ಸಿನಿವಾಣಿ

10 ತಿಂಗಳ ಬಳಿಕ ಆ್ಯಕ್ಟಿವೆಟ್​ ಆಯ್ತು ಸ್ಯಾಂಡಲ್​ವುಡ್​ ನಟಿ ರಮ್ಯಾ ಟ್ವಿಟರ್​ ಖಾತೆ! ಕಾರಣ ಏನು?

manjunathktgns

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ರಮ್ಯ ಸಿನಿಮಾದಿಂದ ದೂರ ಸರಿದು ತುಂಬ ವರ್ಷಗಳೇ ಆದವು. ಸಿನಿಮಾ ಬದಿಗಿಟ್ಟು, ರಾಜಕೀಯದಲ್ಲಿ ತೊಡಗಿಸಿಕೊಂಡರು. ಆಗಾಗ ಕೆಲವೊಂದಿಷ್ಟು ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳಿಗೆ ಆಹಾರವಾಗುತ್ತಿದ್ದರು. ಹೀಗಿರುವಾಗಲೇ ಇತ್ತೀಚಿನ ಕೆಲ ತಿಂಗಳಿಂದ ರಮ್ಯಾ ಅವರ ಸುದ್ದಿಯೇ ಇಲ್ಲ. ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬುದು ಆಪ್ತವಲಯಕ್ಕೆ ಬಿಟ್ಟು ಬಹುತೇಕರಿಗೂ ಗೊತ್ತಿಲ್ಲ. ಜಾಲತಾಣದಿಂದಲೂ ಹಿಂದೆ ಸರಿದು, ನಾಪತ್ತೆಯಾಗಿದ್ದರು. ಇದೀಗ 10 ತಿಂಗಳ ಬಳಿಕ ರಮ್ಯಾ ಟ್ವಿಟರ್​ ಖಾತೆ ಮತ್ತೆ ಆ್ಯಕ್ಟಿವೆಟ್ ಆಗಿದೆ!
ಹೌದು, ಟ್ವಿಟರ್​ನಲ್ಲಿ ದಿವ್ಯಸ್ಪಂದನ ಹೆಸರಲ್ಲಿದ್ದ ಅವರ ಖಾತೆ ಕಳೆದ ಜೂನ್​ ತಿಂಗಳಿಂದ ಹೈಡ್​ ಆಗಿತ್ತು. ಇದೀಗ ಮತ್ತೆ ಸಕ್ರಿಯತೆಗೆ ಮರಳಿದ್ದಾರೆ. ಹೈಡ್​ ಆಗಿದ್ದ ಅವರ ಟ್ವಿಟರ್​ ಅಕೌಂಟ್​ ಗೋಚರವಾಗಿದೆ. ಹಾಗಂತ ಅವರ ಖಾತೆಯಿಂದ ಇನ್ನೂ ಒಂದೇ ಒಂದು ಸಂದೇಶ ಬಂದಿಲ್ಲ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಟ್ವೀಟ್​ ಮಾಡುತ್ತಾರಾ? ಅಥವಾ ಟ್ವಿಟರ್​ನಲ್ಲಿ ಏನೆಲ್ಲ ನಡೆದಿದೆ ಎಂಬುದನ್ನು ನೋಡಲು ಆ್ಯಕ್ಟಿವೆಟ್​ ಮಾಡಿದ್ದಾರಾ? ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ರಮ್ಯಾ ಏನು ಟ್ವಿಟ್ ಮಾಡುತ್ತಾರೆ ಎಂಬುದೇ ಸದ್ಯದ ಕುತೂಹಲ..