ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ಜತೆಗೆ ಬಾಲಿವುಡ್ನಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ. ಈಗಾಗಲೇ ಹಿಂದಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜತೆಗೆ ‘ಮಿಷನ್ ಮಜ್ನು’ ಮತ್ತು ಬಿಗ್ಬಿ ಅಮಿತಾಭ್ ಬಚ್ಚನ್ ಅವರೊಂದಿಗೆ ‘ಗುಡ್ ಬೈ’ ಸಿನಿಮಾದಲ್ಲಿಯೂ ನಟಿಸುವುದನ್ನು ಸ್ವತಃ ರಶ್ಮಿಕಾ ಅಧಿಕೃತ ಮಾಡಿದ್ದರು.
ಇದೀಗ ಸದ್ದಿಲ್ಲದೆ ಬಾಲಿವುಡ್ನಲ್ಲಿ ಮೂರನೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ರಶ್ಮಿಕಾ. ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸುವ ಭರದಲ್ಲಿ ಹಿಂದಿ ಹೊಸ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
ಹಾಗೆಂದ ಮಾತ್ರಕ್ಕೆ ಅದ್ಯಾವ ಸಿನಿಮಾ? ಹೀರೋ ಯಾರು, ನಿರ್ದೇಶಕ ಯಾರು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಬದಲಿಗೆ ಶೀಘ್ರದಲ್ಲಿ ಮೂರನೇ ಚಿತ್ರಕ್ಕೆ ಸಹಿ ಮಾಡಲಿದ್ದೇನೆ ಎಂದಿದ್ದಾರೆ.