ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟಿ ಸಿಂಧು ಲೋಕನಾಥ್ ಮತ್ತೆ ಶಾಲೆಯತ್ತ ಮರಳಿದ್ದಾರೆ. 30 ದಾಟಿದ ಬಳಿಕ 15ರ ಹರೆಯದ ಶಾಲೆಯ ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು ‘ದೇವರ ಆಟ ಬಲ್ಲವರಾರು’. ಈ ಹಿಂದೆ ಸಂಚಾರಿ ವಿಜಯ್ ಜತೆ ‘ಪಿರಂಗಿಪುರ’ ಸಿನಿಮಾ ೋಷಿಸಿದ್ದ ಜನಾರ್ಧನ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಇನ್ನು ಮೂರು ದಿನಗಳ ಶೂಟಿಂಗ್ ಅಷ್ಟೇ ಬಾಕಿಯಿದೆ. ಪಾತ್ರದ ಬಗ್ಗೆ ಸಿಂಧು, ‘ಬಾಲ್ಯದಿಂದಲೇ ಟುರೆಟ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಶಾಲೆಯ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೋಪ ಬಂದಾಗ, ಯಾವುದೇ ಎಮೋಷನ್ಸ್ ಹೆಚ್ಚಾದಾಗ ತೊದಲುವುದು, ಪದೇ ಪದೆ ಕತ್ತು ಅಳ್ಳಾಡಿಸುವುದನ್ನು ಮಾಡುತ್ತಿರುತ್ತೇನೆ. ಚಿತ್ರದಲ್ಲಿ ೈಟ್ಸ್ ಕೂಡ ಮಾಡಿದ್ದೇನೆ. ಮತ್ತೊಂದೆಡೆ ಲವ್‌ಸ್ಟೋರಿಯ ಟ್ರ್ಯಾಕ್ ಇದೆ’ ಎಂದು ಮಾಹಿತಿ ನೀಡುತ್ತಾರೆ.
ಏನಿದು ಟುರೆಟ್ ಸಿಂಡ್ರೋಮ್?
ಟುರೆಟ್ ಸಿಂಡ್ರೋಮ್ ಮಕ್ಕಳಲ್ಲಿ ಪ್ರಾರಂಭವಾಗುವ ಅನುವಂಶಿಕ ನರಮಾನಸಿಕ ಅಸ್ವಸ್ಥತೆ. ದೈಹಿಕ ಅಥವಾ ವಾಚಕ ಸಂಕೋಚನದ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಪ್ರತಿ 1000 ಜನರಲ್ಲಿ 10 ಜನ ಸಂಕೋಚನಾ ಅಸ್ವಸ್ಥೆಗಳನ್ನು ಹೊಂದಿರುತ್ತಾರೆ. ಕಣ್ಣು ಮಿಟುಕಿಸುವುದು, ಕೆಮ್ಮುವುದು, ಗಂಟಲು ಸರಿಪಡಿಸಿಕೊಳ್ಳುವುದು ಹೀಗೆ ಹಲವು ಲಕ್ಷಣಗಳಿರುತ್ತವೆ.
ವಿಭಿನ್ನ ಪಾತ್ರಕ್ಕೆ ಸಿದ್ಧತೆ…
ಸಾಮಾನ್ಯ ಪಾತ್ರಗಳಿಗೆ ಕೆಲವೊಮ್ಮ ಸಾಕಷ್ಟು ಸಿದ್ಧತೆ ಬೇಕಿರುತ್ತದೆ. ಇನ್ನು ಅಪರೂಪದ ಖಾಯಿಲೆಯಿರುವ ಪಾತ್ರದಲ್ಲಿ ನಟಿಸಬೇಕೆಂದರೆ ಸಿದ್ಧತೆ ಬೇಕೇಬೇಕು. ಸಿಂಧು ಕೂಡ, ‘ಕೆಲವು ಸಿನಿಮಾಗಳನ್ನು ನೋಡಿದೆ. ರಾಣಿ ಮುಖರ್ಜಿ ಅಭಿನಯಿಸಿದ್ದ ಬಾಲಿವುಡ್ ಚಿತ್ರ ‘ಹಿಚ್ಕಿ’ಯಲ್ಲು ಅವರು ಇದೇ ರೀತಿ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಪದೇ ಪದೆ ಬಿಕ್ಕಳಿಕೆ ಬರುತ್ತಿರುತ್ತದೆ. ಜತೆಗೆ ಹಲವು ಹಾಲಿವುಡ್ ಸಿನಿಮಾಗಳನ್ನು ವೀಕ್ಷಿಸಿದೆ. ಹಾಗೇ ಟುರೆಟ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ರೋಗಿಗಳ ವಿಡಿಯೋಗಳನ್ನು ನೋಡಿ ಪ್ರಿಪೇರ್ ಆದೆ. ಶೂಟಿಂಗ್‌ಗೂ ಮುನ್ನ ಕೆಲ ದಿನಗಳ ಕಾಲ ೈಟ್ಸ್, ಸಂಭಾಷಣೆ, ಬಾಡಿ ಲಾಂಗ್ವೇಜ್ ಬಗ್ಗೆ ತರಬೇತಿ ಪಡೆದೆ’ ಎಂದು ಹೇಳಿಕೊಳ್ಳುತ್ತಾರೆ.
ಸವಾಲಿನ ಪಾತ್ರ ಮಾತ್ರ ಒಪ್ಪುವೆ
ಇದುರವೆಗೆ 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಸಿಂಧು, ಕೆಲ ವರ್ಷಗಳಿಂದೀಚೆಗೆ ಬೆಳ್ಳಿತೆರೆಯ ಮೇಲೆ ಸ್ವಲ್ಪ ಅಪರೂಪವಾಗಿದ್ದಾರೆ. ಅದಕ್ಕೆ ಕಾರಣ, ‘ನಾನಂತೂ ಕಥೆ ಕೇಳುತ್ತಿದ್ದೇನೆ. ಆದರೆ ಇಷ್ಟವಾಗುತ್ತಿಲ್ಲ. ನನಗೆ ಇಂಥದ್ದೇ ಪಾತ್ರ ಬೇಕು ಅಂತಲ್ಲ. ಆದರೆ, ಚಾಲೆಂಜಿಂಗ್ ಅನ್ನಿಸಬೇಕು, ಪಾತ್ರಕ್ಕೆ ತೂಕವಿರಬೇಕು. ನನ್ನಿಂದ ಈ ಪಾತ್ರ ಸಾಧ್ಯನಾ ಅಂತ ನನಗೇ ಅನ್ನಿಸಬೇಕು. ಹಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ ಸಿಂಧು.
ಸಿಂಧು ಕವಿತೆ ವೈರಲ್
ಕೆಲ ದಿನಗಳಿಂದ ‘ಐ ಯಾಮ್ ಬಾಬಿ ಗರ್ಲ್’ ಇಂಗ್ಲೀಷ್ ಗೀತೆಯಿಂದ ಸ್ಪೂರ್ತಿ ಪಡೆದ ಕಾಮಿಡಿ ಕನ್ನಡ ಹಾಡು ‘ನಾನು ನಂದಿನಿ’ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಿಂದ ಪ್ರೇರಿತರಾಗಿ ಸಿಂಧು ಕೂಡ ಜಾಲತಾಣದಲ್ಲಿ ಹಾಡೊಂದನ್ನು ಬರೆದಿದ್ದು, ಅದು ಕೂಡ ವೈರಲ್ ಆಗಿದೆ. ಆ ಬಗ್ಗೆ, ‘‘ನಾನು ನಂದಿನಿ’ ಹಾಡು ಕೇಳುವಾಗ ಥಟ್ ಅಂತ ನನಗೆ ಈಗಿನ ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಈ ಸಾಲುಗಳು ಹೊಳೆದವು. ಹೀಗಾಗಿ ಬರೆದೆ. ಮುಂದೆ ಕೂಡ ಬರೆಯುವ ಬಯಕೆಯಿದೆ. ನೋಡೋಣ’ ಎಂದು ನಗುತ್ತಾರೆ.