ಸಿನಿವಾಣಿ

ಮಿಕ್ಸಿಂಗ್ ಪ್ರೀತಿಯಲ್ಲಿರುವ ಕನ್ನಡತಿ ಸಂಹಿತಾ ವಿನ್ಯಾಗೆ ಶಾರುಖ್​ ಖಾನ್​ನಿಂದ ಬುಲಾವ್​!

ಹರ್ಷವರ್ಧನ್ ಬ್ಯಾಡನೂರು

ಬೆಂಗಳೂರು: ಕರ್ನಾಟಕದ ಹೆಸರಾಂತ ರೂಪದರ್ಶಿ, ಸೂಪರ್​ ಮಾಡೆಲ್​ ಆಗಿಯೂ ಮಿಂಚಿರುವ ಸಂಹಿತಾ ವಿನ್ಯಾ ಕಳೆದ ಕೆಲ ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಬಿಜಿಯಾಗಿದ್ದಾರೆ. ಹಾಲು ತುಪ್ಪ, ವಿಷ್ಣು ಸರ್ಕಲ್​, ಅಮೃತ ಘಳಿಗೆ ಜತೆಗೆ ಏಳೆಂಟು ಕನ್ನಡ ಹಾಗೂ ಐದಾರು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.  ಇದೀಗ ಮಿಕ್ಸಿಂಗ್ ಪ್ರೀತಿ ಎಂಬ ಹೊಸ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೆ ಸಂಹಿತಾ, ಸಿಂಟೋ ಅಭಿನಯದ 'ಬಾರೆ ನನ್ನ ಹೀರೋಯಿನ್, ನಾನೆ ನಿನ್ನ ಶಾರುಖ್ ಖಾನ್' ಎಂಬ ಮಾಸ್ ಪೆಪ್ಪಿ ಹಾಡು ರಿಲೀಸ್​ ಆಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

ಇದುವರೆಗೆ 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿರುವ ಸಂಹಿತಾ ವಿನ್ಯಾಗೆ ಫ್ಯಾಷನ್ ಡಿಸೈನರ್ ಆಗಿ ಫಾರೆವರ್ ನವೀನ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ, ಮಾಡೆಲಿಂಗ್ ಎರಡರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿರುವ ಅಚ್ಚಕನ್ನಡದ ಪ್ರತಿಭೆ ಸಂಹಿತಾ ಮಿಕ್ಸಿಂಗ್ ಪ್ರೀತಿ ಜತೆಗೆ ಮೆಜೆಸ್ಟಿಕ್ 2 ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದು, ಈ ವರ್ಷ ಈ ಎರಡೂ ಸಿನಿಮಾಗಳು ಇದೇ ವರ್ಷ ತೆರೆಗೆ ಬರಲಿವೆ.

ಇದಲ್ಲದೆ ಕನ್ನಡದಲ್ಲಿ ಇನ್ನೂ ಕೆಲ ಚಿತ್ರಗಳ ಲೈನಪ್​ನಲ್ಲಿದ್ದು, ಜತೆಗೆ ತೆಲುಗು ಮತ್ತು ಹಿಂದಿ ಚಿತ್ರರಂಗಗಳಿಂದಲೂ ಅವರಿಗೆ ಆಫರ್​ಗಳು ಬಂದಿದ್ದು, ಮಾತುಕತೆ ಹಂತದಲ್ಲಿವೆ.