ಸಿನಿವಾಣಿ

ಬಸ್ ಖಾಲಿ ಇತ್ತು ಅಂತ ಅಲ್ಲೂ ವ್ಯಾಯಾಮ ಮಾಡಿದ್ರು ನಟಿ ಶಿಲ್ಪಾ ಶೆಟ್ಟಿ!

ಮುಂಬೈ: ಬಾಲಿವುಡ್​ ಬೆಡಗಿ, ನಟಿ ಶಿಲ್ಪಾ ಶೆಟ್ಟಿ ಆರೋಗ್ಯ-ಆಹಾರ ಕಾಳಜಿಯ ವಿಷಯ ಬಹುತೇಕರಿಗೆ ಗೊತ್ತಿರುವಂಥದ್ದೇ. ನಟಿ ಶಿಲ್ಪಾ ಆಗಾಗ ತಮ್ಮ ಫಿಟ್​ನೆಸ್​ ಹಾಗೂ ಫುಡ್ ಹ್ಯಾಬಿಟ್​ಗಳ ಕುರಿತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಫಿಟ್​ನೆಸ್​ ಕುರಿತು ಪುಸ್ತಕವನ್ನೂ ಬರೆದಿರುವ ನಟಿ ಶಿಲ್ಪಾ, ಅವಕಾಶ ಸಿಕ್ಕಾಗಲೆಲ್ಲ ಉತ್ತಮ ಆಹಾರ ಸೇವನೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತ ಮಾಹಿತಿಗಳನ್ನು ತನ್ನ ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅಂಥದ್ದೇ ಒಂದು ಪ್ರಯತ್ನವನ್ನು ಅವರು ಇಂದು ಮಾಡಿದ್ದಾರೆ.

ಇಂದು ತಾವು ಚಲಿಸುತ್ತಿದ್ದ ಬಸ್​ ಖಾಲಿ ಇತ್ತು ಎಂದು ಅವರು ಅಲ್ಲಿಯೂ ವ್ಯಾಯಾಮ ಮಾಡಿ ಆ ವಿಡಿಯೋ ಹಂಚಿಕೊಂಡಿದ್ದಾರೆ. 'ಇಂದು ಮನೆಗೆ ಮರಳುವ ವೇಳೆ ಬಸ್​ ಖಾಲಿ ಇತ್ತು, ಹೀಗಾಗಿ ಒಂದಷ್ಟು ಪುಷ್​ ಅಪ್ಸ್​, ಪುಲ್​ ಅಪ್ಸ್ ಮಾಡಿದೆ, ಮಿಷನ್ಸ್ ಅಕಂಪ್ಲಿಷ್ಡ್..' ಎಂದು ಅವರು ಹೇಳಿಕೊಂಡಿದ್ದಾರೆ.