್ರೋಲರ್ಸ್

  • ಕತ್ರಿನಾ ನಂತ್ರ ಐಶ್ವರ್ಯಾ ರೈ ಅವರ ದೇಹದ ಬಗ್ಗೆ ಟ್ರೋಲ್​​

  • ಪ್ಯಾರಿಸ್​ ಫ್ಯಾಷನ್​ನಲ್ಲಿ ಭಾಗಿಯಾಗಿದ್ದ ಶಿಲ್ಪಾ ಶೆಟ್ಟಿ ಫೋಟೋಗೆ ಹೋಲಿಕೆ

  • ಶಿಲ್ಪಾ ಶೆಟ್ಟಿಯಂತೆ ಸ್ಲಿಮ್​ ಆಗಿ ಕಾಣಲು ಯೋಗ ಮಾಡಿ ಎಂದ ಟ್ರೋಲರ್ಸ್

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ನಟಿಯರ ಬಾಡಿ ಶೇಮಿಂಗ್ ವಿಚಾರಗಳು ಹೆಚ್ಚಾಗುತ್ತಿದೆ. ಸಲ್ಮಾನ್​ ಖಾನ್​, ನಟಿ ರಮ್ಯಾ ಸೇರಿದಂತೆ ಹಲವರು ಈ ಬಗ್ಗೆ ಕಿಡಿಕಾರಿದ್ದರು. ಆ ಬೆನ್ನಲ್ಲೇ ಟ್ರೋಲಿಗರು ಪ್ಯಾರಿಸ್ ಫ್ಯಾಷನ್ ವೀಕ್ 2026 ರಲ್ಲಿ ಮಿಂಚಿದ ಐಶ್ವರ್ಯಾ ರೈ ಅವರ ಫೋಟೋ, ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಅವರೊಂದಿಗೆ ಹೋಲಿಕೆ ಮಾಡಿ, ಅವರಂತೆ ಸ್ಲಿಮ್​ ಆಗಿರುವಂತೆ ಬಾಡಿ ಶೇಮಿಂಗ್ ಮಾಡಲು ಶುರುವಿಟ್ಟುಕೊಂಡಿದ್ದಾರೆ.

ಐಶ್ವರ್ಯಾ ರೈ ಅವರ ಫ್ಯಾನ್ಸ್​ ಅವರನ್ನು ಬ್ಯೂಟಿ, ಕ್ವೀನ್​, ಎವರ್​ ಗ್ರೀನ್​ ರಾಣಿ, 52ರಲ್ಲೂ ಎಂಥಾ ಸೌಂದರ್ಯ ಎನ್ನುತ್ತಿದ್ದಾರೆ. ಆದರೆ, ಇತ್ತ ಟ್ರೋಲಿಗರು ಅವರ ದೇಹದ ನಿಂದನೆಯ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. 50ರಲ್ಲಿ ಶಿಲ್ಪಾ ಶೆಟ್ಟಿ ಹೇಗಿದ್ದಾರೆ ನೋಡಿ, ಐಶ್ವರ್ಯಾ ರೈ ಅವರಿಗೆ 52 ಅವರು ಹೇಗಿದ್ದಾರೆ ನೋಡಿ. ಐಶ್ವರ್ಯಾ ರೈ ಅವರು ಯೋಗಾಭ್ಯಾಸ ಮಾಡೋದಿಲ್ವಾ ಎಂದು ಟೀಕೆ ಮಾಡಲಾಗುತ್ತಿದೆ.

ಪ್ಯಾರಿಸ್​​​ ಫ್ಯಾಷನ್ ವೀಕ್​ನಲ್ಲಿ ರ‍್ಯಾಂಪ್ ವಾಕ್

ನಟಿ ಐಶ್ವರ್ಯಾ ರೈ ಬಚ್ಚನ್ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಲೊರಿಯಲ್​ ಫ್ಯಾಷನ್​ ಶೋನಲ್ಲಿ ಕಪ್ಪು ಗೌನ್​ ತೊಟ್ಟು, ತಲೆಗೆ ವಜ್ರದ ಕಿರೀಟ ತೊಟ್ಟು, ಗೌನ್​ಗೆ ಸ್ಫಟಿಕದ ಹರಳಿದ್ದ ಕೇಪ್​ ತೊಟ್ಟು ರ‍್ಯಾಂಪ್ ​ ವಾಕ್​ ಮಾಡಿದ್ದು, ರಾಣಿ ನಡೆದಂತೆ ಕಂಡಿತ್ತು. ಅವರು ವಾಕ್ ಮಾಡುವಾಗ ಕೇಳಿ ಬಂದ ಐ ಆಮ್​ ಅಲೈವ್​ ಹಾಡು ಮತ್ತಷ್ಟು ಗಮನ ಸೆಳೆಯುವಂತೆ ಮಾಡಿತ್ತು.

'ಎಕ್ಸ್‌ಪ್ರೆಸ್ ಯೂರ್ ವರ್ತ್' ವಾಕ್​ನಲ್ಲಿ ಐಶ್ವರ್ಯಾ ರೈ ಅವರು ವಿಯೋಲಾ ಡೇವಿಸ್, ಕ್ರಿಸ್ಟನ್ ಬೆಲ್, ಸಿಮೋನ್ ಆಶ್ಲೇ, ಇವಾ ಲಾಂಗೋರಿಯಾ ಹಾಗೂ ಕೆಂಡಲ್ ಜೆನ್ನರ್ ಸೇರಿದಂತೆ ಹಲವರೊಂದಿಗೆ ಹೆಜ್ಜೆ ಹಾಕಿದರು. ಅವರು ಇತರ ತಾರೆಗಳೊಂದಿಗೆ ಇದ್ದ ರೀತಿ ಹಲವರನ್ನು ಗಮನ ಸೆಳೆಯುವಂತೆ ಮಾಡಿತ್ತು.

ಐಶ್ವರ್ಯಾ ರೈ ವಿರುದ್ಧ ಬಾಡಿ ಶೇಮಿಂಗ್

'ನೀವು ಮುಖ ಯಾಕೆ ಹಾಳು ಮಾಡಿಕೊಂಡ್ರಿ?', 'ಐಶ್ವರ್ಯಾ ರೈ ಅವರು ಗರ್ಭಿಣಿಯೆ?'. 'ತುಂಬಾ ದಪ್ಪ ಕಾಣುತ್ತಿದ್ದಾರೆ'. ಜೊತೆಗೆ ಶಿಲ್ಪಾ ಶೆಟ್ಟಿ ಅವರ ಐವತ್ತರ ಫೋಟೋ,. ಐಶ್ವರ್ಯಾ ರೈ ಅವರ ಐವತ್ತರಡನೇ ವಯಸ್ಸಿನ ಫೋಟೋ ಹಂಚಿಕೊಂಡು 'ಶಿಲ್ಪಾ ಶೆಟ್ಟಿಯವರಂತೆ ತೆಳ್ಳಗಿರಲು ಐಶ್ವರ್ಯಾ ರೈ ಯೋಗ ಅಥವಾ ವ್ಯಾಯಾಮ ಮಾಡುವುದಿಲ್ಲವೇ?' ಎನ್ನುವ ಕೀಳು ಮಟ್ಟದ ಕಾಮೆಂಟ್‌ಗಳು ವೈರಲ್ ಫೋಟೋಗಳು ಮತ್ತು ವೀಡಿಯೊಗಳ ಕೆಳಗೆ ಕಾಣಿಸಿಕೊಂಡಿವೆ.

ಬದಲಾವಣೆ ಜಗದ ನಿಯಮ

ಒಬ್ಬ ಮಹಿಳೆಯ ದೇಹವು ಕಾಲ ಬದಲಾದಂತೆ ಅದಕ್ಕೆ ಒಗ್ಗಿಕೊಳ್ಳತ್ತೆ, ಪ್ರೌಢಾವಸ್ಥೆ, ಗರ್ಭಧಾರಣೆ, ಪೆರಿಮೆನೋಪಾಸ್ ಮತ್ತು ಮೆನೋಪಾಸ್ ಮೂಲಕ ದೇಹ ಅಂದುಕೊಳ್ಳದಷ್ಟರ ಮಟ್ಟಕ್ಕೆ ಬದಲಾಗತ್ತೆ. ಮಹಿಳೆಯರು 50 ಅಥವಾ 60 ರ ಹರೆಯದಲ್ಲಿದ್ದರೂ 20 ರ ಹರೆಯದಲ್ಲಿದ್ದಂತೆ ಕಾಣಬೇಕು ಎಂದು ನಿರೀಕ್ಷಿಸಲಾಗುತ್ತದೆ. ಕತ್ರಿನಾ ಅವರ ವಿರುದ್ಧವೂ ಇತ್ತೀಚೆಗೆ ಬಾಡಿ ಶೇಮ್ ಮಾಡಲಾಗಿತ್ತು,

ಇದೆಲ್ಲದರ ಮಧ್ಯೆಯೂ ಐಶ್ವರ್ಯಾ ರೈ ಅವರ ಫ್ಯಾನ್ಸ್​ ಮಾತ್ರ ಅವರ ಕೂದಲು ಅಷ್ಟು ದಪ್ಪದಾಗಿ, ದಟ್ಟವಾಗಿ ಇರಲು ಕಾರಣ ಏನು?, ಅವರ ಸ್ಟೈಲಿಂಗ್ ಅಥವಾ ಹೇರ್ ಕಲರ್ ಬಗ್ಗೆ ಕಂಡ ಬಹುಪಾಲು ಅಭಿಮಾನಿಗಳು ಅವರನ್ನು ರಾಣಿ ಎಂದು ಕೊಂಡಾಡಿದ್ದಾರೆ, (ಏಜೆನ್ಸೀಸ್).