ಸಿನಿವಾಣಿ

ನನ್ನ ಬೆಡ್​ರೂಮ್​ ಸೀನ್​ ನೋಡಿ… ಕಹಿ ಘಟನೆ ನೆನೆದು ಕಣ್ಣೀರಿಟ್ಟ ನಿತ್ಯಾನಂದನ ಶಿಷ್ಯೆ ನಟಿ ರಂಜಿತಾ! Actress Ranjitha

ಚೆನ್ನೈ: ಕನ್ನಡ, ಮಲಯಾಳಂ ಹಾಗೂ ತಮಿಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ರಂಜಿತಾ ( Actress Ranjitha ), ಸ್ವಯಂಘೋಷಿತ ದೇವಮಾನವ ನಿತ್ಯಾನಂದ ( Nithyananda ) ನ ಜೊತೆಗೆ ಮಲಗಿದ್ದ ಅಶ್ಲೀಲ ವಿಡಿಯೋ ಹೊರಬಿದ್ದ ಬಳಿಕ ಭಾರಿ ವಿವಾದದಲ್ಲಿ ಸಿಲುಕಿಕೊಂಡರು. 2010ರಲ್ಲಿ ಅಶ್ಲೀಲ ವಿಡಿಯೋ ಪ್ರಕರಣ ಭಾರಿ ಸದ್ದು ಮಾಡಿತ್ತು. ಆದರೆ ಆ ವಿಡಿಯೋದಲ್ಲಿದಿದ್ದು ನಾನಲ್ಲ ಎಂದು ರಂಜಿತಾ ವಾದಿಸಿದ್ದರು. ಅಲ್ಲದೆ, ಪ್ರಸಾರ ಮಾಡಿದ ಚಾನೆಲ್ ವಿರುದ್ಧವೂ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಪರೀಕ್ಷೆ ಮಾಡಿದಾಗ ದೃಶ್ಯಾವಳಿಯಲ್ಲಿ ಇದ್ದಿದ್ದು ರಂಜಿತಾ ಮತ್ತು ನಿತ್ಯಾನಂದ ಎಂಬುದು ಸ್ಪಷ್ಟವಾಯಿತು.

ಇದಾದ ನಂತರ ನಟಿ ರಂಜಿತಾ, ನಿತ್ಯಾನಂದನ ಅಡಿಯಲ್ಲಿ ಸನ್ಯಾಸತ್ವವನ್ನು ಸ್ವೀಕರಿಸುತ್ತಾರೆ. ಅಲ್ಲದೆ, ಇಬ್ಬರೂ ಒಟ್ಟಿಗೆ ವಾಸಿಸುತ್ತಾರೆ. ಪ್ರಸ್ತುತ ರಂಜಿತಾ ಅವರು ಸ್ವಘೋಷಿತ ಹಿಂದು ರಾಷ್ಟ್ರವಾದ ಕೈಲಾಸದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ಆದರೆ, ಈ ಕೈಲಾಶ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಇದು ನಿಗೂಢವಾಗಿಯೇ ಉಳಿದಿದೆ. ಮಾಧ್ಯಮವೊಂದಕ್ಕೆ ನೀಡಿದ ಹಳೆಯ ಸಂದರ್ಶನದಲ್ಲಿ ರಂಜಿತಾ ಅವರು ವಿವಾದದ ಸಂದರ್ಭದ ಘಟನೆಗಳ ಬಗ್ಗೆ ತೆರೆದಿಟ್ಟರು. ಮಾಧ್ಯಮಗಳು ಸೆಕ್ಸ್ ಟೇಪ್ ಮೂಲಕ ತನ್ನ ಘನತೆಯನ್ನು ಅಪಹಾಸ್ಯ ಮಾಡಿದವು ಎಂದು ರಂಜಿತಾ ಹೇಳಿದ್ದರು.

ಅದನ್ನು ಸೆಕ್ಸ್ ಟೇಪ್ ಎಂದು ಹೇಳಿಕೊಂಡು, ಮಾಧ್ಯಮಗಳು ನನ್ನ ಘನತೆಯ ಜೊತೆ ಆಡಿದವು. ಕೆಲವು ಜನರ ಅಸಹ್ಯ ಸಂತೋಷಕ್ಕಾಗಿ ಖಾಸಗಿ ವಿಡಿಯೋವನ್ನು ದೂರದರ್ಶನ ಪರದೆಯಾದ್ಯಂತ ಹಂಚಿಕೊಂಡರು. ನಾನು ಸಾಮಾನ್ಯ ಗೃಹಿಣಿ ಹೊರತು ನಾನೊಬ್ಬ ಶ್ರೀಮಂತ ಮಹಿಳೆ ಎಂದು ತಪ್ಪಾಗಿ ಭಾವಿಸಬೇಡಿ. ನನ್ನ ಕುಟುಂಬವು ಯಾವುದೇ ಬಿಜಿನೆಸ್​ ವಂಶಾವಳಿಯನ್ನು ಹೊಂದಿಲ್ಲ.

ಆ ದಿನಗಳಲ್ಲಿ ವಿವಾದದ ನಂತರ ನಡೆದ ಘಟನೆಗಳಿಂದ ಹೊರಬರಲು ಸಾಧ್ಯವಾಗಲಿಲ್ಲ. ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ, ತನ್ನ ಕುಟುಂಬದ ಸ್ಥಿತಿಯನ್ನು ನೆನೆದು ಹಿಂದೆ ಸರಿದೆ. ನನ್ನ ಕುಟುಂಬದ ಹಿರಿಯರು ನನ್ನನ್ನು ಬಿಟ್ಟು ಬೇರೆ ಯಾರ ಮೇಲೂ ಅವಲಂಬಿತರಾಗಿರಲಿಲ್ಲ ಎಂದು ರಂಜಿತಾ ಹೇಳಿಕೊಂಡಿದ್ದರು.

ಆ ಒಂದು ಘಟನೆಯಿಂದ ನನ್ನ ಜೀವನದಲ್ಲಿ ಉಂಟಾದ ನೋವು ಅಸಹನೀಯ. ಅದರಿಂದಾಗಿ ನನ್ನ ಪತಿಯೂ ನನ್ನನ್ನು ಬಿಟ್ಟು ಹೋದರು. ನನಗೆ ಬಾಲ್ಯದಿಂದಲೂ ದೇವರು ಮತ್ತು ಆಧ್ಯಾತ್ಮಿಕತೆಗೆ ತುಂಬಾ ಒಲವಿದೆ. ನನ್ನ ಕಷ್ಟದ ದಿನಗಳಲ್ಲಿ ಆಧ್ಯಾತ್ಮ ನನಗೆ ಸಹಾಯ ಮಾಡಿತು. ಇಂದಿಗೂ ನಾನದನ್ನು ಅನುಸರಿಸುತ್ತೇನೆ. ಇನ್ನು ಮುಂದೆ ನಿತ್ಯಾನಂದನ ಶಿಷ್ಯೆಯಾಗಿ ಕೈಲಾಸದಲ್ಲಿ ಮುಂದುವರಿಯುವುದಾಗಿ ನಟಿ ರಂಜಿತಾ ಹೇಳಿಕೊಂಡಿದ್ದರು. ಇದೀಗ ಹಳೆಯ ಸಂದರ್ಶನದ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)